ಟೈಮ್ ಹೋಗೋದೇ ಗೊತ್ತಾಗಲ್ಲ , ಅನ್ನುತ್ತಲೇ ವರ್ಷದ ಕೊನೆಗೆ ಬಂದು ನಿಂತಿದ್ದೇವೆ .! ಕಷ್ಟವೋ ಸುಖವೋ , ನಗುವೋ ಅಳುವೋ , ಹುಟ್ಟೋ ಸಾವೋ ಏನೇ ಆದರೂ ಈ ಕಾಲವನ್ನು ತಡೆಯೋರು ಯಾರೂ ಇಲ್ಲ ನೋಡಿ … ಇದೊಂಥರಾ ಸಿನಿಮಾದಂತೆ . ಕಥೆ ನಾವು ಬರೆದಿಲ್ಲ . ನಿರ್ದೇಶನವೂ ನಮ್ಮದಲ್ಲ . ಅದರ ಮೇಲೆ ಯಾವ ನಿಯಂತ್ರಣವೂ ಇಲ್ಲ . ಆದ್ರೂ ಸಿನಿಮಾ ಚೆನ್ನಾಗಿರ್ಬೋದು ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ಗೆ ಹೋಗ್ತೇವೆ . ಕೊನೆಗೆ ಸಕತ್ತಾಗಿದೇ ಅಂತಾನೋ , ಡಬ್ಬಾ ಮೂವೀ ಅಂತಾನೋ , ಕೆಲವೊಂದ್ಸಲ ಪರ್ವಾಗಿಲ್ಲ ಅಂತಾನೋ ಅಂದ್ಕೋತೀವಿ . ಅಂತೂ ಸಿನಿಮಾ ಮುಗೀಲೇ ಬೇಕು , ನಾವು ಮನೆಗೆ ವಾಪಸ್ ಬರ್ಲೇಬೇಕು . ನಿರೀಕ್ಷೆ ಅನ್ನೋದು ಎಲ್ಲರನ್ನೂ ಆಟಾಡ್ಸುತ್ತೆ . ಸಿಹಿಯ , ಗೆಲುವಿನ , ಖುಷಿಯ , ಸುಖದ ನಿರೀಕ್ಷೆ . ಎಂತಾ ಸೋಲಿನಲ್ಲೂ , ಎಂತಾ ಗೆಲುವಿನಲ್ಲೂ ಭವಿಷ್ಯದ ನಿರೀಕ್ಷೆ ಇದ್ದೇ ಇರುತ್ತೆ . ಇರ್ಲೇಬೇಕು . ಇಲ್ಲದಿದ್ದರೆ ಅದೇ ಅಂತ್ಯ . ನಮ್ಮ ಹುಟ್ಟಿದ ಹಬ್ಬವೋ , ಹೊಸ ವರ್ಷವೋ ವಿಶೇಷವಾಗೋದು ಇದಕ್ಕೇ . ಈ ವರ್ಷ ಹೇಗಿತ್ತು ಎಂಬ ಯೋಚನೆಯೊಂದಿಗೆ , ಹೊಸ ವರ್ಷ ಹೇಗಿರಬೇಕು ಎಂಬ ಮತ್ತದೇ ನಿರೀಕ್ಷೆ . ಇದನ್ನು ಕುತೂಹಲ , ಅಶಾಭಾವ ಏನಾದರೂ ಅನ್ನಿ . ಹೊಸ ವರ್ಷಕ್ಕೆ ಯೋಜನೆ ಬೇಕಾ ? ಯೋಜನೆಯಿಲ್ಲದಿದ್ದರೆ ನಮ್ಮ ಜೀವನ ಅದೃಷ್ಟವನ್ನೇ ಅವಲಂಬಿಸಿರುತ್ತದೆ . ಹಗ್ಗದ ಮೇಲಿನ ನಡಿಗೆಗಿಂತ ಮುಳ್ಳಿನ ದಾರಿಯೇ ಆದೀತಲ್ಲವೇ ? ಹೊಸ ವರ್ಷದಲ್ಲಿ ...
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