ಪೋಸ್ಟ್‌ಗಳು

2024 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಬೇಸರದಲ್ಲಿ ಬರೆದದ್ದು…ಹೌದಾ?!

ಇಮೇಜ್
ಬೇಸರದಲ್ಲಿ ಬರೆದದ್ದೇ? ಬರೆದು ಬೇಸರವಾಯಿತೆ… ಹೌದಲ್ಲಾ… ತಿಳಿಯುತ್ತಿಲ್ಲ.   ಆಕೆ ನೆನಪಾಗಿ ಕುಗ್ಗಿದೆನೇ? ಕುಗ್ಗಿದಾಗ ಆಕೆಯೇ ನೆನಪಾದಳೇ… ಹೌದಲ್ಲಾ..ಅದೂ ಇರಬಹುದಲ್ಲಾ!   ದುಡಿದು ದಣಿದೆನೇ? ದಣಿದಾಗ…ದುಡಿಯಬೇಕಲ್ಲಾ ಅನಿಸಿತೇ? ಹೌದಲ್ಲಾ..ಹಾಗೂ ಅನ್ನಿಸಿರಬಹುದಲ್ಲಾ!   ನೊಂದಾಗ ದೇವರು ನೆನಪಾದನೇ? ದೇವರ ನೆನೆಸಿಕೊಂಡು ನೊಂದೆನೇ… ಹೌದಲ್ಲಾ.. ಅದೇ ಆಗಿರಬೇಕಲ್ಲಾ!   ಒಂಟಿಯಾದಾಗ ಭಯವಾಯಿತೇ? ಭಯವಾದಾಗ ಒಂಟಿ ಅನಿಸಿತೇ… ಹೌದಲ್ಲಾ ಯೋಚನೆ ಸರಿಯಾಗಿದೆಯಲ್ಲಾ!   ಆಸೆಪಟ್ಟು ನಿರಾಶನಾದೆನೇ? ನಿರಾಶನಾಗಿ ಆಸೆಪಟ್ಟೆನೇ.. ಹೌದೌದು ಹಾಗೇ ಆಗಿರಬೇಕಲ್ಲಾ!   ಯಾರದೋ ಮಾತು ಚುಚ್ಚಿತೇ? ಮನಸ್ಸಿಗೆ ನೋವಾದಾಗ ಮಾತು ನೆನಪಾಯಿತೆ… ಹೌದು ಅದು ಸರಿಯಲ್ಲಾ!   ದೇವರ ನೆನೆಯದೇ ಕಷ್ಟ ಬಂತೇ? ಕಷ್ಟ ಬಂದಾಗ ದೇವರ ನೆನಪಾಯಿತೇ… ಹೌದಲ್ಲಾ ಆದರೆ ಇನ್ನೂ ತಿಳಿಯುತ್ತಿಲ್ಲ!   ಮೊದಲಿಲ್ಲ ಕೊನೆಯಿಲ್ಲ…ಇಲ್ಲಿ ಹಾಗೇ ಎಲ್ಲಾ ನಾನ್ಯಾರೋ ನೀನ್ಯಾರೋ ಗೊತ್ತಿಲ್ಲ ಹಿಂದೇನು ಮುಂದೇನು ತಿಳಿದಿಲ್ಲ ಎಲ್ಲವೂ ಗೊಂದಲ… ಆದರೂ ಜೀವನ ಬಲು ಸುಂದರ!   ಜಿಪಿ  

ಮಣಭಾರ ಒಯ್ಯಬೇಕು, ಬೆಟ್ಟವನ್ನೂ ಏರಬೇಕು ಎಂದರೆ ಆಗದು!

