ಪೋಸ್ಟ್‌ಗಳು

ಸಿಂಹಾವಲೋಕನಕ್ಕೊಂದು ಸಮಯ

ಇಮೇಜ್
ಮನುಷ್ಯ ಪ್ರಕೃತಿಯ ಇತರ ಜೀವಚರಗಳಂತಲ್ಲ. ಸ್ವಭಾವತಃ ಮಾಹಾಸ್ವಾರ್ಥಿ. ಆತನ ಬೇಕುಗಳಿಗೆ ಅಂತ್ಯವೆಂಬುದೇ ಇಲ್ಲ. ಅದರಲ್ಲೂ ಎಲ್ಲದರಲ್ಲೂ ಹೊಸತರ ಅಪೇಕ್ಷೆ. ಅದು ವಸ್ತುವಾಗಿರಬಹುದು, ಜೀವಿಯಾಗಿರಬಹುದು, ಅಥವಾ ತನ್ನವರೇ ಆಗಿರಬಹುದು. ಹಳತ್ತು, ವಯಸ್ಸಾದವರು ಎಂದರೆ ಏನೋ ಒಂದು ತಾತ್ಸಾರ.  ಹೊಸತು ಬಯಸುವ ನಮಗೆ ಸಂತೋಷದ ವಿಚಾರ ಎಂದರೆ ಹೊಸ ವರ್ಷ ಬಂದಿದೆ! ಹೊಸ ಕ್ಯಾಲೆಂಡರ್‌, ಹೊಸ ಡೈರಿ ಸಿಕ್ಕಿದೆ! 2023 ಎಂದು ಬರೆದೂ ಬರೆದೂ ಬೋರ್‌ಆಗಿದ್ದವರಿಗೆ ಹೊಸ ಸಂಖ್ಯೆ 2024 ಬಂದಿದೆ. ಆಚರಣೆಯೂ ಭರ್ಜರಿಯಾಗಿ ನಡೆದಿದೆ. ಕೆಲವರು ಮಧ್ಯರಾತ್ರಿ ಆಚರಿಸಿದರೆ, ಇನ್ನೂ ಕೆಲವರು ಮದ್ಯದೊಂದಿಗೆ, ಬೀದಿಗಿಳಿದು, ಪಾರ್ಟಿ ಮಾಡಿ, ಪಟಾಕಿ ಒಡೆದು… ಇನ್ನೂ ಹೇಗೇಗೋ ಆಚರಿಸಿದ್ದೇವೆ. ಇವೆಲ್ಲದರ ಮಧ್ಯೆ ಒಂದಷ್ಟು ಸಮಯ ಮಾಡಿಕೊಂಡು ಕಳೆದುಹೋದ ವರ್ಷದಲ್ಲಿ ಕಳೆದುಕೊಂಡದ್ದೇನು, ಪಡೆದುಕೊಂಡದ್ದೇನು ಎಂಬುದರ ಸಿಂಹಾವಲೋಕನ ಮಾಡಿಕೊಳ್ಳೋಣವೇ?  ಕಾಲಾಯ ತಸ್ಮೈ ನಮಃ…ಕಾಲಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಒಳ್ಳೆಯ ಕಾಲವಿರಲಿ, ಕೆಟ್ಟದಿರಲಿ…ಯಾರಿಗೂ ಕಾಯುವುದಿಲ್ಲ. ಸಂತೋಷವಿರಲಿ, ದುಃಖವಿರಲಿ ಯಾವುದೂ ಇಲ್ಲಿ ಶಾಶ್ವತವಲ್ಲ. ಆದರೆ ಅನುಭವ ಮಾತ್ರ ನಮಗೆ ಸಿಗುವ ಲಾಭ. ಕಳೆದ ವರ್ಷ ನಾವೆಲ್ಲರೂ ಅದೆಷ್ಟೋ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಎಷ್ಟೋ ಜನರನ್ನು ಭೇಟಿಯಾಗಿದ್ದೇವೆ. ಅತ್ಯಂತ ಸಂತೋಷ, ಹೃದಯವೇ ಬಿರಿಯುವಷ್ಟು ದುಃಖ ಎರಡನ್ನೂ ಅನುಭವಿಸಿದ್ದೇವೆ. ಅದೆಲ್ಲಾ ಕ...

