ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

City of Gold

ಇಮೇಜ್

ಆಗ ಕೆಸರು ಈಗ ಧೂಳು...

ಇಮೇಜ್
ಮಳೆಗಾಲದ ರಸ್ತೆ ಪರಿಸ್ಥಿತಿ ನೋಡಿ ಯಾರಿಗೋ ಸಹಜವಾಗಿ ಹೀಗನಿಸಿದೆ!  ಅಂತೂ‌ ಮಳೆಗಾಲ‌ ಮುಗೀತು ಕೆಸರೆರಚಾಟ ತಪ್ಪಿತು ಎಂದು ಮಂಗಳೂರಿನ ಜನರು ನಿಟ್ಟುಸಿರು ಬಿಡುತ್ತಿರುವಂತೆ ಧೂಳಿನ‌ ಸಮಸ್ಯೆ ಆಸೆಯನ್ನು ಮಬ್ಬಾಗಿಸಿದೆ. ನಗರದ ಚಿಕ್ಕ‌-ದೊಡ್ಡ ಗುಂಡಿಗಳಲ್ಲಿ ಯಾವುದೇ ಬೇಧವಿಲ್ಲದೆ ಭರಪೂರ  ಧೂಳು‌ ತುಂಬಿಕೊಂಡಿದೆ. ಮಂಗಳೂರಿಗೆ ಜನರನ್ನು ಸ್ವಾಗತಿಸುವ ಪಡೀಲ್, ಪಂಪ್ ವೆಲ್, ನಂತೂರುಗಳಲ್ಲಿ ರಸ್ತೆ ಕಿತ್ತು ವಾಹನ ಸವಾರರ ಸಾಮರ್ಥ್ಯ, ತಾಳ್ಮೆ ಪರೀಕ್ಷಿಸುತ್ತಿವೆ. ಧೂಳಿನ ಸ್ನಾನಕ್ಕೆ ಹೆದರಿ‌ ಪಾದಚಾರಿಗಳು, ದ್ವಿಚಕ್ರ ಸವಾರರು, ಜೊತೆಗೆ ಸಂಚಾರಿ ಪೊಲೀಸರು ಬೆವರುತ್ತಿದ್ದಾರೆ. ದಂಡ ವಿಧಿಸಲು ಗಾಡಿಯ ನಂಬರ್ ಪ್ಲೇಟ್ ನೋಡುವುದೇ ಸವಾಲಿನ ಕೆಲಸವಾಗಿದೆ. ಮಳೆಗಾಲದಲ್ಲಿ ಮಳೆಯ ಸಮಸ್ಯೆ, ಈಗಲಾದರೂ ರಸ್ತೆ ಸರಿ‌ಮಾಡಿ ಎಂದು‌ ಜನರು  ಜಪ ಆರಂಭಿಸಿದ್ದಾರೆ. ನಗರದ ಮರ್ಯಾದೆ ಉಳಿಸಿ ಎಂದು ಮಾಧ್ಯಮಗಳು‌ ಎಚ್ಚರಿಸುತ್ತಿವೆ. 'ಸ್ಮಾರ್ಟ್ ಸಿಟಿ'ಗೆ ಈ‌ ಸ್ಥಿತಿ ಬರಬಾರದಿತ್ತು ಎಂದು ಕೇಳದ ಕಿವಿಗಳಿಗೆ ಹೇಳಲಾಗುತ್ತಿದೆ. ಫಂಡ್ ಸಮಸ್ಯೆ ಯಿಂದ ತಲೆನೋವು ಎಂದು ತಿಳಿದುಬಂದಿದೆ. ಈ ಮಧ್ಯೆ ವಾಹನ‌ ಸರ್ವಿಸ್ ಗೆ ಮತ್ತೆ ಮತ್ತೆ ಬರುವುದನ್ನು‌ ಕಂಡು ಸರ್ವಿಸ್ದಾರರು ' ಒಂತೆ ದಿನ ಸಮಸ್ಯೆ ಇಂಚನೆ ಇತ್ತುಂಡಲಾ ಆವು' ಎನ್ನುತ್ತಿದ್ದಾರಂತೆ!

