ಪೋಸ್ಟ್‌ಗಳು

ʼಸೂಪರ್ ಪವರ್ʼ ಬಲೂನಿಗೆ ಚುಚ್ಚಿದ ಕೊರೋನಾ ಸೂಜಿ

ಇಮೇಜ್
ಟಾರ್ಗೆಟ್ ‌ 2020… ಹೌದು , 21 ನೇ ಶತಮಾನದ ಆರಂಭದ ವರ್ಷಗಳಲ್ಲೇ ಹಲವು ಹೊಸತುಗಳ ಮೂಲಕ ಜಗತ್ತಿನ ಸೂಪರ್ ‌ ಪವರ್ ‌ ರಾಷ್ಟ್ರವಾಗಬೇಕು ಎಂಬ ಕನಸು ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಿಗಿತ್ತು . ಶತ್ರು ರಾಷ್ಟ್ರಗಳ ಸದ್ದಡಗಿಸಬಲ್ಲ ಅಣ್ವಸ್ತ್ರಗಳನ್ನು ತಯಾರಿಸುವ ಹಪಾಹಪಿ , ಜೈವಿಕ ಸಮರಕ್ಕೂ ಒಳಗಿಂದಲೇ ಸಿದ್ಧತೆ , ಬಾಹ್ಯಾಕಾಶದಲ್ಲೂ ಏಕಸ್ವಾಮ್ಯ ತಯಾರಿಸುವ ದುರಾಸೆ , ಆರ್ಟಿಫಿಶಿಯಲ್ ‌ ಇಂಟೆಲಿಜೆನ್ಸ್ ‌, ಮೆಷಿನ್ ‌ ಲ್ಯಾಂಗ್ವೆಜ್ ‌ ಹೀಗೆ ತಂತ್ರಜ್ಞಾನದ ನಾಗಾಲೋಟ … ಈ ನಡುವೆ ವಿಶ್ವದಲ್ಲಿ ಅಪಾಯಕಾರಿ ವೇಗದಲ್ಲಿ ಹೆಚ್ಚುತ್ತಿರುವ ಹಲವು ಬಗೆಯ ಮಾಲಿನ್ಯಗಳು , ಅರಣ್ಯನಾಶ , ವನ್ಯಜೀವಿಗಳ ಆರ್ತನಾದ ಯಾವುದೂ ಕೇಳಲಿಲ್ಲ . ಆದರೆ ಕೊನೆಗೂ ಆಗಿದ್ದೇನು ? ದೌರ್ಜನ್ಯಗಳಿಂದ ಜರ್ಝರಿತಗೊಂಡ ಪ್ರಕೃತಿ , ಮನುಷ್ಯ ಮಾಡಿದ ಕೆಲಸಕ್ಕೆ ತಕ್ಕ ಶಾಸ್ತಿಯನ್ನೇ ಮಾಡಿದೆ . ಕೊರೋನಾ ಎಂಬ ಕಾಣದ ಶತ್ರು ಕೊಟ್ಟ ಏಟಿಕೆ , ಮನುಷ್ಯನಿಗೆ ತನ್ನ ಸ್ವಾರ್ಥ ತುಂಬಿದ , ಉಪಕಾರ ಸ್ಮರಣೆಯಿಲ್ಲದ , ಪರೋಪಕಾರ ಭಾವವಿಲ್ಲದ , ನಿಸರ್ಗದೊಂದಿಗೆ ಬಂಧವಿಲ್ಲದ , ಗೊತ್ತು ಗುರಿಯಿಲ್ಲದ ಜೀವನ ಅರಿವಿಗೆ ಬಂದಿದೆ . ಸಂಕಷ್ಟ ಕಾಲದಲ್ಲಿ ಕಂಡುಬಂದ ಯಾವತ್ತೂ ಕಲ್ಪಿಸಿಕೊಳ್ಳದಿದ್ದ ವೈರುಧ್ಯಗಳು   ಇವೆಲ್ಲಕ್ಕೂ ಕನ್ನಡಿ ಹಿಡಿದಿವೆ. ಇದು ಹಣಕ್ಕಾಗಿ ಏನು ಮಾಡಲು ಹೇಸದ ಕಾಲ . ಮನೆ , ಕಾರು , ಬಂಗಾರ ...

