ಪೋಸ್ಟ್‌ಗಳು

ಭಾವ ಬಂಧನದೊಳಗೆ ಒಂಬತ್ತು ವರುಷ …

ಇಮೇಜ್
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ… ಹೌದು , ವರ್ಷ ಒಂಬತ್ತಾದರೂ ನಿನ್ನ ಪ್ರೀತಿಯ ಪರಿಯ ನಾನಿನ್ನೂ ಅರಿತಿಲ್ಲ. ಅದು ಸಾಗರದಂತೆ ಮಿತಿಯಿಲ್ಲದ್ದು , ಜೀವಾನಿಲದಂತೆ ಸ್ವಾರ್ಥವಿಲ್ಲದ್ದು ಎಂಬುದನ್ನಷ್ಟೇ ಬಲ್ಲೆ. ಹಾಗಾದರೆ ಈ ಪ್ರೀತಿಗೆ ನಾನು ಅರ್ಹನೇ , ಇದಕ್ಕೆ ಪ್ರತಿಯಾಗಿ ನಾನೇನು ಕೊಡಬಲ್ಲೆ ಎಂಬ ಯೋಚನೆ ಹಲವು ಬಾರಿ ಕಾಡಿದ್ದಿದೆ. ಉತ್ತರವೂ ದೊರೆತಿದೆ…ಇದಕ್ಕೆ ಬೇಕಿರುವುದೂ ಬರೀ ಪ್ರೀತಿಯಷ್ಟೇ… ಪ್ರೀತಿಯನ್ನು ಹಗುರ ಮಾತುಗಳಿಂದ ಹಂಗಿಸುವಾಗ ಯಾಕೋ ನಮ್ಮ ಪ್ರೀತಿಯ ಬಗ್ಗೆ ಸಾರಿ ಹೇಳಬೇಕು ಅನಿಸುತ್ತದೆ. ಹಾಗಂತ ಪ್ರೀತಿ ನನಗೇನೂ ಹೊಸದಾಗಿರಲಿಲ್ಲ. ಒಂದು ಸಾಂತ್ವಾನದ ನುಡಿಯಿಲ್ಲದೆ , ತಮ್ಮವರಿಲ್ಲದೆ ನೊಂದ ಅದೆಷ್ಟೋ ಜೀವಗಳಿರುವ ಈ ಜಗದಲ್ಲಿ ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಅಪ್ಪ-ಅಮ್ಮ , ಅಣ್ಣ-ಅತ್ತಿಗೆ , ಬಂಧುಮಿತ್ರರನ್ನು ಪಡೆಯಲು ನಾನೆಷ್ಟು ಅದೃಷ್ಟ ಮಾಡಿದ್ದೆ. ಆದರೆ ನೀನಿಲ್ಲದೆ ನಾನು ಹೇಗಿರುತ್ತಿದ್ದೆ , ಜೀವನ ಅದೆಷ್ಟು ಅಪೂರ್ಣವಾಗಿರುತ್ತಿತ್ತು ಎಂಬ ಕಲ್ಪನೆಯೇ ನನ್ನನ್ನು ವಿಸ್ಮಿತನನ್ನಾಗಿಸುತ್ತದೆ… ಹೌದು , ನನಗೆ ಜೀವನದಲ್ಲಿ ಇದಕ್ಕಿಂದ ದೊಡ್ಡ ವರ ಇನ್ನೇನು ಬೇಕು. ಉದ್ಯೋಗ ಬಿಟ್ಟು ಮತ್ತೆ ಓದಲೆಂದು ಬಂದಿದ್ದು ನಮ್ಮಿಬ್ಬರ ಭೇಟಿಗೆ ಆ ದೇವರೇ ಸೃಷ್ಟಿಸಿದ ನೆಪವೇ ?! ಪ್ರೀತಿ-ಪ್ರೇಮ ಎಂಬ ಬಗ್ಗೆ ಆಸಕ್ತಿಯೇ ಇಲ್ಲದ ನಾನು “ ಬದುಕಿದರೇ ಇವಳ ಜೊತೆಯೇ ” ಎಂಬ ನಿರ್ಧಾರ ಮಾಡಿದ್ದಾದರೂ ಹೇಗೆ ! ನಿನ್ನ ಮೇಲಿದ್ದ ಪ್ರೀತ...

