ಪೋಸ್ಟ್‌ಗಳು

ಕನಸಿಗೊಂದು ರೆಕ್ಕೆ ಬಂದಿದೆ….

ಇಮೇಜ್
ಆ ಇಳಿವಯಸ್ಸಿನ ತಾಯಿಗೆ ಮಗಳು ಅದ್ಭುತವಾದ ಉಡುಗೊರೆ ನೀಡಿದ್ದಳು. ತಾನು ಆಸೆಪಟ್ಟರೂ ಸಾಧಿಲಾಗದ್ದನ್ನು ಮಗಳು ಸಾಧಿಸಿ ತೋರಿಸಿದ್ದಳು. 38 ನೆಯ ಘಟಿಕೋತ್ಸವಕ್ಕೆಂದು ಶ್ವೇತ ವರ್ಣ ದಲ್ಲಿ ಚಂದವಾಗಿ ಸಿಂಗರಿಸಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಎದುರು ದೈಹಿಕ ಶಿಕ್ಷಣ ಸ್ನಾತಕೋತ್ತರ ಪದವಿಯಲ್ಲಿ ಮೊದಲ   ರ‍್ಯಾಂಕ್‌ ಪಡೆದ ಆ ಸಾಧಕಿ ಮಗಳು ರಮ್ಯಾ ತಾಯಿ ಮತ್ತು ಅಕ್ಕನ ಜೊತೆ ಹೆಮ್ಮೆಯಿಂದ ಬೀಗುತ್ತಿದ್ದರು.      ಪುತ್ತೂರಿನ ಗ್ರಾಮವೊಂದರಿಂದ ದೇರಣ್ಣ ನಾಯಕ್‌- ಪಾರ್ವ ತಿ ದಂಪತಿಯ ಮಗ ಳು ರಮ್ಯಾಗೆ ಈ ಸಂತೋಷವೇನೂ ಸುಲಭವಾಗಿ ದಕ್ಕಿಲ್ಲ. ಅವರ ತಾಯಿಗೆ ತಮ್ಮ ಮಕ್ಕಳಾದ ರಮ್ಯಾ , ಸೌಮ್ಯಾ (ಅಕ್ಕ) ಇಬ್ಬರನ್ನೂ ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದರೂ ಕೂಲಿಯನ್ನೇ ಆಧರಿಸಿದ್ದ ಕುಟುಂಬದ ಆರ್ಥಿ ಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಹಿರಿಯವಳಾದ ಸೌಮ್ಯಾ ಉನ್ನತ ವಿದ್ಯಾಭ್ಯಾಸವನ್ನು ಕೈಬಿಡಬೇಕಾಯಿತು. ವಿವಾಹ ಜೀವನಕ್ಕೆ ಕಾಲಿಟ್ಟು , ಗ್ರಾಮೀಣ ವಾಚ ನಾ ಲಯವೊಂದರಲ್ಲಿ ಗ್ರಂಥಪಾಲಕಿಯಾಗಿ ಕೆಲಸ ಆರಂಭಿಸಿದ್ದರು. ಆದರೆ ಅವರ ಮುಂದಿದ್ದ ಗುರಿ , ತನಗಿಂತಲೂ ಚೂಟಿಯಾಗಿದ್ದ ತಂಗಿಯ ವಿದ್ಯಾಭ್ಯಾಸಕ್ಕೆ ನೆರವಾಗುವುದು. ಅದನ್ನವರು ಕೊನೆಗೂ ಸಾಧಿಸಿಬಿಟ್ಟರು. "ಅಕ್ಕ ನ ಲ್ಲದಿದ್ದರೆ ನಾನೀ ಸಾಧನೆ ಖಂಡಿತಾ ಮಾಡಲಾಗುತ್ತಿರಲಿಲ್ಲ ," ಎನ್ನುತ್ತಾರೆ ರಮ್ಯಾ. ರಮ್ಯಾ ಓದಿಗಿಂತಲೂ ಆಟ...

