ಆಗ ಕೆಸರು ಈಗ ಧೂಳು...

ಮಳೆಗಾಲದ ರಸ್ತೆ ಪರಿಸ್ಥಿತಿ ನೋಡಿ ಯಾರಿಗೋ ಸಹಜವಾಗಿ ಹೀಗನಿಸಿದೆ! 


ಅಂತೂ‌ ಮಳೆಗಾಲ‌ ಮುಗೀತು ಕೆಸರೆರಚಾಟ ತಪ್ಪಿತು ಎಂದು ಮಂಗಳೂರಿನ ಜನರು ನಿಟ್ಟುಸಿರು ಬಿಡುತ್ತಿರುವಂತೆ
ಧೂಳಿನ‌ ಸಮಸ್ಯೆ ಆಸೆಯನ್ನು ಮಬ್ಬಾಗಿಸಿದೆ.

ನಗರದ ಚಿಕ್ಕ‌-ದೊಡ್ಡ ಗುಂಡಿಗಳಲ್ಲಿ ಯಾವುದೇ ಬೇಧವಿಲ್ಲದೆ ಭರಪೂರ  ಧೂಳು‌ ತುಂಬಿಕೊಂಡಿದೆ.
ಮಂಗಳೂರಿಗೆ ಜನರನ್ನು ಸ್ವಾಗತಿಸುವ ಪಡೀಲ್, ಪಂಪ್ ವೆಲ್, ನಂತೂರುಗಳಲ್ಲಿ ರಸ್ತೆ ಕಿತ್ತು ವಾಹನ ಸವಾರರ ಸಾಮರ್ಥ್ಯ, ತಾಳ್ಮೆ ಪರೀಕ್ಷಿಸುತ್ತಿವೆ. ಧೂಳಿನ ಸ್ನಾನಕ್ಕೆ ಹೆದರಿ‌ ಪಾದಚಾರಿಗಳು, ದ್ವಿಚಕ್ರ ಸವಾರರು, ಜೊತೆಗೆ ಸಂಚಾರಿ ಪೊಲೀಸರು ಬೆವರುತ್ತಿದ್ದಾರೆ. ದಂಡ ವಿಧಿಸಲು ಗಾಡಿಯ ನಂಬರ್ ಪ್ಲೇಟ್ ನೋಡುವುದೇ ಸವಾಲಿನ ಕೆಲಸವಾಗಿದೆ.

ಮಳೆಗಾಲದಲ್ಲಿ ಮಳೆಯ ಸಮಸ್ಯೆ, ಈಗಲಾದರೂ ರಸ್ತೆ ಸರಿ‌ಮಾಡಿ ಎಂದು‌ ಜನರು  ಜಪ ಆರಂಭಿಸಿದ್ದಾರೆ. ನಗರದ ಮರ್ಯಾದೆ ಉಳಿಸಿ ಎಂದು ಮಾಧ್ಯಮಗಳು‌ ಎಚ್ಚರಿಸುತ್ತಿವೆ. 'ಸ್ಮಾರ್ಟ್ ಸಿಟಿ'ಗೆ ಈ‌ ಸ್ಥಿತಿ ಬರಬಾರದಿತ್ತು ಎಂದು ಕೇಳದ ಕಿವಿಗಳಿಗೆ ಹೇಳಲಾಗುತ್ತಿದೆ. ಫಂಡ್ ಸಮಸ್ಯೆ ಯಿಂದ ತಲೆನೋವು ಎಂದು ತಿಳಿದುಬಂದಿದೆ. ಈ ಮಧ್ಯೆ ವಾಹನ‌ ಸರ್ವಿಸ್ ಗೆ ಮತ್ತೆ ಮತ್ತೆ ಬರುವುದನ್ನು‌ ಕಂಡು ಸರ್ವಿಸ್ದಾರರು ' ಒಂತೆ ದಿನ ಸಮಸ್ಯೆ ಇಂಚನೆ ಇತ್ತುಂಡಲಾ ಆವು' ಎನ್ನುತ್ತಿದ್ದಾರಂತೆ!

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!