ಸಾಯೋದಂದ್ರೆ ಸುಮ್ಮನೆಯಲ್ಲ…

ಇಮೇಜ್
    Creator: kieferpix  ಸಾಯೋದಂದ್ರೆ ಸುಮ್ಮನೆಯಲ್ಲ ನೀ ಸತ್ತರೆ ಸಾಯೋದು ನೀನೊಬ್ಬಳಲ್ಲ… ಅಮ್ಮ ಇರುವಳಲ್ಲಾ… ಜೀವ ಮುಡಿಪಿಟ್ಟಳಲ್ಲಾ ಹೆತ್ತು ಹೊತ್ತು ಕರುಳಕುಡಿಯ ಬೆಳೆಸಿದಳಲ್ಲಾ ನೀ ಸತ್ತರೆ ಎದೆ ಬಿರಿವಂತೆ ಅಳುವಳಲ್ಲಾ…   ಅಪ್ಪನಿರುವನಲ್ಲಾ… ನೀನೇ ಆತನ ರಾಣಿ, ಆಸ್ತಿ ಬೇಕಿಲ್ಲವಲ್ಲಾ ಮಗಳ ಮೇಲೇ ಜೀವ ಇಟ್ಟಿರುವನಲ್ಲಾ ಕೂಸಿಲ್ಲದೆ ಯಮಯಾತನೆ ಪಡುವನಲ್ಲಾ…   ಪ್ರೀತಿ, ಮಮತೆಯಾ ಋಣ ನಿನ್ನ ಮೇಲಿದೆಯಲ್ಲಾ ಎಲ್ಲಾ ಬಿಟ್ಟೊಗೆದು ಸಾಯೋದು ಸುಲಭವಲ್ಲ ಆದರೂ ಬದುಕಿಗಂಜಿದೆಯಲ್ಲಾ, ಹೇಡಿಯಾದೆಯಲ್ಲಾ ಸಾಯೋದಂದ್ರೆ ಸುಮ್ಮನೆಯಲ್ಲ… (ಜಿಪಿ)

