ಪೋಸ್ಟ್‌ಗಳು

ಮುಂದೆ ಹೇಗೆ ಜೀವನ….?!

ಇಮೇಜ್
  ಹೊಸ ವರ್ಷದ ಕ್ಯಾಲೆಂಡರ್‌ ಈಗಷ್ಟೇ ತೂಗುಹಾಕಿದ್ದೇವೆ. ಕ್ಯಾಲೆಂಡರ್‌ ಮೇಲೆ ಪೆನ್ನಿನ ಗುರುತುಗಳು ಇನ್ನೂ ಮೂಡಿಲ್ಲ. ನಮ್ಮ ಭೂತ, ಅದಕ್ಕೂ ಹೆಚ್ಚಾಗಿ ಭವಿಷ್ಯದ ಬಗ್ಗೆ ಯೋಚಿಸಲು ಇದು ಸಕಾಲ. ಅದರಿಂದ ಒಂಚೂರು ಪ್ರಯೋಜನವಾಗಬಹುದೇನೋ?!   ಮನುಷ್ಯನಿಗೆ ಈಗ ಏನುಂಟು, ಏನಿಲ್ಲ ಹೇಳಿ! ಕರೆಂಟೇ ತಲುಪದ ಊರುಗಳೇ ಇದ್ದ ಜಾಗದಲ್ಲಿ ಈಗ ಮೊಬೈಲ್‌ ನೆಟ್‌ವರ್ಕ್‌ ಇಲ್ಲದಿರುವ ಹಳ್ಳಿಗಳೇ ಕಡಿಮೆ. ಸೈಕಲ್‌ ಎಂದರೇನೇ ಕಣ್ಣಗಲಿಸಿ ನೋಡುತ್ತಿದ್ದ ನಾವೀಗ ಕಾರ್‌ ಬಂದರೂ ಕೇರ್‌ ಮಾಡುವುದಿಲ್ಲ. ಫೋನಿದ್ದರೆ ತಿಂಡಿ ಊಟಕ್ಕೆ ಯಾರ ಹಂಗಿಲ್ಲ. ಬರೆ ಎಂದರೆ ಬರೆಯುವ, ಓದು ಎಂದರೆ ಓದುವ ಎಐ ತಂತ್ರಜ್ಞಾನ. ಎಲ್ಲರೂ ಇಷ್ಟೊಂದು ಅದೃಷ್ಟವಂತರಲ್ಲದಿದ್ದರೂ, ಒಟ್ಟಾರೆಯಾಗಿ ಮನುಷ್ಯ ತಾನೊಂದು ಬುದ್ಧಿವಂತ ಪ್ರಾಣಿ ಎಂದು ಸಾಬೀತುಪಡಿಸಿದ್ದಾನೆ!   ವೈದ್ಯಕೀಯ ಕ್ಷೇತ್ರದಲ್ಲಿ ಅದ್ಭುತ ಪ್ರಗತಿ , ಶಿಕ್ಷಣದಲ್ಲಿ ಡಿಜಿಟಲ್ ಕ್ರಾಂತಿ , ಸಂವಹನದಲ್ಲಿ ಮಿತಿಯಿಲ್ಲದ ವೇಗ - ಇದೆಲ್ಲವೂ ನಮ್ಮ ಜೀವನವನ್ನು ಹಿಂದೆಂದಿಗಿಂತಲೂ ಸುಲಭವಾಗಿಸಿದೆ. ಪ್ರತಿ ಸಮಸ್ಯೆಗೂ ಒಂದು ಆ್ಯಪ್ , ಪ್ರತಿ ಪ್ರಶ್ನೆಗೂ ಒಂದು ಸರ್ಚ್ ಎಂಜಿನ್ … ಹೀಗೆ ಈ ಕಣ್ಣಿಂದ ಇನ್ನೂ ಏನೇನೆಲ್ಲಾ ನೋಡುತ್ತೇವೋ! ಆದರೂ, ಹೊರಗೆಲ್ಲಾ ತಳುಕು-ಬಳುಕು, ಒಳಗೆ ಬರೀ ಹುಳುಕು ಎಂಬ ಮಾತು ಪೂರ್ತಿ ಅಲ್ಲವೆಂದಾದರೂ ಒಂದಷ್ಟು ಮಟ್ಟಿಗೆ ಸತ್ಯ. ಈಗ ಕಳೆದುಕೊಳ್ಳುತ್ತಿರುವುದರ ಬಗ್ಗೆ ನಾವು ಜಾಣ ಕುರುಡು ಪ್ರದರ್ಶಿಸುತ...

