ಎಂಟರ ಹಿಂದಿನ ನಂಟು !
ಅಂದಹಾಗೆ ನಾನು- ಅಶ್ವಿನಿ ಪ್ರೀತಿಸಿ ಜಂಟಿಯಾಗಿ ಇವತ್ತಿಗೆ (ಏಪ್ರಿಲ್ 12) ಭರ್ತಿ ಎಂಟು ವರ್ಷ. ಆದರೂ ‘ಗುರು, ನಿಂದು ಲವ್ ಮ್ಯಾರೇಜಾʼ ಎಂದು ಕೇಳುವ ನನ್ನ ಹಳೆಯ ಸ್ನೇಹಿತರ, ಸಹಪಾಠಿಗಳ ಸಂಖ್ಯೆಗೇನೂ ಇವತ್ತಿಗೂ ಕಡಿಮೆಯಿಲ್ಲ. ಅವರಿಗೆ ಈ ʼಗುರುʼ ಮತ್ತು ‘ಲವ್ ಮ್ಯಾರೇಜ್’ ನಡುವೆ ಇರುವ ಲಿಂಕೇ ಅರ್ಥ ಆಗ್ತಿಲ್ಲ. ನನಗೇ ಅರ್ಥವಾಗಿಲ್ಲ ಎಂದಮೇಲೆ ಅವರಿಗೆಲ್ಲಿಂದ ಅರ್ಥವಾಗಬೇಕು!
ನಾನು ಡಿಗ್ರಿ ಕ್ಲಾಸಲ್ಲೇ ಸಿಕ್ಕಾಪಟ್ಟೆ ‘ಡೀಸೆಂಟ್ʼ, ‘ರಿಸರ್ವ್ಡ್ʼ, ಎಂಬ ಪಟ್ಟ ಗಟ್ಟಿಸಿಕೊಂಡಿದ್ದೆ. ಕಾಲೇಜಲ್ಲೇ ತಮ್ಮ ಹವಾ ಸೃಷ್ಟಿಸಿಕೊಂಡಿದ್ದ ಸ್ನೇಹಿತರಿಗೆ ನಾನು ಒಗ್ಗಿಬರದ ಆಸಾಮಿಯಾಗಿದ್ದೆ ! ಹಾಗಂತ ನಾನು ಸಿಕ್ಕಾಪಟ್ಟೆ ರಿಸರ್ವ್ಡ್ ಅಂತೇನೂ ಇರಲಿಲ್ಲ. ಎಲ್ಲರಲ್ಲೂ ಮಾತಾಡುವ ಆದರೆ ಯಾರಿಗೂ ಚಡ್ಡಿ ದೋಸ್ತ್ ಅನ್ನಿಸಿಕೊಳ್ಳದ ಕ್ಯಾಟಗರಿ. ನನಗೆ ಅವರೆಂದರೆ ಅಚ್ಚರಿ ಹೆಮ್ಮೆ, ಅವರಿಗೋ ನನ್ನ ಬಗ್ಗೆ ಕರುಣೆ!
ಡಿಗ್ರಿ
ಕಳೆದು ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಯೂ ಹೆಚ್ಚೇನೂ ಬದಲಾವಣೆ ಆಗಲಿಲ್ಲ. ಕೆಲಸದ ಅನುಭವದಿಂದ
ಒಂದಷ್ಟು ಕಲಿಯುವ- ಕಲಿಸುವ ಪರಿಪಾಠ
ಒಲಿದಿತ್ತು ಅಷ್ಟೆ. ನಾನೂ ಲೆಕ್ಚರರ್ ಆಗಬೇಕು, ಅದಕ್ಕಾಗಿ ರೆಗ್ಯುಲರ್ ಎಂ.ಸಿ.ಜೆ ಮಾಡಬೇಕು ಎಂದು ನಾನು ತೆಗೆದುಕೊಂಡ ಗಟ್ಟಿ ನಿರ್ಣಯ ಆ ದೇವರ ಆಟಾನಾ
ಎಂದು ಈಗಲೂ ಅನಿಸುತ್ತಿದೆ. ಇಲ್ಲದಿದ್ದರೆ ನನಗೆ ಹೊಸ ಗೆಳೆಯರ ಬಳಗ, ನನ್ನ
ಎಸ್.ಡಿ.ಎಂ
ಕಾಲೇಜಿನಲ್ಲೇ ಮತ್ತೆರಡು ವರ್ಷ
ಕಲಿಯುವ ಅವಕಾಶ ಸಿಗುತ್ತಿರಲಿಲ್ಲ. ಜೊತೆಗೆ ನನ್ನ ಒಲವಿನ ಸಂಗಾತಿ ಅಶ್ವಿನಿ ಕೂಡ…!

ಅಂತೂ
ಮನಸ್ಸಿನಲ್ಲಿರೋದನ್ನೆಲ್ಲಾ ಹೇಳಿ, ಪ್ರೀತಿ ಬೇಡವಾದರೂ
ಸ್ನೇಹ ಬಿಡಬೇಡ ಎಂದು ಇಂಗ್ಲಿಷ್ನಲ್ಲಿ (ಆ
ಇಂಗ್ಲಿಷ್ ಎಲ್ಲಿಂದ ಬಂತೋ!) ಒಂದಷ್ಟು ಉದ್ದದ ಇ-ಮೇಲ್ ಕಳಿಸಿದ್ದೂ ಆಯಿತು! ಮನಸ್ಸಲ್ಲಿ ಮಾತ್ರ
ಢವಢವ… ಏನು ಹೇಳುತ್ತಾಳೋ
ಎಂಬ ಅಂಜಿಕೆ. ನನ್ನಿಂದ ಈ
ರೀತಿಯ ಪ್ರೇಮ ನಿವೇದನೆಯನ್ನು ನಿರೀಕ್ಷೆಯೇ ಮಾಡಿರದಿದ್ದ ಆಕೆಯಿಂದ ಸಿಕ್ಕಿದ್ದು –‘ಯೋಚಿಸಿ ಹೇಳುತ್ತೇನೆʼ ಎಂಬ ಪ್ಲಾಟ್ ಪ್ರತಿಕ್ರಿಯೆ.