ಇಮೇಜ್
  ಟೈಮ್ ‌ ಹೋಗೋದೇ ಗೊತ್ತಾಗಲ್ಲ , ಅನ್ನುತ್ತಲೇ ವರ್ಷದ ಕೊನೆಗೆ ಬಂದು ನಿಂತಿದ್ದೇವೆ .! ಕಷ್ಟವೋ ಸುಖವೋ , ನಗುವೋ ಅಳುವೋ , ಹುಟ್ಟೋ ಸಾವೋ ಏನೇ ಆದರೂ ಈ ಕಾಲವನ್ನು ತಡೆಯೋರು ಯಾರೂ ಇಲ್ಲ ನೋಡಿ … ಇದೊಂಥರಾ ಸಿನಿಮಾದಂತೆ . ಕಥೆ ನಾವು ಬರೆದಿಲ್ಲ . ನಿರ್ದೇಶನವೂ ನಮ್ಮದಲ್ಲ . ಅದರ ಮೇಲೆ ಯಾವ ನಿಯಂತ್ರಣವೂ ಇಲ್ಲ . ಆದ್ರೂ ಸಿನಿಮಾ ಚೆನ್ನಾಗಿರ್ಬೋದು ಅನ್ನೋ ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡು ಥಿಯೇಟರ್ ‌ ಗೆ ಹೋಗ್ತೇವೆ . ಕೊನೆಗೆ ಸಕತ್ತಾಗಿದೇ ಅಂತಾನೋ , ಡಬ್ಬಾ ಮೂವೀ ಅಂತಾನೋ , ಕೆಲವೊಂದ್ಸಲ ಪರ್ವಾಗಿಲ್ಲ ಅಂತಾನೋ ಅಂದ್ಕೋತೀವಿ . ಅಂತೂ ಸಿನಿಮಾ ಮುಗೀಲೇ ಬೇಕು , ನಾವು ಮನೆಗೆ ವಾಪಸ್ ‌ ಬರ್ಲೇಬೇಕು . ನಿರೀಕ್ಷೆ ಅನ್ನೋದು ಎಲ್ಲರನ್ನೂ ಆಟಾಡ್ಸುತ್ತೆ . ಸಿಹಿಯ , ಗೆಲುವಿನ , ಖುಷಿಯ , ಸುಖದ ನಿರೀಕ್ಷೆ . ಎಂತಾ ಸೋಲಿನಲ್ಲೂ , ಎಂತಾ ಗೆಲುವಿನಲ್ಲೂ ಭವಿಷ್ಯದ ನಿರೀಕ್ಷೆ ಇದ್ದೇ ಇರುತ್ತೆ . ಇರ್ಲೇಬೇಕು . ಇಲ್ಲದಿದ್ದರೆ ಅದೇ ಅಂತ್ಯ . ನಮ್ಮ ಹುಟ್ಟಿದ ಹಬ್ಬವೋ , ಹೊಸ ವರ್ಷವೋ ವಿಶೇಷವಾಗೋದು ಇದಕ್ಕೇ . ಈ ವರ್ಷ ಹೇಗಿತ್ತು ಎಂಬ ಯೋಚನೆಯೊಂದಿಗೆ , ಹೊಸ ವರ್ಷ ಹೇಗಿರಬೇಕು ಎಂಬ ಮತ್ತದೇ ನಿರೀಕ್ಷೆ . ಇದನ್ನು ಕುತೂಹಲ , ಅಶಾಭಾವ ಏನಾದರೂ ಅನ್ನಿ . ಹೊಸ ವರ್ಷಕ್ಕೆ ಯೋಜನೆ ಬೇಕಾ ? ಯೋಜನೆಯಿಲ್ಲದಿದ್ದರೆ ನಮ್ಮ ಜೀವನ ಅದೃಷ್ಟವನ್ನೇ ಅವಲಂಬಿಸಿರುತ್ತದೆ . ಹಗ್ಗದ ಮೇಲಿನ ನಡಿಗೆಗಿಂತ   ಮುಳ್ಳಿನ ದಾರಿಯೇ ಆದೀತಲ್ಲವೇ ? ಹೊಸ ವರ್ಷದಲ್ಲಿ ...