ಅರಿವಿನಾಚೆಯ ಇರುವು: ಮಾನಸಿಕ ಆರೋಗ್ಯದ ಮಹತ್ವ

ಇಮೇಜ್
ರಜಾ ದಿನ ಬೆಳ್ಳಂಬೆಳಗ್ಗೆ ಎದ್ದು ಆಟದ ಮೈದಾನದಲ್ಲಿ ಆಡುವ ಮಕ್ಕಳ ಕಣ್ಣಲ್ಲಿ ಅದೆಂಥಾ ಉತ್ಸಾಹ. ಅವರ ನಗು, ಗದ್ದಲ, ತುಂಟಾಟವನ್ನು ನೋಡಿದಾಗಲೇ ಮನಸ್ಸಿಗೆ ಆಹ್ಲಾದವಾಗುತ್ತದೆ. ಅದೇ, ಶಾಲೆಯಿಂದ ಮರಳಿದ ತಕ್ಷಣ ಕೈಯಲ್ಲಿ ಮೊಬೈಲ್ ಫೋನ್‌ ಹಿಡಿದು ಕುಳಿತುಕೊಳ್ಳುವ ಮಕ್ಕಳನ್ನೊಮ್ಮೆ ನೋಡಿ. ಆ ಸಂಭ್ರಮ ಇಲ್ಲಿ ಕಾಣಿಸುವುದಿಲ್ಲ. ಅವರು ಕುಳಿತಿದ್ದರೂ ಸುಸ್ತಾದಂತೆ ಕಾಣುತ್ತಾರೆ. ಇದು ನಮ್ಮ ಮಾನಸಿಕ ಸ್ಥಿತಿಯ ಪ್ರಾಮುಖ್ಯತೆಯನ್ನು ತೋರಿಸುತ್ತದೆ. ಮಾನಸಿಕ ಆರೋಗ್ಯ ಎಂದಾಕ್ಷಣ ಅಂದು ಮಾನಸಿಕ ಕಾಯಿಲೆ ಇಲ್ಲದಿರುವುದು ಎಂದಲ್ಲ. ಅದು ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮ ಕ್ಕೆ ಸಂಬಂಧಿಸಿದ ವಿಚಾರ. ನಾವು ಹೆಚ್ಚಾಗಿ ದೈಹಿಕ ಆರೋಗ್ಯದ ಬಗ್ಗೆ ಯೋಚಿಸುತ್ತೇವೆ. ಆದರೆ, ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ ಎರಡೂ ನಮಗೆ ಮುಖ್ಯ. ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯದ ಬಗ್ಗೆಯೂ ನಾವು ಗಮನ ಹರಿಸಬೇಕು. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಆತ್ಮವಿಶ್ವಾಸ , ಸಂತೋಷ ಮತ್ತು ಯಶಸ್ಸಿಗೆ ಅಡಿಪಾಯ. ಆಧುನಿಕ ಜೀವನಶೈಲಿಯಲ್ಲಿ ಮಾನಸಿಕ ಆರೋಗ್ಯ ಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ವೆ .   ಮಾನಸಿಕ ಆರೋಗ್ಯ ಎಂದರೇನು ? ಮಾನಸಿಕ ಆರೋಗ್ಯ ಎಂದರೆ ನಮ್ಮ ದೈನಂದಿನ ಜೀವನದ ಸವಾಲುಗಳನ್ನು ಎದುರಿಸಲು , ಒತ್ತಡವನ್ನು ನಿರ್ವಹಿಸಲು , ಸಮಾಜದಲ್ಲಿ ಸಹಜವಾಗಿ ಭಾ ಎಲ್ಲರೊಂದಿಗೆ ಬೆರೆಯಲು ಮತ್ತು ನಮ್ಮ ಸಾಮರ್ಥ್ಯಗಳನ್ನು ಅರಿತುಕೊಳ್...

ಧರ್ಮಗಳ ಸಂಗಮವೆಂಬ ವಿಸ್ಮಯ ಈ ಧರ್ಮಸ್ಥಳ!