ವಿದಾಯ ಕೂಟ…ಭಾವನೆಗಳ ಹೊಯ್ದಾಟ…

ಇಮೇಜ್
ಕಾಲೇಜು ಬಿಟ್ಟು ವಾರದ ಮೇಲಾಯಿತು. ವಿದ್ಯಾರ್ಥಿಗಳು ಬದಲಾವಣೆಗೆ ಒಗ್ಗಿಕೊಂಡಿರುತ್ತಾರೆ. ಭಾವನೆಗಳ ಭರದಲ್ಲಿ ವಿದಾಯ ಕೂಟದ ಮಾತಾಡಿರುತ್ತಾರೆ ಅಂದುಕೊಂಡೇ ಹೋಗಿದ್ದೆ. ಆದರೆ ನಿಜಸ್ಥಿತಿ ಹಾಗಿರಲಿಲ್ಲ… ಪ್ರೀತಿಯ ವಿದ್ಯಾರ್ಥಿಗಳು (ಮಕ್ಕಳು) ತಮ್ಮ ಶಿಕ್ಷಕನಿಗೆ ವಿಶೇಷವಾಗಿ ವಿದಾಯ ಹೇಳಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು! ಕುಟುಂಬ ಸಮೇತ ಬನ್ನಿ ಎಂದು ಹೇಳಿದಾಗಲೂ ನನಗದು ಹೊಳೆದಿರಲಿಲ್ಲ. ಸಂತೋಷವೇ ಆದರೂ, ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲೇಬೇಕಾದ ಸಂಕಟ ನನಗೆ. ನನಗಾಗಿ ಇಟ್ಟಿದ್ದ ಕುರ್ಚಿಯಲ್ಲಿ ಮೌನವಾಗಿ ಕುಳಿತೆ. ಬಲಭಾಗದಲ್ಲಿದ್ದ ಮನದನ್ನೆ ಅಶ್ವಿನಿಯ ಸ್ಥಿತಿಯೂ ಭಿನ್ನವಾಗಿರಲಿಲ್ಲ, ಮಗಳು ಪರ್ಣಿಕಾ ಅವಳದೇ ಪ್ರಪಂಚದಲ್ಲಿದ್ದಳು. ವಿದ್ಯಾರ್ಥಿಗಳ ಮುಖದಲ್ಲಿ ವಿಷಣ್ಣ ನಗೆಯಿತ್ತು.  ವಿದ್ಯಾರ್ಥಿ ಅಕ್ಷಿತ್‌ ಕಾರ್ಯಕ್ರಮದ ಆಶಯಗಳನ್ನು ನನಗೂ ಅರ್ಥವಾಗುವಂತೆ ತಿಳಿಸಿದ್ದರು. ವಿಭಾಗದ ಮುಖ್ಯಸ್ಥರ ಪ್ರೀತಿಯ ಮನದಾಳದ ಮಾತುಗಳನ್ನು ಕೇಳಿ ಸಂತೋಷವಾಯಿತು. ಸಾರ್ಥಕತೆಯ ಭಾವನೆ ಮೂಡಿತು. ವಿದ್ಯಾರ್ಥಿಗಳ ಸರದಿ… ಕೆಲವರು ಮಾತನಾಡಿದರು… ಹಲವರಿಗೆ ಆಗಲಿಲ್ಲ. ಕೆಲವರು ಮಾತನಾಡಲು ಪ್ರಯತ್ನಿಸಿ ತಡವರಿಸಿದರು. ಇನ್ನೂ ಕೆಲವರು ನೆನಪುಗಳನ್ನು ಹೆಕ್ಕಿ ಅಂದುಕೊಂಡದ್ದಕ್ಕಿಂತ ಸ್ವಲ್ಪ ಹೆಚ್ಚೇ ಮಾತನಾಡಿದರು. ಬಳಿಕ ನನ್ನ ಸರದಿ…!   ತುಂಬಾ ವಿಷಯಗಳನ್ನು ಹೇಳಬೇಕೆಂದುಕೊಂಡಿದ್ದೆ. ಏನು, ಹೇಗೆ, ಏಕೆ… ಯಾವುದೂ ಹೊಳೆಯಲಿಲ್ಲ. ಒಂದು ನೋಟ್‌ಮಾಡಿ...