ತೀರ್ಥ ಕೊಡಲೂ ಮೆಷೀನು...!

ಇಮೇಜ್
(ಚಿತ್ರ ಕೃಪೆ- ಗೂಗಲ್‍) ಇತಿಹಾಸ, ಪರಂಪರೆಯ ಬಗ್ಗೆ ಇಂಚಿಂಚೂ ಮಾಹಿತಿ ಸಂಗ್ರಹಿಸಿ 'ಇಲಿಯನ್ನು ಹುಲಿ' ಎಂಬಂತೆ ಬಿಂಬಿಸುವ ದೇಶಗಳ‌ ಮಧ್ಯೆ ನಾವ್ಯಾಕೋ ಹಿಂದುಳಿಯುತ್ತಿದ್ದೇವೆ ಅನಿಸಿದ್ದು ಇತ್ತೀಚೆಗೆ ಕಾಲೇಜಿನಲ್ಲಿ ನಡೆದ ಇತಿಹಾಸ ಮತ್ತು ಪುರಾತತ್ವ ವಿಭಾಗದ ಕಾರ್ಯಕ್ರಮದಲ್ಲಿ. ಅದರಲ್ಲೂ ಮುಖ್ಯ ಅತಿಥಿ ಇತಿಹಾಸ ಸಂಶೋಧಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ಟರ ಮಾತಿನಲ್ಲಿ‌ ವಿಷಾದದ ಛಾಯೆಯಿತ್ತು.‌ ಅಭಿವೃದ್ಧಿ, ವಿಜ್ಞಾನದ ಹೆಸರಲ್ಲಿ ಇತಿಹಾಸವನ್ನು ಅಳಿಸುತ್ತಿರುವ ಬಗ್ಗೆ ಬೇಸರವಿತ್ತು. ಅನೇಕರು ಅಮೂಲ್ಯ ಶಾಸನಗಳನ್ನು ಬೇಡದ ವಸ್ತುವೆಂಬಂತೆ ಮೂಲೆಗೆ ಎಸೆಯುತ್ತಿದ್ದಾರೆ. ಕೆತ್ತನೆಯಿರುವ ಕಲ್ಲುಗಳಂತೂ ಬಟ್ಟೆ ಒಗೆಯಲು, ತೋಡು ದಾಟಲು ಬಳಸಲ್ಪಡುತ್ತಿವೆ. ಕೆಲವೆಡೆ ದೇವಾಲಯಗಳಲ್ಲೂ ಚಪ್ಪಡಿಯಂತೆ ಹಾಕಲಾಗಿದೆ. ಹಾಗೇ ಬಿಟ್ಟರೆ ಏನೋ ಕೆಟ್ಟದಾಗಿ ಬಿಡುತ್ತದೆ ಎಂಬ ಮೂಢನಂಬಿಕೆಯೂ ಇದೆ‌ ಎಂಬ ಮಾತು ಕಣ್ತೆರೆಸುವಂತಿತ್ತು. ಧಾರ್ಮಿಕ ಆಚರಣೆಗಳಿಗೆ ವಿಜ್ಞಾನದ ಬಿಸಿ ಯಾವ ರೀತಿ ತಾಗಿದೆ ಎಂಬುದನ್ನು ವಿವರಿಸಲು ಕೊಟ್ಟ ಉದಾಹರಣೆಗಳು ಹಾಸ್ಯ ಎಂಬಂತೆ ಕಂಡರೂ ನಿಜಕ್ಕೂ ಗಂಭೀರ. ಜೀರ್ಣೋದ್ಧಾರದ ಹೆಸರಲ್ಲಿ ಮೂಲ ಸ್ವರೂಪವನ್ನು ಬದಲಿಸುವ ಬಗೆ, ದೇವರಿಗೆ ಪ್ಯಾಕೆಟ್ ಹಾಲು, ಪೂಜೆ ಮಾಡಲು- ಆರತಿ ಎತ್ತಲೂ- ತೀರ್ಥ ಕೊಡಲೂ ಮೆಷಿನ್ ಬಳಕೆ ವಿಜ್ಞಾನ ನಮ್ಮನ್ನು ನಿಯಂತ್ರಿಸುತ್ತಿರುವುದಕ್ಕೆ ಒಂದು ಉದಾಹರಣೆ ಅಷ್ಟೆ. ನಮ್ಮ‌ ದೇಶದ ಶ್ರೀಮಂತ ಇತಿಹಾಸ...