ಇಮೇಜ್
  ಮಲೆನಾಡಿನ ತಪ್ಪಲಲ್ಲಿ , ಕರಾವಳಿಯ ಮಡಿಲಲ್ಲಿ , ಪವಿತ್ರ ನೇತ್ರಾವತಿ ನದಿಯ ತಟದಲ್ಲಿರುವ ಸ್ವಾಮಿ ಮಂಜುನಾಥನ ಸನ್ನಿಧಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡದವರು ಅಪರೂಪಕ್ಕೆ ಸಿಕ್ಕಿಯಾರು. ಸುಮಾರು 800 ವರ್ಷಗಳ ಇತಿಹಾಸ ಹೊಂದಿರುವ ಧರ್ಮಸ್ಥಳ ಸಹಜವಾಗಿಯೇ ಹಿಂದೂಗಳ ಧಾರ್ಮಿಕ ಕ್ಷೇತ್ರ. ಆದರೆ ಅಷ್ಟಕ್ಕೇ ಸೀಮಿತವಾಗದೆ ಅದೊಂದು ಸರ್ವಧರ್ಮಗಳ ಸಂಗಮ ಕ್ಷೇತ್ರ ಎನಿಸಿಕೊಂಡಿದೆ. ಧರ್ಮಸ್ಥಳದ ಪ್ರಮುಖ ಆರಾಧ್ಯ ದೈವ ಶ್ರೀ ಮಂಜುನಾಥ ಅಂದರೆ ಶಿವ. ಸಹಜವಾಗಿಯೇ ಅಲ್ಲಿ ಶೈವ ಪರಂಪರೆಗೆ ಆದ್ಯತೆಯಿದೆ. ಕುತೂಹಲಕಾರಿ ಅಂಶವೆಂದರೆ , 16 ನೇ ಶತಮಾನದಲ್ಲಿ ಧರ್ಮಸ್ಥಳದ ಶಿವಲಿಂಗವನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ , ಕುಡುಮ ಕ್ಷೇತ್ರಕ್ಕೆ ʼ ಧರ್ಮಸ್ಥಳ ʼ ವೆಂದು ನಾಮಕರಣ ಮಾಡಿದವರು ವೈಷ್ಣವ ಪರಂಪರೆಯನ್ನು ಅನುಸರಿಸುವ ಉಡುಪಿಯ ಶ್ರೀ ವಾದಿರಾಜ ಶ್ರೀಗಳು. ಮಧ್ವ ಪರಂಪರೆಯ ವೈಷ್ಣವ ಬ್ರಾಹ್ಮಣರು ಮಂಜುನಾಥ ಸ್ವಾಮಿಗೆ ಪೂಜೆ ಸಲ್ಲಿಸುತ್ತಿದ್ದಾರೆ. ಶ್ರೀ ಕ್ಷೇತ್ರದ ಪೆರ್ಗಡೆ (ಹೆಗ್ಗಡೆ) ಕುಟುಂಬದ ಮೂಲ ಮನೆ ʼ ನೆಲ್ಯಾಡಿಬೀಡು ʼ ವಿನಲ್ಲಿ ನೆಲೆಸಿರುವ ಮೂಲ ನಾಲ್ಕು ಧರ್ಮ ದೈವಗಳಾದ ಕಾಲರಾಹು , ಕಾಲರ್ಕಾಯಿ , ಕುಮಾರಸ್ವಾಮಿ ಮತ್ತು ಕನ್ಯಾಕುಮಾರಿಯ ಆದೇಶದಂತೆ ಈ ವ್ಯವಸ್ಥೆ ಜಾರಿಯಲ್ಲಿದೆ ಎಂದು ನಂಬಲಾಗಿದೆ. ಇದರೊಂದಿಗೆ , ಹಿಂದೂ ಧರ್ಮಾನುಯಾಯಿಗಳಲ್ಲಿ ವಿವಿಧ ಬ್ರಾಹ್ಮಣ ಪಂಗಡ ಹಾಗೂ ಬ್ರಾಹ್ಮಣೇತರರಿಗೆ ಕೆಲವೊಂದು ಜವಾಬ್ದಾರಿಗಳನ್ನು ಶತ...