ಎಂಚಿನ ಅವಸ್ಥೆ ಮಾರ್ರೆ…

ಇಮೇಜ್
  (pic source: NPR) ಬೊಲ್ಪುದ ಚಾ ಪುರಾ ಆದ್‌ ಒಂತೆ ಫ್ರೆಶ್‌ ಆಯಿನ ಅಜ್ಜೆರ್‌ ಅಂಚನೆ ಚಾವಡಿಗ್‌ ಬತ್ತೆರ್‌. ಪುಳ್ಳಿ ಸೀನೆ ಚಾವಡಿಡ್‌ ಮೊಬೈಲ್‌ ಪತೋಂದು ಕುಲ್ಲುದೆ. ಅಜ್ಜೇರೆನ ನೆಂಪು ಒಂತೆ ವೀಕ್‌ ಆಂಡಲಾ, ಮೋಕೆದ ಸೀನೆ ಇಂಚಿಪ ಕೆಲವು ವರ್ಷಡ್ ಡಿಗ್ರಿ ಮಲ್ತೊಂದುಲ್ಲೆ ಪಂಡ್‌ದ್‌ ಆರೆಗ್‌ ಮರಪ್ವಾ…ಮೋಕೆಡ್‌ ಕೇಂಡೆರ್‌… ಅಜ್ಜೆರ್‌: ಮಗಾ ಏಪಲಾ ಆಲೆನ್‌ ತೂವೊಡ್‌ ಪನೊಂದಿಪ್ವತಾ ಮಗಾ…ತುಯ್ಯನಾ…ಎಂಚ ನಂಕ್‌ ಆವ? ಸೀನೆ: ಓ ಅಜ್ಜೆರೇ, ಅವ್ವು ಆನ್ಲೈನ್ ‌! ಈರೆಗ್‌ ಅವ್ವು ಪುರಾ ದಾಯೆಗ್‌ ಪನ್ಲೆ. ಬಲೆ ಬಜ್ಜೆರ್‌ ತಿನ್ಲೆ ಅಜ್ಜೆರ್‌: ಅವ್ವು ಪುರಾ ಎಂಕ್‌ ಆತ್‌ ತೆರಿಯುಜ್ಜಿ ಮಗಾ…ಆವಡ್‌ ಎಡ್ಡೆ ಆವಡ್‌… ಅಜ್ಜೆರೆಗ್‌ ಒಂತೆ ಕನ್ಫ್ಯೂಸ್‌ ಆಂಡ್‌…ಆಂಡಲಾ ಮೋಕೆದ ಪುಲ್ಲಿನ ಪಾತೆರೊಗ್‌ ಆರೆಗ್‌ ಬೇಜರ ಆಪುನ ಕಮ್ಮಿಯೇ…   ಸೀನೆ: ಅಮ್ಮಾ….ಎಂಕ್‌ ಕಾಲೇಜ್‌ ಲೇಟಾಪುಂಡು, ತಿಂಡಿ ಕೊರ್ಲೇ… (ಕುಲ್ಲುನಲ್ದೇ ಕೇನ್ವೆ)   ಸೀನನ ಅಮ್ಮ ಜಯಕ್ಕ ಗಟ್ಟಿಗಿತ್ತಿ ಪೊಂಜೋವು. ಸೀದ ಪಾತೆರ. ಅಂಚ ಪಂಡ್‌ದ್‌ ಕೋಪ ಕಮ್ಮಿ. ಜಯಕ್ಕ: ದಾಯ್ತ ಮಾರಾಯ ನಿನ್ನ… ವಾರಗ್‌ ರಡ್ಡ್‌- ಮೂಜಿ ದಿನ ಕಾಲೇಜ್‌ಗ್‌ ಪೋಪ. ಅಲ್ಲ್‌ ಕೇನ್ನಕ್ಲು ಏರ್ಲಾ ಇಜ್ಯೆರಾ? ಸೀನೆ: ಅಮ್ಮಾ…ಅವ್ವು ಅಂಚತ್‌, ಈರೆಗ್‌ ಅವ್ವು ಪುರಾ ಅರ್ಥಾಪುಜ್ಜಿ ಬುಡ್ಲೆ ಜಯಕ್ಕ: ಈ ಎನನೇ ಮಂಗಟ್ಟೋವನಾ…ಆನ್ಲೈಲ್‌ ಪಂಡ್‌ದ್‌ ಮೊಬೈಲ್‌ ಆನ್‌ ಮಲ್ತ್‌ ದೀಪ, ಇಜ್ಜಾ ...

ಹೊಸತೇನೂ ಆಗಿಬಿಡುವುದಿಲ್ಲ…ನಾವೇ ಮಾಡಬೇಕಿದೆ!