ಬದುಕೆಂಬ ಬುಗುರಿಗೆ ಶಿವನೆಂಬ ಚಾಟಿ…

ಇಮೇಜ್
ಹಿಡಿಯಲು ಸಾಧ್ಯವಿಲ್ಲವೇನೋ ಎಂಬಷ್ಟು ವೇಗದಲ್ಲಿ ಕಾಲಚಕ್ರ ಓಡುತ್ತಿದೆ. ಅದರ ಹಿಂದೆ ಓಡುವ ಭರದಲ್ಲಿ ನಾವು ಯಾವುದನ್ನೂ ಗಮನಿಸುತ್ತಿಲ್ಲ. ದಿನಕ್ಕೆ 24 ಗಂಟೆಗಳೂ ಸಾಲುತ್ತಿಲ್ಲವೇನೋ ಎಂಬಂತೆ ಓಡುತ್ತಿದ್ದೇವೆ. ಹಿಂದಕ್ಕೂ ತಿರುಗದೆ, ಮುಂದೆಯೂ ನೋಡದೆ ನಮ್ಮವರನ್ನು, ನಮ್ಮನ್ನೂ ಬಿಟ್ಟು!  ಹಾಗಾದರೆ ನಾವು ನಿಜಕ್ಕೂ ಏನು ಮಾಡುತ್ತಿದ್ದೇವೆ? ಕೆಲವರು ನಾವ್ಯಾರಿಗೂ ಕಮ್ಮಿಯಿಲ್ಲದಂತೆ ಬದುಕಬೇಕು ಎನ್ನುತ್ತಾರೆ, ಇನ್ನೂ ಕೆಲವರು ಬದುಕಿ ಸಾಧಿಸಬೇಕು ಎನ್ನುತ್ತೇವೆ. ಅದೆಂತಾ ಬದುಕು, ಎಂತಹ ಸಾಧನೆ? ಆಧುನಿಕತೆ ಸೃಷ್ಟಿಸಿರುವ ಭ್ರಮಾಲೋಕದಲ್ಲಿ ಬದುಕುತ್ತಿರುವ ನಾವು ಹೇಳುವ ನೆಪಗಳೇ ಇವು?! ಸತ್ಯವನ್ನು ಕೇಳಿಸಿಕೊಳ್ಳಲು, ಒಪ್ಪಿಕೊಳ್ಳಲು ನಾವ್ಯಾರೂ ಸಿದ್ಧರಿಲ್ಲ! ಕಾಲಚಕ್ರದ ಹಿಂದೆ ಗೊತ್ತುಗುರಿಯಲ್ಲದೆ ಓಡುತ್ತಿದ್ದೇವೆ ಎಂಬ ಸತ್ಯ ನಮಗೀಗ ಬೇಡ. ವಿಜ್ಞಾನ- ತಂತ್ರಜ್ಞಾನದಲ್ಲಿ ಆದ ಆಗಾಧ ಬೆಳವಣಿಗೆ ನಮ್ಮ ಜೀವನಶೈಲಿಯನ್ನು ಬದಲಾಯಿಸಿರುವುದೇನೋ ಹೌದು. ಎಲ್ಲರ ತಿಳುವಳಿಕೆ, ಅವಕಾಶಗಳು ಹೆಚ್ಚಿವೆ. ಸ್ಪರ್ಧೆಯೂ ಹೆಚ್ಚಿದೆ. ಹಣ, ಹೆಸರು ಸಂಪಾದಿಸುವ ಆಸೆ ಎಲ್ಲರಿಗೂ ಇದೆ. ಅವನಂತೆ ನಾನಾಗಬೇಕು ಎಂಬ ಹುಚ್ಚು ಓಟದಲ್ಲಿ ತಾನು, ತನ್ನವರು ಗಣನೆಗೆ ಸಿಗುತ್ತಿಲ್ಲ.  ಅರ್ಥವಿಲ್ಲದ ಕನಸನ್ನು ಬೆನ್ನಟ್ಟುವವರಿಗೆ ಸಂಬಂಧಗಳು ಬೇಡವಾಗುತ್ತವೆ, ಇಲ್ಲವೇ ಸಿಗದಾಗುತ್ತವೆ. ಮುಗ್ಧತೆ, ಸೂಕ್ಷ್ಮತೆ ಮರೆಯಾಗಿ ಅಂಟಿಕೊಳ್ಳುವ ಅಹಂಕಾರ ನಮ್ಮನ್ನು ಎಲ್ಲರೂ ಇದ್ದರೂ ಒಂ...