ಅಮ್ಮನಿಗೆ ಯಾವತ್ತೂ ಅನುಮಾನ!

ಇಮೇಜ್
ಈ ಅಮ್ಮನಿಗೆ ಯಾವತ್ತೂ   ಅನುಮಾನ … ಯಾರು ಎತ್ತಿದರೂ ಅಂದಾಳು   ' ಜೋಪಾನ ʼ ಕೂಸು ಸೊಂಟದಲ್ಲಿದ್ದರೆ ಅದೆಂತಾ ಬಿಗುಮಾನ ! ಎಷ್ಟು ಅಲಂಕರಿಸಿದರೂ ಇಲ್ಲ ಸಮಾಧಾನ ಯಾರ ದೃಷ್ಟಿ ತಾಕೀತೋ , ಮತ್ತೆ ಅನುಮಾನ ! ಆಕೆಯರಿಯಳೆ ಕಂದನ ಹಸಿವು - ಬಾಯರಿಕೆಯನ್ನ ಕೂಸು ತೇಗಿದರಷ್ಟೇ ಆಕೆಗೆ ಸಮಾಧಾನ ತಾನೆಂದಿಗೂ ಉಣ್ಣಳು ಬಿಟ್ಟು ಕರುಳ ಬಳ್ಳಿಯನ್ನ ಅದೆಲ್ಲಿ ಸೊರಗೀತೋ , ಅಮ್ಮನಿಗೆ ಅನುಮಾನ ಬಿಟ್ಟೇನೆಂದರೂ   ಬಿಡಳು ಆಕೆ   ' ಕಂದ ʼ ನನ್ನ ಯಾರು ಬೈದಾರು , ಹೊಡೆದಾರು ಎಂಬ ಚಿಂತೆಯನ್ನ ಹೇಳ್ವಳು ಕಳಬೇಡ , ಕೊಲಬೇಡ ಎಂಬ ಮಾತನ್ನ ಕಾಣ್ವಳು ಕಂದನ ಭವಿಷ್ಯದ ಸಿಹಿಗನಸನ್ನ !   ʼ ಇದೆಂತಾ , ನಿಂಗೊತ್ತಿಲ್ಲ ಈ ಹೊಸ ಜಮಾನ ʼ ʼ ಕಂದ ʼ ಬೈದೇ ಬಿಟ್ಟ ʼ ಹಳೆಯ ʼ ಅಮ್ಮನನ್ನ ʼ ಏನೋ ಎರಡು ಮಾತಂದ ʼ , ಆಕೆಗಿಲ್ಲ ಅಸಮಧಾನ ! ಬಿಡಳಾಕೆ ʼ ಕಂದ ʼ ನೊಂದಿಗೆ ಮಾತನ್ನ ʼ ಆಕೆ ʼ ಬಂದರೂ ಅಮ್ಮನಿಗೆ ಮತ್ತೆ ಅನುಮಾನ ಬಿಡಳು ʼ ಕಂದನಿಗೆ ʼ ಎಲ್ಲಿ ಕುಂದಾದೀತು ಎಂಬ ಭಯವನ್ನ ಕೊನೆಗೊಮ್ಮೆ ತುಸು ಬೇಸರ , ಜೊತೆಗೆ ನೋವಡಗಿದ ಮೌನ ಆ ವಾತ್ಸಲ್ಯವೋ ಅದು ಸಾಗರ , ಅರಿತವರುಂಟೇ ಇದನ್ನ … ಈ ಅಮ್ಮನಿಗೆ ಯಾವತ್ತೂ ಅನುಮಾನ …

ಎಂಟರ ಹಿಂದಿನ ನಂಟು !