ಇಮೇಜ್
  ಹೊಸವರ್ಷಗಳು ಜಾಸ್ತಿ ಸಮಯ ಹೊಸತಾಗಿರುವುದಿಲ್ಲ. ನಮ್ಮ- ನಿಮ್ಮ ಜೀವನದಲ್ಲಿ ಅದೆಷ್ಟು ಹೊಸವರ್ಷಗಳು ಬಂದಿಲ್ಲ ಹೇಳಿ. ಕ್ಯಾಲೆಂಡರ್‌ ಬದಲಾಗುವುದು ಬಿಟ್ಟರೆ ಬೇರೇನೂ ಆಗುವುದಿಲ್ಲ…ಆದರೆ ʼ ಎಲ್ಲದಕ್ಕೂ ಕಾಲ ಕೂಡಿಬರಬೇಕು ʼ ಎಂಬ ಮಾತಿದೆಯಲ್ಲ. ತಾನಾಗೇ ಏನು ಬದಲಾಗುವುದಿಲ್ಲ, ಹಾಗಾಗಿ ಹೊಸ ವರ್ಷದ ನೆಪದಲ್ಲಿ ನಾವೇ ಏನಾದರೂ ಮಾಡೋಣ! ನಮಗೆ ಹೊಸವರ್ಷದ ಆರಂಭದಲ್ಲಿ ಭರ್ಜರಿ ಸಂಕಲ್ಪಗಳನ್ನು ಮಾಡಿ ವರ್ಷ ಹಳೆಯದಾಗುತ್ತಾ ಹೋದಂತೆ ಅವನ್ನು ಮರೆತುಬಿಡುವ ಗುಣವಿದೆ. ಅದಕ್ಕೆ ನಮ್ಮದೇ ಆದ ಕಾರಣ (ನೆಪ?) ಗಳನ್ನು ಹುಡುಕಿಕೊಂಡು ಸಮಾಧಾನಪಟ್ಟುಕೊಳ್ಳುತ್ತೇವೆ. ಈ ಬಾರಿ ಹೀಗೊಂದು ಪ್ರಯತ್ನ ಮಾಡೋಣ. ಭಯಂಕರ ಕೆಟ್ಟ ವರ್ಷ ಎಂಬ ಹಣೆಪಟ್ಟಿ ಹೊತ್ತು ನಮ್ಮಿಂದ ದೂರವಾಗುತ್ತಿರುವ 2020 ರ ಸಿಂಹಾವಲೋಕನದೊಂದಿಗೆ ಮುಂದಡಿಯಿಟ್ಟರೆ ಹೇಗೆ? ಈ ʼ ನಾನು ʼ, ʼ ನನ್ನದು ʼ ಎಂಬ ಮಾತುಗಳು ಬರೀ ಅಹಂಕಾರ ಸೂಚಕವಾಗಬೇಕಿಲ್ಲ. ಅವು ನಮ್ಮ ಸಾಧನೆಗೆ ಮೂಲಮಂತ್ರಗಳೂ ಆಗಬಹುದಲ್ಲವೇ…ನಮಗೆ ಹೊಸವರ್ಷದಲ್ಲಿ ಜಗತ್ತನ್ನೇ ಬದಲಿಸಿಬಿಡುತ್ತೇನೆ ಎಂಬ ಭ್ರಮೆ ಬೇಡ. ʼ ನಾವು ʼ ಬದಲಾಗೋಣ, ನಮ್ಮನ್ನು ನೋಡಿ ಸಮಾಜ, ಜಗತ್ತು ಬದಲಾಗಬಹುದು. ಹಾಗಾದರೆ 2020 ಕಲಿಸಿದ ಪಾಠವಾದರೂ ಏನು, 2021 ರ ಕಡೆಗೆ ನಮ್ಮ ನೋಟವಾದರೂ ಹೇಗಿರಬೇಕು… ಬದುಕು ಬಲು ಸುಂದರ: ಚತುರ್ಮುಖ ಬ್ರಹ್ಮ ಮನುಷ್ಯನನ್ನು ಸೃಷ್ಟಿಸಿದ ಬಳಿಕ ತನ್ನ ಸೃಷ್ಟಿ ಕಾರ್ಯವನ್ನು ನಿಲ್ಲಿಸಿದ ಎಂಬ ನಂಬಿಕೆಯಿದೆ. ಅವನ ಪ್ರಕಾರ ...

