ಮತ್ತೆ ಕೈಯಲ್ಲಿ ಕ್ಯಾಮರಾ...!
ಶ್ರೀನಿವಾಸನ ಕೈಯಲ್ಲಿ ಮತ್ತೆ ಕ್ಯಾಮರಾ ಬಂದಿದೆ... ಎರಡು ವರ್ಷಗಳ ಹಿಂದೆ ಕ್ಯಾಮರಾ ಕೈಚಳಕ ತೋರಿಸುತ್ತದ್ದ ಹುಡುಗ ತನ್ನ ಪ್ರೀತಿಯ ಪ್ರವೃತ್ತಿಗೆ ಇಷ್ಟವಿಲ್ಲದಿದ್ದರೂ ಸ್ವಲ್ಪ ಬಿಡುವು ನೀಡಬೇಕಾಗಿತ್ತು. ಬದಲಾದ ಶ್ರೀನಿವಾಸನಿಗೆ ಕ್ಯಾಮರಾ ಹಿಡಿಯಲು ಏನೋ ಹಿಂಜರಿಕೆ...ಯಾರು ಏನು ಹೇಳುತ್ತಾರೋ, ನನ್ನಿಂದ ಆಗುತ್ತೋ ಇಲ್ಲವೋ..ಹೀಗೆ ಹಲವು ಗೊಂದಲಗಳು! ಇತ್ತೀಚೆಗೆ ಕ್ಯಾಮರಾ ಕಂಡರೆ ಏನೋ ಸೆಳೆತ...ಅದನ್ನು ಬಿಟ್ಟಿರಲಾರದಷ್ಟು. ಅಂತೂ ವಿವಿ ಕಾಲೇಜಿನ ಶನಿವಾರದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಇದಕ್ಕೆ ಮುಹೂರ್ತ ಒದಗಿಸಿತ್ತು. ಶ್ರೀನಿವಾಸ ಕೊನೆಗೂ ಕ್ಯಾಮರಾ ಹಿಡಿದಿದ್ದಾನೆ. ತನ್ನ ಕೌಶಲ್ಯ ಕಮ್ಮಿಯೇನಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಕ್ಯಾನನ್ ಕ್ಯಾಮರಾಕ್ಕೂ ಖುಷಿಯಾಗಿರಬಹುದೇನೋ...!
ಅದೇನೇ ಇರಲಿ ಶ್ರೀನಿಯ ಕೈಯಲ್ಲಿ ಕ್ಯಾಮರಾ ಕಂಡು ಪ್ರಾಧ್ಯಾಪಕರಿಗಂತು ಅಪಾರ ಖುಷಿ...ಹೆಮ್ಮೆ. ಇಷ್ಟಲ್ಲದೆ ಹಾಡು ಹೇಳಿ ರಂಜಿಸಿದ್ದಾನೆ. ಸ್ಪೀಡ್ ಪೈಂಟರ್ ಅಭಿಷೇಕ್ ಅಂಚನ್ ಗೆಳೆಯನಿಗೆ ಜೊತೆಯಾಗಿದ್ದಾನೆ. ಇಬ್ಬರ ಹಾಡು- ಬಣ್ಣಗಳ ಜುಗಲ್ಬಂದಿಗೆ ವೀಕ್ಷಕರು ಎದ್ದು ನಿಂತು ಶಹಬ್ಬಾಸ್ ಎಂದಿದ್ದಾರೆ. ಅಂತೂ ಕಾಲ ಮತ್ತೆ ಬದಲಾಗುತ್ತಿದೆ. ವಿಶ್ವಾಸದ ಬುಗ್ಗೆ ಮುಂದೆ ಅದೂ ಮಂಡಿಯೂರಿದೆ...

👏🙏🙏🙏🙏🙏
ಪ್ರತ್ಯುತ್ತರಅಳಿಸಿ