ಮಾಧ್ಯಮ ಲೋಕದಲ್ಲಿ ಸ್ಕಿಲ್‌ ಮಂತ್ರ…

ಇಮೇಜ್
ಜರ್ನಲಿಸಂ ಓದಿದ್ರೆ ಕೆಲಸ ಸಿಗುತ್ತಾ … ಅಥವಾ ಜರ್ನಲಿಸ್ಟ್ ‌ ಆಗೋದಿಕ್ಕೆ ಪತ್ರಿಕೋದ್ಯಮ ಓದಲೇಬೇಕಾ , ಇದು ಸಾಮಾನ್ಯವಾಗಿ ಪತ್ರಿಕೋದ್ಯಮ ಶಿಕ್ಷಕರು ವಿದ್ಯಾರ್ಥಿಗಳಿಂದ ಎದುರಿಸುವ ಭಾರೀ ಕಷ್ಟದ ಮತ್ತು ಅಷ್ಟೇ ಸುಲಭದ ಪ್ರಶ್ನೆ !   ಮೊದಲ ಪ್ರಶ್ನೆಯ ಉತ್ತರ ಎರಡನೆಯದರಲ್ಲಿ ಹುದುಗಿಕೊಂಡಿದೆ ಎಂದು ಅರ್ಥಮಾಡಿಕೊಳ್ಳಲು ಹೆಚ್ಚು ಕಷ್ಟವೇನಿಲ್ಲ . ಸೇವೆಯಲ್ಲವಾದರೂ ಜವಾಬ್ದಾರಿಯ , ಕಷ್ಟವಲ್ಲದಿದ್ದರೂ ಸವಾಲೊಡ್ಡುವ ಪತ್ರಿಕಾರಂಗ ಬೇರೆ ಕ್ಷೇತ್ರಗಳಿಗಿಂತ ಹಲವು ರೀತಿಯಲ್ಲಿ ಭಿನ್ನ . ತಂತ್ರಜ್ಞಾನದೊಂದಿಗೆ ಬದಲಾಗುವ ಓದುಗರ / ನೋಡುಗರಬೇಕು - ಬೇಡಗಳ ಜೊತೆ ಓಡಲೇಬೇಕಾದ ಪತ್ರಿಕೋದ್ಯಮದಲ್ಲಿ ಇತ್ತೀಚೆಗಿನ ಬೆಳವಣಿಗಳು ಬೆರಗುಮೂಡಿಸುವ ಜೊತೆಗೆ , ಬೆವರುವಂತೆಯೂ ಮಾಡುತ್ತಿವೆ ! ಸೋಷಿಯಲ್ ‌ ಮೀಡಿಯಾ ಸುಗ್ಗಿ ! ಸೋಷಿಯಲ್ ‌ ಮೀಡಿಯಾ ಎಂದರೆ ಸೋಮಾರಿಕಟ್ಟೆ ಎಂದು ಜರಿಯುವವರೇ ಅದನ್ನೀಗ ಅಪ್ಪಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ . ಪೆನ್ನಿಲ್ಲದಿದ್ದರೂ ನಡೆಯುತ್ತೆ ಅಂಗೈಯಲ್ಲಿ ಜಗತ್ತು ತೋರಿಸುವ ಮೊಬೈಲ್ ‌ ಬೇಕೇಬೇಕು ಎಂಬ ಕಾಲ ಸೋಷಿಯಲ್ ‌ ಮೀಡಿಯಾಕ್ಕೆ ರತ್ನಗಂಬಳಿ ಹಾಸಿದೆ . ಸೋಷಿಯಲ್ ‌ ಮೀಡಿಯಾದ ಸಾಟಿಯಿಲ್ಲದೆ ವೇಗ , ತಲುಪುವ ಸಾಮರ್ಥ್ಯ , ದ್ವಿಮುಖ ಸಂವಹನದ ಅವಕಾಶವೂ ಈ ಬೆಳವಣಿಗೆಗೆ ಕಾರಣ . ಇದರ ನೇರ ಪರಿಣಾಮ ಕಳೆದೊಂದು ದಶಕದಿಂದ ಪತ್ರಿಕಾರಂಗದ ಮೇಲಾಗಿದೆ , ಆಗುತ್ತಲೇ ಇದೆ . ಪೇಪರ್ ‌ ಬದಲು ಇ - ಪೇಪರ್ ‌ ಓದುಗರ ...

City of Gold

ಇಮೇಜ್

ಆಗ ಕೆಸರು ಈಗ ಧೂಳು...