ನೆಟ್‌- ಒಂದು ಪರೀಕ್ಷೆ, ಹಲವು ಪ್ರಯೋಜನಗಳು

ಇಮೇಜ್
ವಿಶ್ವವಿದ್ಯಾನಿಲಯ ಅನುದಾನ ಆಯೋಗದ (ಯುಜಿಸಿ) ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಯನ್ನು ಭಾರತೀಯ ವಿಶ್ವವಿದ್ಯಾನಿಲಯಗಳು ಹಾಗೂ ಕಾಲೇಜುಗಳಲ್ಲಿ ʼಸಹಾಯಕ ಪ್ರಾಧ್ಯಾಪಕʼ ಮತ್ತು ʼಜೂನಿಯರ್‌ ರಿಸರ್ಚ್‌ ಫೆಲೋಶಿಪ್ ಮತ್ತು ಸಹಾಯಕ ಪ್ರಾಧ್ಯಾಪಕ' ಗೆ ಭಾರತೀಯ ಪ್ರಜೆಗಳ ಅರ್ಹತೆಯನ್ನು ನಿರ್ಧರಿಸಲು ನಡೆಸಲಾಗುತ್ತದೆ.  ಯುಜಿಸಿ- ನೆಟ್‌ ಪರೀಕ್ಷೆಯನ್ನು ವರ್ಷದಲ್ಲಿ ಎರಡು ಬಾರಿ (ಜೂನ್‌ ಮತ್ತು ಡಿಸೆಂಬರ್‌) ನಡೆಸಲಾಗುತ್ತದೆ. 2018 ರವರೆಗೆ ನೆಟ್‌ ಪರೀಕ್ಷೆಯಲ್ಲಿ ಅಭ್ಯರ್ಥಿ ಮೂರು ಪೇಪರ್‌ಗಳಿಗೆ ಉತ್ತರಿಸಬೇಕಾಗಿತ್ತು. 2019 ರ ನಂತರ ಅದನ್ನು ಎರಡು ಪೇಪರ್‌ ಮಾಡಲಾಗಿದೆ. ಪರೀಕ್ಷೆಯಲ್ಲಿ ಎರಡೂ ಪೇಪರ್‌ಗಳು ವಸ್ತು ನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ.  ನೆಟ್ ಅನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಡಿಸೆಂಬರ್ 2018 ರಿಂದ ಕಂಪ್ಯೂಟರ್ ಆಧಾರಿತ ಪರೀಕ್ಷೆ (ಸಿಬಿಟಿ) ಮೋಡ್ನಲ್ಲಿ ನಡೆಸುತ್ತಿದೆ. ಎರಡು ಪರೀಕ್ಷೆಗಳನ್ನು ಮೂರು ಗಂಟೆಗಳ ಕಾಲ ನಡೆಸಲಾಗುತ್ತದೆ. ಪೇಪರ್‌ -1 ಮತ್ತು ಪೇಪರ್‌-2 ರ ನಡುವೆ ಯಾವುದೇ ವಿರಾಮ ಇರುವುದಿಲ್ಲ. ಮೂರು ಗಂಟೆಗಳ ಕಾಲ ಸತತವಾಗಿ ಈ ಪರೀಕ್ಷೆಯನ್ನು ನಡೆಸಲಾಗುತ್ತದೆ.  ಪೇಪರ್‌ -1 ಎಲ್ಲಾ ಅಭ್ಯರ್ಥಿಗಳಿಗೂ ಈ ಪರೀಕ್ಷೆ ಕಡ್ಡಾಯವಾಗಿರುತ್ತದೆ. ಪೇಪರ್-1 ರಲ್ಲಿ ಸಾಮನ್ಯ ಜ್ಞಾನದ ಬಗ್ಗೆ ಹೆಚ್ಚು ಪ್ರಶ್ನೆಗಳನ್ನ ಕೇಳಲಾಗುತ್ತದೆ. ಅಭ್ಯರ್ಥಿಯ ಚಿಂತನೆ, ತಾರ್ಕಿಕತ...