ಮಿಡಿವ ಹೃದಯ ಜೊತೆಗಿರಲು ಬದುಕು ಬಲು ಸುಂದರ…

ಇಮೇಜ್
        ನಿನ್ನನ್ನು ಪ್ರಿಯೆ ಎಂದರೆ ಸಾಕೇ… ನನ್ನವಳು ಎಂದರೆ ಸ್ವಾರ್ಥವಾದೀತೇ? ಹಾಗೊಂದು ಯೋಚನೆ ಮನಸ್ಸಿಗೆ ಬರಲು ಕಾರಣವಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ನೀನು ನನ್ನನ್ನು ಆವರಿಸಿಕೊಂಡಿರುವ ರೀತಿ, ಪಾತ್ರ ಬದಲಾದರೂ ನಮ್ಮ ಪ್ರೀತಿಗೆ ಎಲ್ಲೂ ಮಂಕು ಕವಿಯದಂತೆ ನೋಡಿಕೊಂಡಿರುವ ರೀತಿ ಒಮ್ಮೊಮ್ಮೆ ನನ್ನಲ್ಲಿ ವಿಸ್ಮಯ ಹುಟ್ಟಿಸುತ್ತದೆ!  ಅಷ್ಟಕ್ಕೂ ನಮ್ಮ ಈ ಮಧುರ ಬಂಧದ ಆರಂಭವೂ ಒಂದು ವಿಸ್ಮಯವೇ ಅಲ್ಲವೇ? ಎಲ್ಲೋ ಇದ್ದ ನಾನು, ಇನ್ನೆಲ್ಲೋ ಇದ್ದ ನಿನ್ನನ್ನು ಸಂಧಿಸುವಂತಾಗಿದ್ದು, ಅದು ಗೆಳೆತನವಾದದ್ದು, ನನಗೇ ಗೊತ್ತಿಲ್ಲದೆ ನನ್ನೊಳಗೆ ಪ್ರೀತಿಯಾಗಿ ಬೆಳದದ್ದು… ಕಾಡಿಸಿದ ನಂತರವಷ್ಟೇ ಅದನ್ನು ನೀನು ಒಪ್ಪಿಕೊಂಡದ್ದು ಇದನ್ನೆಲ್ಲಾ ನಾನು ಮರೆಯಲು ಸಾಧ್ಯವೇ? ಋಣಾನುಬಂಧ ಎಂದರೆ ಇದೇ ಇರಬೇಕು… ಹೌದು, ನಮ್ಮಿಬ್ಬರಿಗೂ ಇದು ಹೂವಿನ ಹಾಸಾಗಿರಲಿಲ್ಲ. ಮನುಷ್ಯ ಸಹಜ ಕಷ್ಟ – ನಷ್ಟಗಳು, ಅನಿರೀಕ್ಷಿತ ಆಘಾತಗಳು ನಮ್ಮನ್ನೂ ಬಿಟ್ಟಿಲ್ಲ. ಆದರೆ ಕಷ್ಟಗಳು ನಮ್ಮ ಸಂಬಂಧವನ್ನು ಗಟ್ಟಿಯಾಗಿಸಿವೆ. ಜೊತೆಯಾಗಿ ಇನ್ನಷ್ಟು ದೂರ ಸಾಗುವ ಭರವಸೆ ಮೂಡಿಸಿವೆ. ʼಪ್ರೀತಿʼ ಎಂಬ ಅಡಿಪಾಯದ ಮೇಲೆ ನಾವು ಬದುಕಿನ ಸೌಧವನ್ನು ಯಶಸ್ವಿಯಾಗಿ ಕಟ್ಟಿದ್ದೇವೆ. ಈ ಸೌಧ ಹಳತಾದೀತೇ ವಿನಃ ಎಂದೂ ಬೀಳಲಾರದು. ಏಕೆಂದರೆ ನಾವೀಗ ಜೊತೆಯಾಗಿ ಸಾಕಷ್ಟು ದೂರ ಕ್ರಮಿಸಿದ್ದೇವೆ.  ನಿಜಕ್ಕೂ ಈ ಹನ್ನೊಂದು ವರ್ಷಗಳಲ್ಲಿ ಬದುಕು ಬಹಳಷ್ಟು ಬದಲಾಗಿದೆ. ನಾನು ಬದ...