ಭಾಸ್ಕರ ಹೆಗಡೆಯೆಂಬ ವ್ಯಕ್ತಿ ಮತ್ತು ಶಕ್ತಿ

ಇಮೇಜ್
  ಬಹುಶಃ ಭಾಸ್ಕರ ಹೆಗಡೆ ಸರ್‌ ಅವರ ಹೆಚ್ಚಿನ ವಿದ್ಯಾರ್ಥಿಗಳ ಮನಸ್ಸಲ್ಲಿ ವಿಶೇಷ ಸ್ಥಾನವೊಂದನ್ನು ಪಡೆದುಕೊಂಡಿದ್ದಾರೆ. ಅದು ತರಗತಿ, ಕಾಲೇಜು ಎಂಬ ಚೌಕಟ್ಟು ಎಂಬುದನ್ನು ಮೀರಿದ ಅನುಬಂಧ. ಪತ್ರಿಕೋದ್ಯಮ ಪ್ರಾಧ್ಯಾಪಕರಾಗಿ ತಮ್ಮ ಗುರುತು ಮೂಡಿಸುವುದರ ಜೊತೆಗೆ, ಒಬ್ಬ ವ್ಯಕ್ತಿಯಾಗಿಯೂ ಅವರು ಭಿನ್ನರೆನಿಸುತ್ತಾರೆ, ಆತ್ಮೀಯರೆನಿಸುತ್ತಾರೆ. ಪಡೆದ ಶಿಕ್ಷಣ ಜೀವನದಲ್ಲಿ ಉಪಯೋಗಕ್ಕೆ ಬರಬೇಕು ಎಂಬುದೇನೋ ಸರಿ, ಅದನ್ನು ಸಾಧಿಸುವುದು ಹೇಗೆ ಎಂಬ ಯೋಚನೆ ಕಾಲೇಜು ಶಿಕ್ಷಣದಲ್ಲಿ ಉಪನ್ಯಾಸಕರನ್ನು, ಪ್ರಾಧ್ಯಾಪಕರನ್ನು ಸದಾ ಕಾಡುವ ಒಂದು ರೀತಿಯ   ಯಕ್ಷಪ್ರಶ್ನೆ. ಅದರಲ್ಲೂ ಪತ್ರಿಕೋದ್ಯಮ ಶಿಕ್ಷಣದಲ್ಲಿ ಈ ಜಿಜ್ಞಾಸೆ ಹೊಸದೇನಲ್ಲ. ಬದಲಾಗುವ ತಂತ್ರಜ್ಞಾನ, ಓದುಗರು ಹೀಗೆ ವಿವಿಧ ಕಾರಣಗಳಿಂದ ಪತ್ರಿಕೋದ್ಯಮ ಸದಾ ಬದಲಾಗುತ್ತಲೇ ಇರುತ್ತದೆ. ಹೀಗಿರುವಾಗ ಓದುಗರ, ಕೇಳುಗರ, ನೋಡುಗರ ಬದಲಾಗುವ ನಿರೀಕ್ಷೆಗಳನ್ನು ಪೂರೈಸುವುದು ಉದ್ಯಮಕ್ಕೆ ಹೇಗೆ ಸವಾಲೋ, ಹಾಗೇ ಅಂತಹ ಪತ್ರಕರ್ತರನ್ನು ರೂಪಿಸುವುದು ಪ್ರಾಧ್ಯಾಪಕರಿಗೆ ಅದಕ್ಕಿಂತ ದೊಡ್ಡ ಸವಾಲು. ಉದ್ಯಮದ ಅಗತ್ಯವಿರುವ ಕೌಶಲ್ಯಗಳನ್ನು ಕಲಿಯದ ವಿದ್ಯಾರ್ಥಿ ಅಲ್ಲಿ ಸಲ್ಲುವುದಿಲ್ಲ ಎಂಬುದೂ ಪ್ರಾಧ್ಯಾಪಕರ ಮತ್ತೊಂದು ಚಿಂತೆ. ಇಲ್ಲಿ ನಮಗೆ ಭಾಸ್ಕರ ಸರ್‌ ವಿಭಿನ್ನವಾಗಿ ನಿಲ್ಲುತ್ತಾರೆ. ಭವಿಷ್ಯ ಬಲ್ಲವರು ದೃಶ್ಯ ಮಾಧ್ಯಮ ಬಹುಜನರ ಗಮನ ಸೆಳೆಯಲು ಆರಂಭಿಸಿದ ಎಂಬತ್ತು ತೊಂಭತ್ತರ ದಶಕದಲ್ಲಿ ಅಪ್‌...

ಭಾಸ್ಕರ ಸರ್‌ ಅವರ ಕ್ಲಾಸ್‌ ಎಂಬ ಕಾರ್ಯಾಗಾರ!