ಮರೆಯಬೇಡ ಮಗಳೇ…

ಇಮೇಜ್
  ಮಗಳೇ ಮರೆಯಬೇಡ… ಎಂದಿಗೂ ಮರೆಯಬೇಡ. ನಿನ್ನ ಬರುವಿಕೆಯಲ್ಲಿ ಅದೆಷ್ಟು ಖುಷಿ ಕಂಡಿದ್ದೇನೆ ಎಂದು ಬರೆದು ತೋರಿಸಲಾರೆ, ನಿನ್ನ ʼ ಮಗಳೇ ʼ ಎಂದು ಕರೆದೇ ನಾ ಪಡುವ ಸಂತಸ ಸಾಗರದಷ್ಟು. ಸಂಭ್ರಮ ಪಟ್ಟಿದ್ದೇನೆ ಎಣೆಯಿಲ್ಲದಷ್ಟು. ಅಸೂಯೆ ಪಡುವಷ್ಟು… ಆ ನಿನ್ನ ಮೊದಲ ಅಳು ನನ್ನಲ್ಲಿ ನಗು ಮೂಡಿಸಿದ್ದು ಸತ್ಯ. ʼ ನಿಮಗೆ ಮಗಳು ಹುಟ್ಟಿದ್ದಾಳೆ ʼ ಎಂದ ವೈದ್ಯರು, ಆಗ ನನಗಾದ ರೋಮಾಂಚನ, ಆ   ಖುಷಿಯನ್ನು ಹಂಚಿಕೊಳ್ಳಲೂ ಬರದೇ ಪರದಾಡಿ ಕಣ್ಣೀರಾದ ಕ್ಷಣ. ಎಂದಿಗೂ ಮರೆಯಾರೆ. ನೀನು ನಿನ್ನಮ್ಮನ ಜೊತೆಗೆ ನನಗೂ ಹೊಸ ಜೀವ ನೀಡಿರುವೆ… ಮಗಳೇ, ಮರೆಯಬೇಡ. ಅದೆಷ್ಟು ಮಂದಿ ಕೇಳಿದರು, ʼ ಮಗಳು ಹೇಗಿದ್ದಾಳೆ ʼ ಎಂದು. ಖುಷಿಯಿಂದ ಬೀಗಿದ್ದೇನೇ ಹೊರತು ಬೇಸರವೇ ಆಗಲಿಲ್ಲವಲ್ಲಾ… ʼ ನಿನ್ನ ಮಹಾರಾಣಿ ಹೇಗಿದ್ದಾಳೆ ʼ ಎಂದಾಗಲಂತೂ ಕೆಲ ಕ್ಷಣ ನಾನೇ ಮಹಾರಾಜನಾಗಿರುತ್ತಿದ್ದೆ! ನಿನ್ನಣ್ಣನ ಮೇಲಿನ ಪ್ರೀತಿ ಬೆಟ್ಟದಷ್ಟಾದರೂ ನಿನಗೇನೂ ಕಡಿಮೆಯಿಲ್ಲ ಮಗಳೇ…ಅದಕ್ಕಿಂತಲೂ ತುಸು ಹೆಚ್ಚೇ ಪಾಲು ನಿನಗೆ! ಅದೇನೇ ಬೇಸರ, ನೋವು, ಒತ್ತಡ…ನಿನ್ನ ಕಂಡಾಕ್ಷಣ ಮರೆಯಾಗುತ್ತದೆ ಮಂಜಿನಂತೆ. ನಿನ್ನ ಪ್ರತಿ ನೋಟ, ಆಟ, ಕಾಟವೂ ಅದೆಷ್ಟು ಚೆಂದ. ಜೀವನದಲ್ಲಿ ಅದೆಂತದ್ದೋ ಹುರುಪು. ನೆನಪಿದೆ ನನಗೆ…ಅದೆಷ್ಟು ಜವಾಬ್ದಾರಿಗಳು ನನಗೆ. ನಾ ಮಾಡಬಲ್ಲೆ. ಪ್ರೀತಿಯಂತೂ ಕೊಡಬಲ್ಲೆ ಪ್ರಾಣದಷ್ಟು. ನೆನಪಿರಲಿ ಮಗಳೇ… ʼ ಮಹಾರಾಣಿಯಂತೆ ಬಾಳು ʼ… ಹೌದು ನನಗೂ ಹಾಗೇ ಅನಿಸುತ್ತಿದೆ. ಜೀವನ...

ಅಮ್ಮ… ನೀನು ಅರ್ಥವಾಗಿರುವೆ!