ಇಮೇಜ್
ಮಳೆಗಾಲದ ರಸ್ತೆ ಪರಿಸ್ಥಿತಿ ನೋಡಿ ಯಾರಿಗೋ ಸಹಜವಾಗಿ ಹೀಗನಿಸಿದೆ!  ಅಂತೂ‌ ಮಳೆಗಾಲ‌ ಮುಗೀತು ಕೆಸರೆರಚಾಟ ತಪ್ಪಿತು ಎಂದು ಮಂಗಳೂರಿನ ಜನರು ನಿಟ್ಟುಸಿರು ಬಿಡುತ್ತಿರುವಂತೆ ಧೂಳಿನ‌ ಸಮಸ್ಯೆ ಆಸೆಯನ್ನು ಮಬ್ಬಾಗಿಸಿದೆ. ನಗರದ ಚಿಕ್ಕ‌-ದೊಡ್ಡ ಗುಂಡಿಗಳಲ್ಲಿ ಯಾವುದೇ ಬೇಧವಿಲ್ಲದೆ ಭರಪೂರ  ಧೂಳು‌ ತುಂಬಿಕೊಂಡಿದೆ. ಮಂಗಳೂರಿಗೆ ಜನರನ್ನು ಸ್ವಾಗತಿಸುವ ಪಡೀಲ್, ಪಂಪ್ ವೆಲ್, ನಂತೂರುಗಳಲ್ಲಿ ರಸ್ತೆ ಕಿತ್ತು ವಾಹನ ಸವಾರರ ಸಾಮರ್ಥ್ಯ, ತಾಳ್ಮೆ ಪರೀಕ್ಷಿಸುತ್ತಿವೆ. ಧೂಳಿನ ಸ್ನಾನಕ್ಕೆ ಹೆದರಿ‌ ಪಾದಚಾರಿಗಳು, ದ್ವಿಚಕ್ರ ಸವಾರರು, ಜೊತೆಗೆ ಸಂಚಾರಿ ಪೊಲೀಸರು ಬೆವರುತ್ತಿದ್ದಾರೆ. ದಂಡ ವಿಧಿಸಲು ಗಾಡಿಯ ನಂಬರ್ ಪ್ಲೇಟ್ ನೋಡುವುದೇ ಸವಾಲಿನ ಕೆಲಸವಾಗಿದೆ. ಮಳೆಗಾಲದಲ್ಲಿ ಮಳೆಯ ಸಮಸ್ಯೆ, ಈಗಲಾದರೂ ರಸ್ತೆ ಸರಿ‌ಮಾಡಿ ಎಂದು‌ ಜನರು  ಜಪ ಆರಂಭಿಸಿದ್ದಾರೆ. ನಗರದ ಮರ್ಯಾದೆ ಉಳಿಸಿ ಎಂದು ಮಾಧ್ಯಮಗಳು‌ ಎಚ್ಚರಿಸುತ್ತಿವೆ. 'ಸ್ಮಾರ್ಟ್ ಸಿಟಿ'ಗೆ ಈ‌ ಸ್ಥಿತಿ ಬರಬಾರದಿತ್ತು ಎಂದು ಕೇಳದ ಕಿವಿಗಳಿಗೆ ಹೇಳಲಾಗುತ್ತಿದೆ. ಫಂಡ್ ಸಮಸ್ಯೆ ಯಿಂದ ತಲೆನೋವು ಎಂದು ತಿಳಿದುಬಂದಿದೆ. ಈ ಮಧ್ಯೆ ವಾಹನ‌ ಸರ್ವಿಸ್ ಗೆ ಮತ್ತೆ ಮತ್ತೆ ಬರುವುದನ್ನು‌ ಕಂಡು ಸರ್ವಿಸ್ದಾರರು ' ಒಂತೆ ದಿನ ಸಮಸ್ಯೆ ಇಂಚನೆ ಇತ್ತುಂಡಲಾ ಆವು' ಎನ್ನುತ್ತಿದ್ದಾರಂತೆ!

ತೀರ್ಥ ಕೊಡಲೂ ಮೆಷೀನು...!