ಇಮೇಜ್
ಅಂ ದಹಾಗೆ    ನಾನು - ಅಶ್ವಿನಿ ಪ್ರೀತಿಸಿ ಜಂಟಿಯಾಗಿ   ಇವತ್ತಿಗೆ ( ಏಪ್ರಿಲ್ ‌ 12) ಭರ್ತಿ ಎಂಟು ವರ್ಷ . ಆದರೂ ‘ ಗುರು , ನಿಂದು ಲವ್ ‌ ಮ್ಯಾರೇಜಾ ʼ ಎಂದು ಕೇಳುವ ನನ್ನ ಹಳೆಯ ಸ್ನೇಹಿತರ , ಸಹಪಾಠಿಗಳ ಸಂಖ್ಯೆಗೇನೂ ಇವತ್ತಿಗೂ ಕಡಿಮೆಯಿಲ್ಲ . ಅವರಿಗೆ ಈ ʼ ಗುರು ʼ   ಮತ್ತು ‘ ಲವ್ ‌ ಮ್ಯಾರೇಜ್ ‌ ’ ನಡುವೆ ಇರುವ ಲಿಂಕೇ ಅರ್ಥ ಆಗ್ತಿಲ್ಲ . ನನಗೇ ಅರ್ಥವಾಗಿಲ್ಲ ಎಂದಮೇಲೆ ಅವರಿಗೆಲ್ಲಿಂದ ಅರ್ಥವಾಗಬೇಕು ! ನಾನು ಡಿಗ್ರಿ ಕ್ಲಾಸಲ್ಲೇ ಸಿಕ್ಕಾಪಟ್ಟೆ ‘ ಡೀಸೆಂಟ್ ‌ ʼ, ‘ ರಿಸರ್ವ್ಡ್ ʼ, ಎಂಬ ಪಟ್ಟ ಗಟ್ಟಿಸಿಕೊಂಡಿದ್ದೆ . ಕಾಲೇಜಲ್ಲೇ ತಮ್ಮ ಹವಾ ಸೃಷ್ಟಿಸಿಕೊಂಡಿದ್ದ ಸ್ನೇಹಿತರಿಗೆ ನಾನು ಒಗ್ಗಿಬರದ ಆಸಾಮಿಯಾಗಿದ್ದೆ ! ಹಾಗಂತ ನಾನು ಸಿಕ್ಕಾಪಟ್ಟೆ ರಿಸರ್ವ್ಡ್ ‌ ಅಂತೇನೂ ಇರಲಿಲ್ಲ . ಎಲ್ಲರಲ್ಲೂ ಮಾತಾಡುವ ಆದರೆ ಯಾರಿಗೂ ಚಡ್ಡಿ ದೋಸ್ತ್ ‌ ಅನ್ನಿಸಿಕೊಳ್ಳದ ಕ್ಯಾಟಗರಿ . ನನಗೆ ಅವರೆಂದರೆ ಅಚ್ಚರಿ ಹೆಮ್ಮೆ , ಅವರಿಗೋ ನನ್ನ ಬಗ್ಗೆ ಕರುಣೆ ! ಡಿಗ್ರಿ ಕಳೆದು ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಯೂ ಹೆಚ್ಚೇನೂ ಬದಲಾವಣೆ ಆಗಲಿಲ್ಲ . ಕೆಲಸದ ಅನುಭವದಿಂದ ಒಂದಷ್ಟು ಕಲಿಯುವ - ಕಲಿಸುವ ಪರಿಪಾಠ ಒಲಿದಿತ್ತು ಅಷ್ಟೆ . ನಾನೂ ಲೆಕ್ಚರರ್ ‌ ಆಗಬೇಕು , ಅದಕ್ಕಾಗಿ ರೆಗ್ಯುಲರ್ ‌ ಎಂ . ಸಿ . ಜೆ ಮಾಡಬೇಕು ಎಂ...