ಶಿಕ್ಷಕನಿಗೆ ಆತ್ಮತೃಪ್ತಿಯೇ ಆಸ್ತಿ...

ಇಮೇಜ್
ಆಗಷ್ಟೇ ಶಾಲೆಗೆ ಹೋಗಲು‌ ಆರಂಭಿಸಿರುವ ಮಗುವಿನ ಎದುರಲ್ಲಿ ಅದರ ಟೀಚರ್ ನ್ನು ದೂರುವ ಸಾಹಸ ಮಾಡದಿರಿ...ಏಕೆಂದರೆ ಕ್ಷಣಮಾತ್ರದಲ್ಲಿ ನೀವು ಅದರ ಪಾಲಿಗೆ ವಿಲನ್ ಆಗಿಬಿಡುತ್ತೀರಿ! ಟೀಚರ್ ಎಂಬುದು ಅದರ ಪಾಲಿಗೆ ಪರಮಜ್ಞಾನಿ...ಅದೇ ಪರಮ ಸತ್ಯ. ಮುಗ್ದತೆ, ಕ್ರಿಯಾಶೀಲತೆ, ನಂಬಿಕೆ, ಪ್ರೀತಿಯ ಮೂಲಕ ದೇವರೆಂಬ ಪಟ್ಟ ಗಳಿಸುವ ಮಕ್ಕಳ ಈ ಪ್ರೀತಿಗೆ ಯಾವುದೂ ಸಮವಲ್ಲ... ಶಿಕ್ಷಕ ವೃತ್ತಿಗೆ ಇರುವ ಬೆಲೆಯೇ ನಮ್ಮನ್ನು ಅದರತ್ತ ಸೆಳೆದುಬಿಡುತ್ತದೆ. ಸರ್ವಸ್ವವನ್ನೂ ವೃತ್ತಿಗೆ ತೇಯುವ ಮನಸ್ಸು ಕೊಡುತ್ತದೆ. ಈಗ ಶಿಕ್ಷಕ ವೃತ್ತಿಯ ಬೆಲೆ ಕಡಿಮೆಯಾಗಿದೆ ಎಂಬುದು ಒಪ್ಪಲು ಸಾಧ್ಯವಿಲ್ಲ. ‌ಅದರ ಸ್ಥಾನವನ್ನು ಯಾರೂ ಆಕ್ರಮಿಸಲೂ ಸಾಧ್ಯವಿಲ್ಲ. ಆದರೂ ಕೆಲವೊಮ್ಮೆ ಶಿಕ್ಷಕನಿಗೆ ಇನ್ನೂ ಮೇಲಿನ ಸ್ಥಾನ ಸಿಗಬೇಕೆನಿಸುವುದು ಸಹಜ. ಪುಟಾಣಿ ಕಂದಮ್ಮಗಳನ್ನು‌ ತಾಯಿಯಂತೆ ಪಾಲಿಸುವ ಅಂಗನವಾಡಿ ಪಾಲಕಿಯರಿಗೆ ದಕ್ಕುವುದಾದರೂ ಏನು ...ಆತ್ಮತೃಪ್ತಿ ಮಾತ್ರ. ಶಿಕ್ಷಕರಲ್ಲೂ ಅತಿಥಿ ಶಿಕ್ಷಕ‌ ಎಂಬ ಪರಿಕಲ್ಪನೆಯನ್ನು ಯಾರು ಸೃಷ್ಟಿಸಿದರೋ‌ ಏನೋ. ಅಂಗನವಾಡಿ ‌ಸಹಾಯಕಿಯರ ಸ್ಥಿತಿ ಕಾಲೇಜು ‌ಶಿಕ್ಷಕರಿಗೂ‌ ಬಂದುಬಿಟ್ಟಿದೆ. ಪಿಎಫ್ ಬಿಡಿ, ಕನಿಷ್ಠ ಗುರುತು ಚೀಟಿಯೂ ಇಲ್ಲದೆ ಕೆಲಸ ಮಾಡಬೇಕಾದ ಪರಿಸ್ಥಿತಿ. ಲೇಬರ್ ಲಾ ಎನ್ನುವುದಂತೂ‌ ದೂರದ ಬೆಟ್ಟ. ಕ್ಲಾಸ್ ಮಾಡಿದರಷ್ಟೇ ಕಾಂಚಾಣ ಕೈ ಸೇರುವುದು. ಹುಷಾರಿಲ್ಲ ಎಂದು ಮನೆಯಲ್ಲಿ ಕೂತರೇ ತಿಂಗಳ ಕೊನೆಯಲ್ಲಿ ಕೈ ಕಾಲಿ ಗ್ಯಾರಂಟಿ. ತ...