ಇಮೇಜ್
(ಚಿತ್ರ ಕೃಪೆ- ಗೂಗಲ್‍) ಇತಿಹಾಸ, ಪರಂಪರೆಯ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿ 'ಇಲಿಯನ್ನು ಹುಲಿ' ಎಂಬಂತೆ ಬಿಂಬಿಸುವ ದೇಶಗಳ‌ ಮಧ್ಯೆ ನಾವ್ಯಾಕೋ ಹಿಂದುಳಿಯುತ್ತಿದ್ದೇವೆ ಅನಿಸಿದ್ದು ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಕಾರ್ಯಕ್ರಮದಲ್ಲಿ. ಅದರಲ್ಲೂ ಮುಖ್ಯ ಅತಿಥಿ ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ಟರ ಮಾತಿನಲ್ಲಿ‌ ವಿಷಾದದ ಛಾಯೆಯಿತ್ತು.‌ ಅಭಿವೃದ್ಧಿ, ವಿಜ್ಞಾನದ ಹೆಸರಲ್ಲಿ ಇತಿಹಾಸವನ್ನು ಅಳಿಸುತ್ತಿರುವ ಬಗ್ಗೆ ಬೇಸರವಿತ್ತು. ಅನೇಕರು ಅಮೂಲ್ಯ ಶಾಸನಗಳನ್ನು ಬೇಡದ ವಸ್ತುವೆಂಬಂತೆ ಮೂಲೆಗೆ ಎಸೆಯುತ್ತಿದ್ದಾರೆ. ಕೆತ್ತನೆಯಿರುವ ಕಲ್ಲುಗಳಂತೂ ಬಟ್ಟೆ ಒಗೆಯಲು, ತೋಡು ದಾಟಲು ಬಳಸಲ್ಪಡುತ್ತಿವೆ. ಕೆಲವೆಡೆ ದೇವಾಲಯಗಳಲ್ಲೂ ಚಪ್ಪಡಿಯಂತೆ ಹಾಕಲಾಗಿದೆ. ಹಾಗೇ ಬಿಟ್ಟರೆ ಏನೋ ಕೆಟ್ಟದಾಗಿ ಬಿಡುತ್ತದೆ ಎಂಬ ಮೂಢನಂಬಿಕೆಯೂ ಇದೆ‌ ಎಂಬ ಮಾತು ಕಣ್ತೆರೆಸುವಂತಿತ್ತು. ಧಾರ್ಮಿಕ ಆಚರಣೆಗಳಿಗೆ ವಿಜ್ಞಾನದ ಬಿಸಿ ಯಾವ ರೀತಿ ತಾಗಿದೆ ಎಂಬುದನ್ನು ವಿವರಿಸಲು ಕೊಟ್ಟ ಉದಾಹರಣೆಗಳು ಹಾಸ್ಯ ಎಂಬಂತೆ ಕಂಡರೂ ನಿಜಕ್ಕೂ ಗಂಭೀರ. ಜೀರ್ಣೋದ್ಧಾರದ ಹೆಸರಲ್ಲಿ ಮೂಲ ಸ್ವರೂಪವನ್ನು ಬದಲಿಸುವ ಬಗೆ, ದೇವರಿಗೆ ಪ್ಯಾಕೆಟ್ ಹಾಲು, ಪೂಜೆ ಮಾಡಲು- ಆರತಿ ಎತ್ತಲೂ- ತೀರ್ಥ ಕೊಡಲೂ ಮೆಷಿನ್ ಬಳಕೆ ವಿಜ್ಞಾನ ನಮ್ಮನ್ನು ನಿಯಂತ್ರಿಸುತ್ತಿರುವುದಕ್ಕೆ ಒಂದು ಉದಾಹರಣೆ ಅಷ್ಟೆ. ನಮ್ಮ‌ ದೇಶದ ಶ್ರೀಮಂತ ಇತಿಹಾಸ...

ಶಿಕ್ಷಕನಿಗೆ ಆತ್ಮತೃಪ್ತಿಯೇ ಆಸ್ತಿ...