ಐಎಎಸ್ ಯಶಸ್ಸು ಅಸಾಧ್ಯವಲ್ಲ

ಇಮೇಜ್
ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಐಎಎಸ್ ಅಧಿಕಾರಿಯಾಗಬೇಕೆಂಬ ಬಯಕೆಯೇನೋ ಹಲವರಿಗಿರುತ್ತದೆ. ಆದರೆ ಇವರಲ್ಲಿ ಗುರಿ ತಲುಪುವವರು ಕೆಲವರಷ್ಟೇ. ಉಳಿದವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದೇ ಅಸಾಧ್ಯ ಎಂದು ತಮ್ಮ ಮಹದಾಸೆಯನ್ನು ಕೈಯಾರೆ ಚಿವುಟಿಬಿಡುತ್ತಾರೆ. ಹಾಗಾದರೆ ಯುಪಿಎಸ್ಸಿ ಪರೀಕ್ಷೆ ಅಷ್ಟೊಂದು ಕಷ್ಟವೇ? ಇದಕ್ಕೆ ಏಕೆ ಇಷ್ಟೊಂದು ಮಹತ್ವ? ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾವು ಮಾಡಬೇಕಿರುವುದೇನು? ವಯೋಮಿತಿ, ವಿದ್ಯಾರ್ಹತೆ ಮೊದಲಾದ ಸಂಗತಿಗಳ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.  ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ವರ್ಷಕ್ಕೆ ಒಂದು ಬಾರಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಯೇ ಐಎಎಸ್‌ ಪರೀಕ್ಷೆ ಎಂದು ಜನಪ್ರಿಯವಾಗಿದೆ. ಈ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಉತ್ತೀರ್ಣರಾಗುವ ಅಭ್ಯರ್ಥಿಗಳು ಐಎಎಸ್, ಐಪಿಎಸ್, ಐಆರ್‌ಎಸ್ ಮತ್ತು ಐಎಫ್ಎಸ್ ಅಧಿಕಾರಿಗಳಾಗಿ ನಾಗರೀಕ ಸೇವೆ ಸಲ್ಲಿಸುವ ಅವಕಾಶ ಪಡೆಯುತ್ತಾರೆ.  ವಿದ್ಯಾರ್ಹತೆ ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸುವ ನಾಗರಿಕ ಸೇವಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಬೋರ್ಡ್‌ ಅಥವಾ ವಿಶ್ವವಿದ್ಯಾನಿಲಯದಿಂದ ಯಾವುದೇ ವಿಷಯ ಅಥವಾ ಸಂಯೋಜನೆಯಲ್ಲಿ ಪದವಿ ಪಡೆದಿರಬೇಕು. ಐಎಎಸ್‌ ಅಧಿಕಾರಿಯಾಗಲು ಆಯೋಗ ಪ್ರತಿ ವರ್ಷ ನಡೆಸುವ ನಾಗರೀಕ ಸೇವಾ ಪರೀಕ್ಷೆ (ಸಿಎಸ್‌ಇ) ಯಲ್ಲಿ ಉತ್ತೀರ್ಣರಾಗುವುದು ಕಡ್...

ಸರಳ ಬದುಕು … ಜೀವನ ಬಲುಸುಂದರ

ಇಮೇಜ್
"ನಾವು ಜೀವನವನ್ನು ಎಷ್ಟು ಸರಳಗೊಳಿಸಿಕೊಳ್ಳುತ್ತೇವೆಯೋ ಅಷ್ಟು ಲೋಕದ ನಿಯಮಗಳು ಕಡಿಮೆ ಸಂಕೀರ್ಣ ಎಂದೆನಿಸುತ್ತವೆ." - ಹೆನ್ರಿ ಡೇವಿಡ್ ಥೋರೋ ಬದುಕಿನ ವ್ಯಾಖ್ಯಾನ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಾ ಹೋಗುತ್ತದೆ. ಸಾಮಾನ್ಯ ಅರ್ಥದಲ್ಲಿ ಅದನ್ನು ಅತಿಮಾನುಶ ಶಕ್ತಿಯೊಂದು ನಮಗೆ ನೀಡುವ ಉಡುಗೊರೆ ಎನ್ನಬಹುದೇನೋ. ಜೇಡಿ ಮಣ್ಣಿನಂತಾದ್ದು. ಅದನ್ನು ಮೂರ್ತಿಯಾಗಿಸುವುದು ಅಥವಾ ಕೆಸರಾಗಿಸಿಕೊಳ್ಳುವುದು ನಮ್ಮ ಕೈಯಲ್ಲಿದೆ.  ಬದುಕು ಕಷ್ಟವೇ? ಬದುಕು ಅಥವಾ ಜೀವನದ ಬಗ್ಗೆ ಮಾತನಾಡುವಾಗ ಅದು ಅಂದುಕೊಂಡಂತಲ್ಲಾ, ಕಷ್ಟಗಳು ಬರುತ್ತವೆ ಎಂದೆಲ್ಲಾ ಮಾತನಾಡುತ್ತೇವೆ.  ಹಾಗಾದರೆ ಜೀವನವೆಂಬುದು ಅಷ್ಟೊಂದು ಕಷ್ಟವಾ? ಕತ್ತಲು ಬೆಳಕು ಬರುವಂತೆ, ಬೇಸಿಗೆ ಮುಗಿದು ಮಳೆಗಾಲ ಬರುವಂತೆ ಇದೂ ಕೂಡ. ಇಲ್ಲಿಯೂ ಕಷ್ಟಗಳ ನಂತರ ಸುಖವೂ ಇದೆ, ಸೋಲುಗಳ ನಂತರ ಗೆಲುವಿನ ನಗುವೂ ಇರುತ್ತದೆಯಲ್ಲವೇ?  ಬಹುಶಃ ಬದುಕು ಎಂದ ಕೂಡಲೇ ಕಷ್ಟಗಳ ಬಗ್ಗೆ ಮಾತನಾಡಲೂ ಒಂದು ಕಾರಣವಿರಬಹುದು. ಅದು ವ್ಯಕ್ತಿಯೊಬ್ಬನನ್ನು ಅಥವಾ ಮಕ್ಕಳನ್ನು ಮುಂದೆ ಬರಬಹುದಾದ ಸಂಕಷ್ಟಗಳಿಗೆ ಮಾನಸಿಕವಾಗಿ ಸಿದ್ಧಪಡಿಸುವುದು. ಅಪ್ಪ-ಅಮ್ಮನ ಮುದ್ದು, ತುಂಟಾಟದ ಬಾಲ್ಯದಿಂದ ಬದಲಾಗುವ ಬದುಕಿನ ಸೂಚನೆ ಕೊಡುವುದು.  ಆದರೂ ಒಮ್ಮೊಮ್ಮೆ ನಾವು ನಮ್ಮ ನೀವನವನ್ನು ಕಷ್ಟಗಳ ಸಂಕೋಲೆ ಎಂಬ ಭ್ರಮೆಯಲ್ಲೇ ಬದುಕುತ್ತೇವೆ… ಅರ್ಥಾತ್‌ ಜೇಡಿ ಮಣ್ಣಿನ ಉಂಡೆಯನ್ನು ಮೂರ್ತಿಯಾಗಿಸುವ ಬದಲು ಕೆಸರು ಮಾಡಿ...