ಇಮೇಜ್
  (Photo courtesy: udaypi.in)   ಅಮ್ಮ ನೀನು ಈಗಷ್ಟೇ ಅರ್ಥವಾಗುತ್ತಿರುವೆ. ಪ್ರೀತಿಯೇನೋ ಇತ್ತು, ನಿನ್ನೊಳಗೆ ನನ್ನ ಪ್ರಪಂಚವಿತ್ತು. ಆದರೆ ನಿನ್ನ ಪ್ರಪಂಚವೇ ನಾನೆಂದು ಅರ್ಥವಾಗುತ್ತಿದೆ. ನನ್ನಿಂದ ಆ ನೋವು, ಸಂಕಟ ನೀನೂ ಅನುಭವಿಸಿದ್ದೆಯಲ್ಲಾ…ನಾನು ಕ್ಷಮಿಸು ಎಂದರೆ ಸಾಕೇ…?! “ ನಿನಗೂ ಒಂದು ಮಗುವಾಗಲಿ, ತಿಳಿಯುತ್ತೆ ” ಎಂದು ಹೆತ್ತವರು ಹೇಳುವುದು ಬರೀ ಬಾಯ್ಮಾತು ಎಂದುಕೊಂಡಿದ್ದೆ.  ಈಗ ಅರ್ಥವಾಗುತ್ತಿದೆ. ಅಮ್ಮನಾಗುವುದು ಮರುಹುಟ್ಟು, ಹೊಸ ಜನ್ಮ …ಇಲ್ಲ ಶಬ್ದಗಳು ಸೋಲುತ್ತವೆ. ಏನೆಂದು ಕರೆಯಲಿ ಅದನ್ನು. ದೈಹಿಕ, ಮಾನಸಿಕ ತೊಳಲಾಟ, ಹೇಳಲಾಗದ ಸಂಕಟ, ಎಲ್ಲವನ್ನೂ ನೀನೂ ಸಹಿಸಿಕೊಂಡಿದ್ದೆಯಲ್ಲಾ…ಅದೆಲ್ಲವನ್ನೂ ಮೀರಿ ಎದ್ದುನಿಂತು ಹೊಸಜೀವ ಬೆಳೆಸಿದ ನಿನ್ನನ್ನು ಏನೆಂದು ಬಣ್ಣಿಸಲಿ? ಮತ್ತೆ ಶಬ್ದಗಳು ಸೋಲುತ್ತಿವೆ… ʼ ಕರುಳಕುಡಿ ʼ …ಹೀಗೆಂದಾಗ ಅದೊಂದು ವರ್ಣನೆಯೆಂದೇ ಭಾವಿಸಿದ್ದೆ. ಆದರೆ ಕರುಳಬಳ್ಳಿಯಲ್ಲಿ ಹೊಸ ಜೀವ ಬೆಳೆಸುವ ಪರಿಗೆ ಚಮತ್ಕಾರ ಎನ್ನಲೇ? ಅಲ್ಲ ಅದೆಷ್ಟು ದಿನ, ಅದೆಷ್ಟು ನೋವು, ಅದೆಂತಹಾ ತಾಳ್ಮೆ…ಅದರಲ್ಲೂ ಅದೆಂತಾ ಸಂತೋಷ…ಹೌದು ಅದೊಂದು ಚಮತ್ಕಾರವೇ! ನರಕದಷ್ಟು ನೋವು ತಿಂದು ಸ್ವರ್ಗ ಪಡೆಯುವುದು ಬರೀ ಪ್ರಕೃತಿಯ ನಿಯಮವೇ? ಅದೆಲ್ಲಿಂದ ಬಂತು ನಿನಗಂತಾ ಶಕ್ತಿ?! ʼ ಜೀವ ತೇಯುವುದು ʼ …ಹಾ ಈಗ ಅರ್ಥವಾಗುತ್ತಿದೆ. ಕಣ್ಣಾರೆ ಕಾಣುತ್ತಿದ್ದೇನೆ… ನಿನಗೆ ಮೊದಲಿನಂತೆ ನಡೆಯಲಾಗುತ್ತಿಲ್ಲ. ಕ...