ಇಮೇಜ್
  ಭಾಸ್ಕರ ಹೆಗಡೆ ಸರ್‌ ಅವರ ಕ್ಲಾಸ್‌ ಬೆಳಗ್ಗೆ ಇದ್ದರೆ ಅದು ಆ ದಿನಕ್ಕೊಂದು ಅದ್ಭುತ ಆರಂಭ! ಹೌದು, ಅವರ ಕ್ಲಾಸ್‌ ಬೋರ್‌ ಎಂದು ಅನಿಸಿದ್ದು ನೆನಪೇ ಇಲ್ಲ. ಇದು ಅವರ ದೊಡ್ಡ ಶಿಷ್ಯಬಳಗದ ಎಲ್ಲರ ಅಭಿಪ್ರಾಯವೂ ಆಗಿರಬಹುದು. ಈ ವಿಶಿಷ್ಟತೆ ಅವರಿಗೆ ವೃತ್ತಿಯಲ್ಲಿ ಎಷ್ಟು ಯಶಸ್ಸು ತಂದುಕೊಟ್ಟಿದೆಯೋ ಗೊತ್ತಿಲ್ಲ, ಆದರೆ ಅವರ ಶಿಷ್ಯ ಬಳಗದ ಯಶಸ್ಸಿನಲ್ಲಿ ಅವರ ಪಾಠದ ಶೈಲಿ ದೊಡ್ಡ ಪಾತ್ರ ವಹಿಸಿದೆ. ಭಾಸ್ಕರ ಸರ್‌ ಅವರ ತರಗತಿಯನ್ನು ನಲಿ-ಕಲಿ ಪರಿಕಲ್ಪನೆಗೆ ಹೋಲಿಸಬಹುದೇನೋ! ಹೌದು, ಜರ್ನಲಿಸಂ ಅನ್ನು ನಿಜಾರ್ಥದಲ್ಲಿ ಜನರಲಿಸಂ ಮಾಡಿಬಿಡುತ್ತಿದ್ದರು. ನನ್ನಂತೆ ಸೈನ್ಸ್‌ ಓದಿ, ಪತ್ರಿಕೋದ್ಯಮಕ್ಕೆ ವಿಶೇಷ ಆಸಕ್ತಿಯೂ ಇಲ್ಲದೆ, ಮಾಹಿತಿಯೂ ಇಲ್ಲದೆ ಬರುವವರಿಗಂತೂ ಆ ತರಗತಿಗಳು ಅಮೂಲ್ಯವಾಗಿರುತ್ತಿದ್ದವು. ಮೊದಲ ಕೆಲವು ಕ್ಲಾಸ್‌ಗಳಲ್ಲೇ ನಾವು ಗೊತ್ತೇ ಆಗದಂತೆ ʼ ಜರ್ನಲಿಸಂ ಸ್ಟುಡೆಂಟ್ಸ್‌ ʼ ಆಗಿಬಿಡುತ್ತಿದ್ದೆವು. ಸರ್‌, ಹತ್ತು ಹಲವು ಆಯಾಮಗಳಲ್ಲಿ ನೋಡಿದಾಗಲೂ ವಿಶಿಷ್ಠವಾಗಿ ಕಾಣುವ ವ್ಯಕ್ತಿ. ಅದು ಆರಂಭವಾಗುವುದು ಅವರ ಕ್ಲಾಸ್‌ನಿಂದಲೇ. ಅವರಿಗೆ ಗೊತ್ತಿದ್ದೋ, ಗೊತ್ತಿಲ್ಲದೆಯೋ ಅವರು ಅಳವಡಿಸಿಕೊಂಡಿದ್ದ ಕಲಿಕಾ ವಿಧಾನ ಅತ್ಯಂತ ಪರಿಣಾಮಕಾರಿಯಾಗಿತ್ತು. ಜರ್ನಲಿಸಂ ಕ್ಲಾಸ್‌ ಎಂಬುದು ಸರಳ, ಆದರೆ ಆಸಕ್ತಿದಾಯಕ. ಅವರ ತರಗತಿಗಳು ಯಾವತ್ತೂ ಏಕಮುಖವಾಗಿರುತ್ತಿರಲಿಲ್ಲ. ಬಹುಶಃ ಅಂತಹ ಕಲಿಕಾ ವಿಧಾನದಲ್ಲಿ ಅವರಿಗೆ ನಂಬಿಕೆಯೂ ಇರಲಿಲ್ಲವೇನ...