ಎಸ್ಸೆಸೆಲ್ಸಿ ಬಳಿಕ ಮುಂದೇನು?

ಇಮೇಜ್
 

ಖುಷಿಯಾಗಿರೋದೂ ಒಂದು ಸೀರಿಯಸ್‌ ವಿಷಯ!

ಇಮೇಜ್
ಖುಷಿಯಾಗಿರೋಕೆ ಮಹೂರ್ತ ನೋಡ್ಬೇಕಾ… ಮೊಬೈಲ್‌ನಲ್ಲಿ ʼ ಬಿ ಹ್ಯಾಪಿ ʼ ಅಂತ ಟೈಪಿಸಿ ಇಮೋಜಿ ಅಂಟಿಸಿ ಮೆಸೇಜ್‌ ಕಳ್ಸೋದು ಕಷ್ಟದ ಕೆಲ್ಸಾನಾ… ಒಂದು ವಾಯ್ಸ್‌ ಮೆಸೇಜ್‌- ವೀಡಿಯೋ ಕಾಲ್‌ ಮಾಡೋಕೆ ಎಷ್ಟ್‌ ಟೈಮ್‌ ಬೇಕು. ಎಂಜಾಯ್‌ ಮಾಡೋಕೆ ರೀಲ್ಸ್‌ ಇಲ್ವಾ... ಅಂತೆಲ್ಲಾ ಅನ್ಸೋದು ತಪ್ಪೇನಲ್ಲ… ಆದ್ರೆ ಖುಷೀನೂ ಈಗ ಸೀರಿಯಸ್‌ ವಿಷ್ಯ, ಅದಕ್ಕೂ ಒಂದು ದಿನ ಇದೆ ಅನ್ನೋದು ನಿಮಗೆ ಗೊತ್ತಾ?! ಇವತ್ತು ನಿನ್ನೆಯಲ್ಲ, ಸುಮಾರು ಹನ್ನೆರಡು ವರ್ಷಗಳ ಹಿಂದೆ, ಅಂದ್ರೆ 2011 ರಲ್ಲೇ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲೇ ʼ ಸಂತೋಷ ಮನುಷ್ಯನ ಮೂಲಭೂತ ಗುರಿಯಾಗಿರಬೇಕು ʼ ಎಂದು ನಿರ್ಣಯ ಪಾಸ್‌ ಮಾಡಲಾಗಿದೆ. ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ದೇಶಗಳೂ ಸರ್ವಾನುಮತದಿಂದ ಈ ನಿರ್ಣಯವನ್ನು ಒಪ್ಪಿಕೊಂಡಿವೆ. ಇಷ್ಟೇ ಅಲ್ಲಾ ಕೇಳಿ, 2013 ರಿಂದ ಪ್ರತಿ ವರ್ಷ ಮಾರ್ಚ್‌ 20 ನ್ನು ಅಂತಾರಾಷ್ಟ್ರೀಯ ಖುಷಿಯ ದಿನ ಅಂತ ಆಚರಿಸಲಾಗ್ತಿದೆ! ಖುಷಿಯ ವಿಚಾರ ಇಷ್ಟಕ್ಕೇ ನಿಲ್ಲಲ್ಲ. ನಾವೆಲ್ಲಾ ಖುಷಿಯಾಗಿರ್ಬೇಕು, ಚೆನ್ನಾಗಿರ್ಬೇಕು ಅಂತ ವಿಶ್ವಸಂಸ್ಥೆ 17 ಅಂಶಗಳ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಪ್ರಕಟಿಸಿದೆ. ಪುಟಾಣಿ ದೇಶ ಭೂತಾನ್‌ ಅಂತೂ ಈ ವಿಷ್ಯದಲ್ಲಿ ಎಷ್ಟು ಸೀರಿಯಸ್ಸಾಗಿದೆ ಅಂದ್ರೆ, ಅದು 1970 ರಿಂದಲೇ ತನ್ನ ದೇಶದ ಜಿಡಿಪಿ ಗಿಂತಲೂ ತನ್ನ ಪ್ರಜೆಗಳ ಸಂತೋಷಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಿದೆ! ಹೌದು, ಸಂತೋಷ ಅನ್ನೋದೂ ಈಗ ಗಂಭೀರ ವಿಷ್ಯ. ಯಾರನ್ನಾದ್ರೂ ...

