ಮಕ್ಕಳ ಕಾಲೇಜು, ಹೆತ್ತವರ ಕನಸು...

'ಕೆಲವು ಕಾಲೇಜುಗಳಲ್ಲಿ ನಮ್ಮನ್ನು ನಡೆಸಿಕೊಳ್ಳುವ ರೀತಿ ರೇಜಿಗೆ ಹುಟ್ಟಿಸುತ್ತದೆ ಆದರೆ ಇಲ್ಲಿ ಹಾಗಿಲ್ಲ', 'ಕಾಲೇಜಿನ ಸೇರಿದ ನಮ್ಮ ಹುಡುಗ ಬದಲಾಗಿದ್ದಾನೆ', 'ಇಲ್ಲಿನ ಮಧ್ಯಾಹ್ನದ ಊಟದ ಯೋಜನೆಯನ್ನು ಬೇರೆಲ್ಲೂ ನೋಡಿಲ್ಲ'...ಹೀಗೆ ಪೋಷಕರು ಕಾಲೇಜಿನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದರೆ ಪ್ರಾಂಶುಪಾಲರು, ಶಿಕ್ಷಕರ ಮನಸ್ಸಲ್ಲಿ ಸಂತಸ, ಸಾಧಿಸಿದ ಸಂತೃಪ್ತಿ...
ಇದು ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮೊದಲ ಸಭೆಯಲ್ಲಿ ಕಂಡುಬಂದ‌ ನೋಟ. ಪೋಷಕರ ಸಲಹೆಗಳನ್ನು ಪಡೆದ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ಸರ್ಕಾರಿ ಕಾಲೇಜಾಗಿ ಆರ್ಥಿಕ ಸವಾಲುಗಳ ನಡುವೆಯೂ ವಿದ್ಯಾರ್ಥಿಗಳಿಗೆ ಹೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ವಿದ್ಯಾರ್ಥಿ ಸ್ನೇಹಿ ಸಾಫ್ಟ್‌ವೇರ್ ಜಾರಿಗೊಳಿಸುವ, ಬಿಸಿಯೂಟ ಯೋಜನೆಯನ್ನು ವಿಸ್ತರಿಸುವ ಭರವಸೆ ನೀಡಿದರು. ಜೊತೆಗೆ ಪೋಷಕರಿಗೂ ಮಕ್ಕಳ ಕುರಿತಾಗಿ ವಹಿಸಬೇಕಾದ ತಾಳ್ಮೆಯ ಕಿವಿಮಾತು ಹೇಳಿದರು.
ಹಿರಿಯ ಪ್ರಾಧ್ಯಾಪಕರ ಪ್ರಕಾರ ಈ ಬಾರಿಯಷ್ಟು ದೊಡ್ಡ ಸಂಖ್ಯೆಯ ಪೋಷಕರನ್ನು ಇತ್ತೀಚಿನ ವರ್ಷಗಳಲ್ಲಿ ಯಾವ ಸಭೆಯಲ್ಲೂ ಕಂಡಿರಲಿಲ್ಲ. ಮಕ್ಕಳ ಕಲಿಕಾಧಾಮವನ್ನು ಕಂಡು ಶಿಕ್ಷಕರನ್ನು ಭೇಟಿ ಮಾಡುವ ಅವರ ಆಕಾಂಕ್ಷೆ ಈಡೇರಿತು. ಇನ್ನು ೧೫೦ ನೇ ವರ್ಷಾಚರಣೆಗೆ ಸಿದ್ಧವಾಗುತ್ತಿರುವ ಕಾಲೇಜಿಗೆ ಹೊಸ ಭರವಸೆ ನೀಡಿತು.
ಸಂಘದ ಕಾರ್ಯಾಧ್ಯಕ್ಷರಾಗಿ ಹೇಮಲತಾ ಎನ್ ಆಯ್ಕೆಯಾದರು. ಮೂವರು ಉಪಾಧ್ಯಕ್ಷರು, ಓರ್ವ ಸಹಕಾರ್ಯದರ್ಶಿ ಮತ್ತು ಆರು ಮಂದಿ ಸದಸ್ಯರ ಆಯ್ಕೆಯೂ ನಡೆಯಿತು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!