ಹೆಂಡತಿಗೆ ಒಂದೇ ದಿನ?!

ಇಮೇಜ್
ಮದುವೆ ಎಂಬ ಬಂಧನ‌ ಎಂದು ಯಾರಾದರೂ ಅಂದರೆ ನನಗೆ ಇನ್ನಿಲ್ಲದ ಸಿಟ್ಟು ಬರುತ್ತಿತ್ತು. ಆದರೆ ಈ‌ ಏಳು ವರ್ಷಗಳಲ್ಲಿ ಚೆನ್ನಾಗಿ ಅರ್ಥವಾಗಿದೆ ಅದೊಂದು ಮಧುರ ಬಂಧನ‌ ಎಂದು. ಪ್ರತಿ‌ದಿನ‌ ನಮ್ಮ ಜೀವದ ಗೆಳತಿಯೊಂದಿಗೆ ದಿನ‌ ಆರಂಭಿಸುವ, ಕಳೆಯುವ, ಕಲಿಯುವ ಭಾಗ್ಯ ಯಾರಿಗಿದೆ. ಕೇಳದೇ ಕಷ್ಟಕ್ಕೆ ಹೆಗಲಾಗುವ, ಯಾರೊಂದಿಗೂ ಹೇಳಲಾಗದ ನೋವಿಗೆ ಕಿವಿಯಾಗುವ, ಎಂತಹ ಸಂತೋಷದಲ್ಲೂ ಮೈಮರೆಯದ, ತನ್ನ ಖುಷಿಯನ್ನು ಕಡೆಗಣಿಸುವ ಜೀವಕ್ಕೆ ಏನೆಂದು ಹೇಳಲಿ....ಆಕೆ‌ ಬರೀ ಹೆಂಡತಿಯೆಂದರೆ ತಪ್ಪಾದೀತು. ತಾಯಿಯೊಂದಿಗೆ ಸಲಿಗೆ ಕಡಿಮೆಯಾದಾಗ ಕಾಡುವ ಶೂನ್ಯಕ್ಕೆ ಆಕೆಯೇ ಉತ್ತರವೇನೋ...

ಮತ್ತೆ ಕೈಯಲ್ಲಿ ಕ್ಯಾಮರಾ...!