ಮದುವೆಯೇನೋ
ಆಯಿತು, ಜೀವನ ಸಾಗಬೇಕಲ್ಲಾ… ಅದಿನ್ನೂ ವೃತ್ತಿ ಜೀವನದ ಆರಂಭ. ಕದ್ರಿಯ ಬಾಡಿಗೆ
ಮನೆಯಲ್ಲಿ ವಾಸ. ಕನಸು
ಕಾಣಲು ಅಲ್ಲಿ ಸಮಯವಿರಲಿಲ್ಲ. ಜೊತೆಗೆ ವರ್ಷ ಮುಗಿಯುವುದರೊಳಗೆ ಬೈಕ್ ಆಕ್ಸಿಡೆಂಟ್, ಮಲೇರಿಯಾ
ಹೀಗೆ ಸಾಲು ಸಾಲು ಸಂಕಷ್ಟಗಳು…ಆದರೆ ಪಕ್ವವಾಗಿದ್ದ
ಪ್ರೀತಿ ಕಷ್ಟ ಮರೆಸಿತು. ಈಗಲೂ ಬದುಕಿನಾಟ
ಮುಂದುವರಿದಿದೆ. ಪ್ರೀತಿಯನ್ನೇ ಉಸಿರಾಡುವ, ನನ್ನ ಚಿಕ್ಕ
ಕೋಪಕ್ಕೂ ಕಣ್ಣೀರಾಗುವ, ತಾಯಿ ಹೃದಯದ, ಮಗು ಮನಸ್ಸಿನ
ಆಕೆಯಿದ್ದರೆ ಎಂಟೇನು, ನೂರೆಂಟು ದಾಟಬಲ್ಲೆ! ತಂಟೆಕೋರ ಮಗನಂತೂ ಜೀವನವನ್ನು ಮತ್ತಷ್ಟು ಸುಂದರವಾಗಿಸಿದ್ದಾನೆ.
ಜೀವನ
ಅಚ್ಚರಿಗಳ ಜೊತೆಗೆ ಅದೃಷ್ಟವನ್ನೂ ತರುತ್ತದೆ.
ಲೈಫ್
ಈಸ್ ಬ್ಯೂಟಿಫುಲ್….
So cute bava and akka....love u dears
ಪ್ರತ್ಯುತ್ತರಅಳಿಸಿThank you so much
ಅಳಿಸಿನೂರೆಂಟು ವರ್ಷ ನೂರಾರು ನೆನಪುಗಳ ಸುಂದರ ಬದುಕು ಸದಾ ನಿಮಗಿರಲಿ.. ನಿಮ್ಮ ಒಳವನ್ನ ಗೆಲುವನ್ನ ಸುಂದರವಾಗಿ ಶಬ್ಧಕ್ಕಿಳಿಸಿದ್ದೀರಿ...ಏನಂದ್ರು ಜೊತೆಗಾತಿ ...
ಪ್ರತ್ಯುತ್ತರಅಳಿಸಿಹೃತ್ಪೂರ್ವಕ ಧನ್ಯವಾದ ಮೇಡಂ. ಅವಳಿಗೆ ಬರೆಯುತ್ತಿರುವ ಚಿಕ್ಕ ಸುಳಿವು ನೀಡಿದ್ದೆ. ನಿನ್ನೆ ರಾತ್ರಿ ಟೈಪ್ ಮಾಡಿ ಕಳಿಸಿದೆ. ಖುಷಿಪಟ್ಟಳು. ಅವಳು ಚಿಕ್ಕ ವಿಷಯಗಳಿಂದಲೇ ಖುಷಿ ಪಡೆಯುವವಳು
ಅಳಿಸಿಸೂಪರ್ ಬ್ರದರ್..���� ನಿಮ್ಮಿಬ್ಬರ ಪ್ಯಾರ್ ಸೊಗಸಾಗಿ ಮೂಡಿಬಂದಿದೆ���� ಇಲ್ಲಿವರೆಗೂ ಆರೆಂಜ್ ಮ್ಯಾರೇಜ್ ಇರ್ಬೇಕು ಅಂತ ಅನ್ಕೊಂಡಿದ್ದ ನನಗೂ ನಿನ್ನ (ಮ್ಮ) ಪ್ರೇಮಕಹಾನಿ ಓದಿ ಅಚ್ಚರಿ ಎನಿಸಿತು��. ಶುಭವಾಗಲಿ ����
ಪ್ರತ್ಯುತ್ತರಅಳಿಸಿಥ್ಯಾಂಕ್ಯೂ ಪ್ರಶಾಂತ್. ಬರೆಯುವಾಗ ನಿಮ್ಮೆಲ್ಲರ ನೆನಪು, ನಮ್ಮ ಪುಂಡಿ ಗ್ಯಾಂಗ್ ಕಣ್ಮುಂದೆ ಸುಳಿದು ಹೋಯಿತು. ಇದು ಅರೇಂಜ್ಡ್ ಮ್ಯಾರೇಜೇ, ನಾವು ಲೀಡ್ ತೆಗೊಂಡ್ವಿ ಅಷ್ಟೆ!
ಅಳಿಸಿ