ಭವಿಷ್ಯದ ಕರಿಛಾಯೆ ಮತ್ತು ಶಿಕ್ಷಕನೆಂಬ ಆಶಾಕಿರಣ

ಇಮೇಜ್
  “ ಅತ್ಯುತ್ತಮ ಶಿಕ್ಷಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವನಲ್ಲ ಬದಲಾಗಿ ಉತ್ತರ ಕಂಡುಕೊಳ್ಳಬೇಕೆಂಬ ಹಂಬಲದ ಕಿಡಿಯನ್ನು ನಿಮ್ಮೊಳಗೆ ಹೊತ್ತಿಸುವವನು ” …. ಈ ಮಾತು ಶಿಕ್ಷಕನೆಂದರೆ ಯಾರು ಅಥವಾ ಶಿಕ್ಷಕ ಹೇಗಿರಬೇಕು ಎಂಬುದನ್ನು ಅದೆಷ್ಟು ಸೂಚ್ಯವಾಗಿ ಹೇಳುತ್ತದೆ,  ಅಲ್ಲವೇ…   ಮಾಜಿ ರಾಷ್ಟ್ರಪತಿ, ‘ಭಾರತರತ್ನʼ ದಿವಂಗತ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಗುರುಗಳಾದ ಪ್ರೊ. ಶ್ರೀನಿವಾಸನ್‌ ಅವರನ್ನು ವಿಶೇಷವಾಗಿ ಹೆಸರಿಸುತ್ತಾರೆ. ಮದ್ರಾಸು ಎಂಐಟಿಯಲ್ಲಿ ಕಲಾಂ ಮತ್ತವರ ತಂಡಕ್ಕೆ ಆಕಾಶಕಾಯ (ಏರೋಡೈನಾಮಿಕ್ಸ್‌) ವಿನ್ಯಾಸ ರಚಿಸಲು ಹೇಳಿದ್ದ ಪ್ರೊಫೆಸರ್‌, ಕಷ್ಟಪಟ್ಟು ತಯಾರಿಸಿದ ವಿನ್ಯಾಸವನ್ನು ನೋಡಿದ ಕೂಡಲೆ ʼಕೆಟ್ಟದಾಗಿದೆ, ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲʼ ಎಂದುಬಿಟ್ಟರಂತೆ. ಅಲ್ಲದೆ ಮೂರು ದಿನದಲ್ಲಿ  ಮರುವಿನ್ಯಾಸ ರಚಿಸಿ ಒಪ್ಪಿಸಲು ಕಟ್ಟಾಜ್ಞೆ ಹೊರಡಿಸುತ್ತಾರೆ. ಪ್ರಾಧ್ಯಾಪಕರಿಂದ ಯಾವತ್ತು ಇಂತಹ ಮಾತು ಕೇಳದ ಕಲಾಂ ಕಂಗಾಲಾದರು. ಆದರೆ ಹಗಲಿರುಳು ಕೆಲಸ ಮಾಡಿ ತಯಾರಿಸಿದ ವಿನ್ಯಾಸವನ್ನು ನೋಡಿ ಬಾಯ್ತುಂಬ ಹೊಗಳಿದ ಗುರುಗಳು, ʼನಿನಗೆ ನನ್ನಿಂದ ಬೇಸರವಾಗುತ್ತದೆ ಎಂದು ತಿಳಿದಿತ್ತು. ಆದರೆ ನೀನು ಅದಕ್ಕಿಂತಲೂ ಉತ್ತಮ ವಿನ್ಯಾಸ ಸಿದ್ಧಪಡಿಸುತ್ತೀಯ ಎಂಬ ವಿಶ್ವಾಸ ನನಗಿತ್ತು, ʼ ಎಂದರಂತೆ! ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ಶಿಕ್ಷಕನೊಬ್ಬನ ನೆರಳು ಕಾಣಸಿಗುತ್ತದೆ. ...