ಇಮೇಜ್
ಶ್ರೀನಿವಾಸನ ಕೈಯಲ್ಲಿ ಮತ್ತೆ ಕ್ಯಾಮರಾ ಬಂದಿದೆ... ಎರಡು ವರ್ಷಗಳ ಹಿಂದೆ ಕ್ಯಾಮರಾ ಕೈಚಳಕ ತೋರಿಸುತ್ತದ್ದ ಹುಡುಗ ತನ್ನ ಪ್ರೀತಿಯ ಪ್ರವೃತ್ತಿಗೆ  ಇಷ್ಟವಿಲ್ಲದಿದ್ದರೂ ಸ್ವಲ್ಪ ಬಿಡುವು ನೀಡಬೇಕಾಗಿತ್ತು. ಬದಲಾದ ಶ್ರೀನಿವಾಸನಿಗೆ ಕ್ಯಾಮರಾ ಹಿಡಿಯಲು ಏನೋ‌ ಹಿಂಜರಿಕೆ...ಯಾರು ಏನು ಹೇಳುತ್ತಾರೋ, ನನ್ನಿಂದ ಆಗುತ್ತೋ ಇಲ್ಲವೋ..ಹೀಗೆ ಹಲವು ಗೊಂದಲಗಳು! ಇತ್ತೀಚೆಗೆ ಕ್ಯಾಮರಾ ಕಂಡರೆ ಏನೋ‌ ಸೆಳೆತ...ಅದನ್ನು ಬಿಟ್ಟಿರಲಾರದಷ್ಟು. ಅಂತೂ ವಿವಿ ಕಾಲೇಜಿನ ಶನಿವಾರದ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಇದಕ್ಕೆ ಮುಹೂರ್ತ ಒದಗಿಸಿತ್ತು. ಶ್ರೀನಿವಾಸ ಕೊನೆಗೂ ಕ್ಯಾಮರಾ ಹಿಡಿದಿದ್ದಾನೆ.‌ ತನ್ನ ಕೌಶಲ್ಯ ಕಮ್ಮಿಯೇನಲ್ಲ ಎಂದು ತೋರಿಸಿಕೊಟ್ಟಿದ್ದಾನೆ. ಕ್ಯಾನನ್ ಕ್ಯಾಮರಾಕ್ಕೂ ಖುಷಿಯಾಗಿರಬಹುದೇನೋ...! ಅದೇನೇ ಇರಲಿ‌ ಶ್ರೀನಿಯ ಕೈಯಲ್ಲಿ ಕ್ಯಾಮರಾ ಕಂಡು ಪ್ರಾಧ್ಯಾಪಕರಿಗಂತು ಅಪಾರ ಖುಷಿ...ಹೆಮ್ಮೆ. ಇಷ್ಟಲ್ಲದೆ ಹಾಡು ಹೇಳಿ ರಂಜಿಸಿದ್ದಾನೆ.‌ ಸ್ಪೀಡ್ ಪೈಂಟರ್ ಅಭಿಷೇಕ್ ಅಂಚನ್ ಗೆಳೆಯನಿಗೆ ಜೊತೆಯಾಗಿದ್ದಾನೆ. ಇಬ್ಬರ ಹಾಡು- ಬಣ್ಣಗಳ ಜುಗಲ್ಬಂದಿಗೆ ವೀಕ್ಷಕರು ಎದ್ದು ನಿಂತು ‌ಶಹಬ್ಬಾಸ್ ಎಂದಿದ್ದಾರೆ. ಅಂತೂ ಕಾಲ ಮತ್ತೆ ಬದಲಾಗುತ್ತಿದೆ. ವಿಶ್ವಾಸದ ಬುಗ್ಗೆ ಮುಂದೆ ಅದೂ ಮಂಡಿಯೂರಿದೆ...

ಮಕ್ಕಳ ಕಾಲೇಜು, ಹೆತ್ತವರ ಕನಸು...