ಇಮೇಜ್
ಆಗಷ್ಟೇ ಶಾಲೆಗೆ ಹೋಗಲು‌ ಆರಂಭಿಸಿರುವ ಮಗುವಿನ ಎದುರಲ್ಲಿ ಅದರ ಟೀಚರ್ ನ್ನು ದೂರುವ ಸಾಹಸ ಮಾಡದಿರಿ...ಏಕೆಂದರೆ ಕ್ಷಣಮಾತ್ರದಲ್ಲಿ ನೀವು ಅದರ ಪಾಲಿಗೆ ವಿಲನ್ ಆಗಿಬಿಡುತ್ತೀರಿ! ಟೀಚರ್ ಎಂಬುದು ಅದರ ಪಾಲಿಗೆ ಪರಮಜ್ಞಾನಿ...ಅದೇ ಪರಮ ಸತ್ಯ. ಮುಗ್ದತೆ, ಕ್ರಿಯಾಶೀಲತೆ, ನಂಬಿಕೆ, ಪ್ರೀತಿಯ ಮೂಲಕ ದೇವರೆಂಬ ಪಟ್ಟ ಗಳಿಸುವ ಮಕ್ಕಳ ಈ ಪ್ರೀತಿಗೆ ಯಾವುದೂ ಸಮವಲ್ಲ... ಶಿಕ್ಷಕ ವೃತ್ತಿಗೆ ಇರುವ ಬೆಲೆಯೇ ನಮ್ಮನ್ನು ಅದರತ್ತ ಸೆಳೆದುಬಿಡುತ್ತದೆ. ಸರ್ವಸ್ವವನ್ನೂ ವೃತ್ತಿಗೆ ತೇಯುವ ಮನಸ್ಸು ಕೊಡುತ್ತದೆ. ಈಗ ಶಿಕ್ಷಕ ವೃತ್ತಿಯ ಬೆಲೆ ಕಡಿಮೆಯಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ. ‌ಅದರ ಸ್ಥಾನವನ್ನು ಯಾರೂ ಆಕ್ರಮಿಸಲೂ ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಶಿಕ್ಷಕನಿಗೆ ಇನ್ನೂ ಮೇಲಿನ ಸ್ಥಾನ ಸಿಗಬೇಕೆನಿಸುವುದು ಸಹಜ. ಪುಟಾಣಿ ಕಂದಮ್ಮಗಳನ್ನು‌ ತಾಯಿಯಂತೆ ಪಾಲಿಸುವ ಅಂಗನವಾಡಿ ಪಾಲಕಿಯರಿಗೆ ದಕ್ಕುವುದಾದರೂ ಏನು ...ಆತ್ಮತೃಪ್ತಿ ಮಾತ್ರ. ಶಿಕ್ಷಕರಲ್ಲೂ ಅತಿಥಿ ಶಿಕ್ಷಕ‌ ಎಂಬ ಪರಿಕಲ್ಪನೆಯನ್ನು ಯಾರು ಸೃಷ್ಟಿಸಿದರೋ‌ ಏನೋ. ಅಂಗನವಾಡಿ ‌ಸಹಾಯಕಿಯರ ಸ್ಥಿತಿ ಕಾಲೇಜು ‌ಶಿಕ್ಷಕರಿಗೂ‌ ಬಂದುಬಿಟ್ಟಿದೆ. ಪಿಎಫ್ ಬಿಡಿ, ಕನಿಷ್ಠ ಗುರುತು ಚೀಟಿಯೂ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ. ಲೇಬರ್ ಲಾ ಎನ್ನುವುದಂತೂ‌ ದೂರದ ಬೆಟ್ಟ. ಕ್ಲಾಸ್ ಮಾಡಿದರಷ್ಟೇ ಕಾಂಚಾಣ ಕೈ ಸೇರುವುದು. ಹುಷಾರಿಲ್ಲ ಎಂದು ಮನೆಯಲ್ಲಿ ಕೂತರೇ ತಿಂಗಳ ಕೊನೆಯಲ್ಲಿ ಕೈ ಕಾಲಿ ಗ್ಯಾರಂಟಿ. ತ...

ಹೆಂಡತಿಗೆ ಒಂದೇ ದಿನ?!

ಇಮೇಜ್
ಮದುವೆ ಎಂಬ ಬಂಧನ‌ ಎಂದು ಯಾರಾದರೂ ಅಂದರೆ ನನಗೆ ಇನ್ನಿಲ್ಲದ ಸಿಟ್ಟು ಬರುತ್ತಿತ್ತು. ಆದರೆ ಈ‌ ಏಳು ವರ್ಷಗಳಲ್ಲಿ ಚೆನ್ನಾಗಿ ಅರ್ಥವಾಗಿದೆ ಅದೊಂದು ಮಧುರ ಬಂಧನ‌ ಎಂದು. ಪ್ರತಿ‌ದಿನ‌ ನಮ್ಮ ಜೀವದ ಗೆಳತಿಯೊಂದಿಗೆ ದಿನ‌ ಆರಂಭಿಸುವ, ಕಳೆಯುವ, ಕಲಿಯುವ ಭಾಗ್ಯ ಯಾರಿಗಿದೆ. ಕೇಳದೇ ಕಷ್ಟಕ್ಕೆ ಹೆಗಲಾಗುವ, ಯಾರೊಂದಿಗೂ ಹೇಳಲಾಗದ ನೋವಿಗೆ ಕಿವಿಯಾಗುವ, ಎಂತಹ ಸಂತೋಷದಲ್ಲೂ ಮೈಮರೆಯದ, ತನ್ನ ಖುಷಿಯನ್ನು ಕಡೆಗಣಿಸುವ ಜೀವಕ್ಕೆ ಏನೆಂದು ಹೇಳಲಿ....ಆಕೆ‌ ಬರೀ ಹೆಂಡತಿಯೆಂದರೆ ತಪ್ಪಾದೀತು. ತಾಯಿಯೊಂದಿಗೆ ಸಲಿಗೆ ಕಡಿಮೆಯಾದಾಗ ಕಾಡುವ ಶೂನ್ಯಕ್ಕೆ ಆಕೆಯೇ ಉತ್ತರವೇನೋ...