ಸಾಯೋದಂದ್ರೆ ಸುಮ್ಮನೆಯಲ್ಲ…
ಸಾಯೋದಂದ್ರೆ ಸುಮ್ಮನೆಯಲ್ಲ
ನೀ ಸತ್ತರೆ ಸಾಯೋದು ನೀನೊಬ್ಬಳಲ್ಲ…
ಅಮ್ಮ ಇರುವಳಲ್ಲಾ…
ಜೀವ ಮುಡಿಪಿಟ್ಟಳಲ್ಲಾ
ಹೆತ್ತು ಹೊತ್ತು ಕರುಳಕುಡಿಯ ಬೆಳೆಸಿದಳಲ್ಲಾ
ನೀ ಸತ್ತರೆ ಎದೆ ಬಿರಿವಂತೆ ಅಳುವಳಲ್ಲಾ…
ಅಪ್ಪನಿರುವನಲ್ಲಾ…
ನೀನೇ ಆತನ ರಾಣಿ, ಆಸ್ತಿ ಬೇಕಿಲ್ಲವಲ್ಲಾ
ಮಗಳ ಮೇಲೇ ಜೀವ ಇಟ್ಟಿರುವನಲ್ಲಾ
ಕೂಸಿಲ್ಲದೆ ಯಮಯಾತನೆ ಪಡುವನಲ್ಲಾ…
ಪ್ರೀತಿ, ಮಮತೆಯಾ ಋಣ ನಿನ್ನ ಮೇಲಿದೆಯಲ್ಲಾ
ಎಲ್ಲಾ ಬಿಟ್ಟೊಗೆದು ಸಾಯೋದು ಸುಲಭವಲ್ಲ
ಆದರೂ ಬದುಕಿಗಂಜಿದೆಯಲ್ಲಾ, ಹೇಡಿಯಾದೆಯಲ್ಲಾ
ಸಾಯೋದಂದ್ರೆ ಸುಮ್ಮನೆಯಲ್ಲ…
(ಜಿಪಿ)
In memory of Prajna...a final year BA student who is no more...
ಪ್ರತ್ಯುತ್ತರಅಳಿಸಿ