ಇಮೇಜ್
' ಕೆಲವು ಕಾಲೇಜುಗಳಲ್ಲಿ ನಮ್ಮನ್ನು ನಡೆಸಿಕೊಳ್ಳುವ ರೀತಿ ರೇಜಿಗೆ ಹುಟ್ಟಿಸುತ್ತದೆ ಆದರೆ ಇಲ್ಲಿ ಹಾಗಿಲ್ಲ', 'ಕಾಲೇಜಿನ ಸೇರಿದ ನಮ್ಮ ಹುಡುಗ ಬದಲಾಗಿದ್ದಾನೆ', 'ಇಲ್ಲಿನ ಮಧ್ಯಾಹ್ನದ ಊಟದ ಯೋಜನೆಯನ್ನು ಬೇರೆಲ್ಲೂ ನೋಡಿಲ್ಲ'...ಹೀಗೆ ಪೋಷಕರು ಕಾಲೇಜಿನ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಿದ್ದರೆ ಪ್ರಾಂಶುಪಾಲರು, ಶಿಕ್ಷಕರ ಮನಸ್ಸಲ್ಲಿ ಸಂತಸ, ಸಾಧಿಸಿದ ಸಂತೃಪ್ತಿ... ಇದು ವಿಶ್ವವಿದ್ಯಾಲಯ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮೊದಲ ಸಭೆಯಲ್ಲಿ ಕಂಡುಬಂದ‌ ನೋಟ. ಪೋಷಕರ ಸಲಹೆಗಳನ್ನು ಪಡೆದ ಪ್ರಾಂಶುಪಾಲ ಡಾ.ಉದಯ ಕುಮಾರ್ ಎಂ.ಎ, ಸರ್ಕಾರಿ ಕಾಲೇಜಾಗಿ ಆರ್ಥಿಕ ಸವಾಲುಗಳ ನಡುವೆಯೂ ವಿದ್ಯಾರ್ಥಿಗಳಿಗೆ ಹ ೆಚ್ಚಿನ ಮೂಲಭೂತ ಸೌಲಭ್ಯಗಳನ್ನು ಒದಗಿಸುವ, ವಿದ್ಯಾರ್ಥಿ ಸ್ನೇಹಿ ಸಾಫ್ಟ್‌ವೇರ್ ಜಾರಿಗೊಳಿಸುವ, ಬಿಸಿಯೂಟ ಯೋಜನೆಯನ್ನು ವಿಸ್ತರಿಸುವ ಭರವಸೆ ನೀಡಿದರು. ಜೊತೆಗೆ ಪೋಷಕರಿಗೂ ಮಕ್ಕಳ ಕುರಿತಾಗಿ ವಹಿಸಬೇಕಾದ ತಾಳ್ಮೆಯ ಕಿವಿಮಾತು ಹೇಳಿದರು. ಹಿರಿಯ ಪ್ರಾಧ್ಯಾಪಕರ ಪ್ರಕಾರ ಈ ಬಾರಿಯಷ್ಟು ದೊಡ್ಡ ಸಂಖ್ಯೆಯ ಪೋಷಕರನ್ನು ಇತ್ತೀಚಿನ ವರ್ಷಗಳಲ್ಲಿ ಯಾವ ಸಭೆಯಲ್ಲೂ ಕಂಡಿರಲಿಲ್ಲ. ಮಕ್ಕಳ ಕಲಿಕಾಧಾಮವನ್ನು ಕಂಡು ಶಿಕ್ಷಕರನ್ನು ಭೇಟಿ ಮಾಡುವ ಅವರ ಆಕಾಂಕ್ಷೆ ಈಡೇರಿತು. ಇನ್ನು ೧೫೦ ನೇ ವರ್ಷಾಚರಣೆಗೆ ಸಿದ್ಧವಾಗುತ್ತಿರುವ ಕಾಲೇಜಿಗೆ ಹೊಸ ಭರವಸೆ ನೀಡಿತು. ಸಂಘದ ಕಾರ್ಯಾಧ್ಯಕ್ಷರಾಗಿ ಹೇಮಲತಾ ಎನ್ ಆಯ್ಕೆಯಾದರು. ಮೂವರ...

ಮಳೆಮೋಡ ಮತ್ತು ಕಾಮನಬಿಲ್ಲು...