ಹೊಸಬೆಳಕು ಮೂಡುತಿದೆ…

ಇಮೇಜ್
  ಕಣ್ಣ ಮುಚ್ಚಲು ರೆಪ್ಪೆಯಡಿಯಲಿ ಮನವ ಸೋಂಕುವ ಕತ್ತಲು ಕನಸಿನಂಗಳ ಒರೆಸಿ ಬೆಳಗುತ ಸಜ್ಜು ನಾಳೆಯ ಕಟ್ಟಲು…   ಕತ್ತಲೆಂಬುದು ಶಾಶ್ವತವಲ್ಲ, ಅದು ಜಗದ ಅಂತ್ಯವೂ ಅಲ್ಲ, ಅದು ಬೆಳಕಿನ ಹಾದಿಗೆ ಮುನ್ನುಡಿಯಷ್ಟೆ…ಅದೆಷ್ಟು ನಿಜವಲ್ಲವೇ…ನಮ್ಮ ಜೀವನವೆಂಬ ಸುಂದರ ಯಾನದಲ್ಲಿ ಕಷ್ಟಗಳೆಂಬ ಕತ್ತಲು ಸುಳಿಯಿತೆಂದು ಸರಿದು ಮರೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಜೀವನದ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುತ್ತಾ ಭವಿಷ್ಯದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿ ಕೊರೋನಾ ಆಘಾತ ನೀಡಿದೆ. ಆದರೀಗ ಕತ್ತಲು ಸರಿದು ಬೆಳಕು ಮೂಡುವ ಸಮಯ ಬಂದೇಬಿಟ್ಟಿದೆ… ಹೌದು…ಮೊದಮೊದಲು ಕೊರೋನಾದ ಕತ್ತಲು ಕವಿದರೂ ಆನ್‌ಲೈನ್‌ ಪಾಠವೆಂಬ ಚಂದಿರನಿದ್ದಾನಲ್ಲ ಎಂಬ ಹುಂಬ ಧೈರ್ಯವಿತ್ತು. ಹೊಸತನ ಮೂಡಿಸುವ ಸಹಜ ಕುತೂಹಲವದು…ಆದರೆ ಬರುಬರುತ್ತಾ ಅಮಾವಾಸ್ಯೆಯ ಅನುಭವ. ಆನ್‌ಲೈನ್‌ ಪಾಠದ ಕುತೂಹಲ ಮರೆಯಾಗಿತ್ತು. ಅದೊಂದು ಹೊರೆಯಾಗತೊಡಗಿತು. ಕಾಲೇಜ್‌ ಕಾರಿಡಾರ್‌, ಸ್ನೇಹಿತರು ನೆನಪಾಗತೊಡಗಿದರು. ಈಗ ಕ್ಲಾಸ್‌ ಯಾವಾಗ ಆರಂಭವಾಗುತ್ತೆ ಎಂಬ ಮೂಲಪ್ರಶ್ನೆ! ಕೊರೋನಾ ಕತ್ತಲಲ್ಲಿ ಉಪನ್ಯಾಸಕರಿಗೂ ವಿದ್ಯಾರ್ಥಿಗಳೇ ಮಿಂಚುವ ನಕ್ಷತ್ರಗಳು, ಆ ನಕ್ಷತ್ರಗಳಲ್ಲೇ ಬೆಳಕು ಕಾಣುವ ಪ್ರಯತ್ನ. ತಂತ್ರಜ್ಞಾನದ ಬಲೆಯಲ್ಲಿ ಸಿಲುಕಿ ನಲುಗಿದ ಹಿರಿಯರು ಒಂದೆಡೆಯಾದರೆ, ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿಯೂ ತರಗತಿ ಪಾಠಗಳಿಗೆ ಆನ್‌ಲೈನ್‌ ಸಮವಲ್ಲ ಎಂದು ಕಂಡುಕೊಂ...