ಮಳೆಮೋಡ ಬಂದಾಗಲೇ ಕಾಮನಬಿಲ್ಲು ಕಾಣಿಸುವುದು ಎಂಬ ಮಾತಿದೆ. ಬದುಕಿನಲ್ಲಿ ಕತ್ತಲು ಕವಿದಾಗಲೇ ನಾವು ಅವಕಾಶಗಳ ಬಾಗಿಲು ತೆರೆಯುತ್ತದೆ. ಆದರೂ ಪ್ರತಿ ಕ್ಷಣವೂ ಹೊಸತು ಎಂದಿರುವಾಗ ಕಳೆದು ಹೋದ 2018, ನನಗೆ ಒಂದು ವರ್ಷ ಅದೆಷ್ಟು ದೀರ್ಘ ಎಂಬುದನ್ನು ತೋರಿಸಿಕೊಟ್ಟಿತು. ಜೀವನದಲ್ಲೇ ಮರೆಯಲಾಗದ ಕಹಿ ಗಳಿಗೆಯಾಗಿಬಿಟ್ಟಿತು.   ಯಕ್ಷಗಾನ, ಫೋಟೋಗ್ರಫಿ ಎಂದು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಖುಷಿಯಾಗಿದ್ದ ನನ್ನನ್ನು ಚಿಂತಾಜನಕ ಸ್ಥಿತಿಗೆ ತಲುಪಿಸಲು ಒಂದು ಭೀಕರ ರಸ್ತೆ ಅಪಘಾತ ಸಾಕಾಗಿತ್ತು. “ಶ್ರೀನಿವಾಸ ಪ್ರಸಾದನಿಗೆ ಹೀಗಾಯಿತೇ...” ಎಂದು ಸಹೃದಯರು ಮರುಗಿದ್ದರು. ನನ್ನ ರಕ್ಷಕರೇನೋ, ನಿಜ ಸ್ಥಿತಿಯ ಬಗ್ಗೆ ಹೇಳಿದರೆ ಏನಾಗಿಬಿಡುತ್ತದೋ ಎಂಬ ಭಯದಿಂದ ‘ಜ್ವರ’ ಎಂದಷ್ಟೇ ಹೇಳುತ್ತಿದ್ದರು. ಅದೇನೇ ಇರಲಿ, ನನಗಂತೂ ಈ ಘಟನೆಯಿಂದ ಜೀವನದ ನಿಜವಾದ ಅರ್ಥ ತಿಳಿದುಕೊಳ್ಳಲು ಸಾಧ್ಯವಾಯಿತು. ಬದುಕು ವಿಶಾಲ... ಏನಾದರೂ ಮುಂದೆ ಸಾಗುತ್ತಲಿರಬೇಕು ಎಂದು ತಿಳಿದುಕೊಂಡಿದ್ದೇನೆ. ಹಿಂದಿನ ಸ್ಥಿತಿಯನ್ನು ನೆನೆದು ಕುಗ್ಗಬಾರದು ಎಂಬ ಛಲ ನನ್ನಲ್ಲಿ ಮೂಡಿದೆ. ಒಮ್ಮೆ ಮಣಿಪಾಲದಲ್ಲಿ ವೈದ್ಯರು ನನ್ನ ತಂದೆಯವರಲ್ಲಿ ಹೇಳಿದರಂತೆ, “ಇವನ ಮನೋಬಲದಿಂದಾಗಿ ಇವನನ್ನು ಮೊದಲಿನಂತೆ ಮಾಡಲು ಸಾಧ್ಯವಾಯಿತು,” ಎಂದು.   ಒಮ್ಮೊಮ್ಮೆ ನನಗೆ ಈ ಘಟನೆಯ ಕುರಿತು ಬೇಸರಕ್ಕಿಂತ ಸಂತೋಷವೇ ಆಗುತ್ತದೆ! ಆ ಘಟನೆಯ ಬಳಿಕ ಅದೆಷ್ಟೋ ಮಂದಿ ನನಗೆ ಹತ್ತಿರವಾದ...