ಹೆಮ್ಮೆ, ಭಾವನಾತ್ಮಕ ಕ್ಷಣಗಳ ಸಮ್ಮಿಲನ ಭಾರತೀಯ ಸೇನಾ ದಿನ

ಇಮೇಜ್
ದೇಶ ಕಾಯುವ ಯೋಧ, ಹೊಟ್ಟೆ ತುಂಬಿಸುವ ರೈತ ಯಾವತ್ತೂ ನಮ್ಮ ಆಸ್ತಿ… ನಿಸ್ವಾರ್ಥ ಯೋಧರ ಮಾತು ಬಂದಾಗ ಅಗ್ರ ಪಂಕ್ತಿಯಲ್ಲಿ ಕಾಣಿಸಿಕೊಳ್ಳುವವರು ನಮ್ಮ ನಾಡಿದ ಹೆಮ್ಮೆಯ ಯೋಧ, ಭಾರತೀಯ ಸೇನೆಯ ಮೊದಲ ಕಮಾಂಡರ್‌ ಇನ್‌ ಚೀಫ್‌ ಕೋದಂಡೇರ ಮಾಡಪ್ಪ ಕಾರ್ಯಪ್ಪ (ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ). ಕೊಡಗಿನ ಶನಿವಾರಸಂತೆಯ ಕಾರ್ಯಪ್ಪನವರು ಹುದ್ದೆಯನ್ನು ʼಅಲಂಕರಿಸಲಿಲ್ಲʼ, ಬದಲಾಗಿ ಆ ಹುದ್ದೆಗೆ ಘನತೆ, ಗೌರವ ತಂದುಕೊಟ್ಟರು. ಅವರಿಂದ ಪ್ರೇರಣೆ ಪಡೆದು ಈಗಲು ಯುವಕರು ಸೇನೆ ಸೇರುತ್ತಿದ್ದಾರೆ ಎಂದರೆ ಅವರ ಪ್ರಭಾವ ಎಷ್ಟಿದೆಯೆಂದು ನಾವೇ ಅಂದಾಜಿಸಬಹುದು.   ಕಾರ್ಯಪ್ಪನವರನ್ನು ಜನವರಿ 15, 1949 ರಲ್ಲಿ ಭಾರತದ ಮೊದಲ ಕಮಾಂಡರ್‌ ಇನ್‌ ಚೀಫ್‌ ಎಂದು ಘೋಷಿಸಲಾಯಿತು. ಅವರು ಬ್ರಿಟಿಷ್‌ ಕಮಾಂಡಿಂಗ್‌ ಜನರಲ್‌ ಸರ್‌ ಫ್ರಾನ್ಸಿಸ್‌ ಬಟ್ಟರ್‌ ಅವರ ಸ್ಥಾನವನ್ನು ತುಂಬಬೇಕಿತ್ತು. ಇದರೊಂದಿಗೆ ದೊಡ್ಡ ಜವಾಬ್ದಾರಿಯೊಂದು ಅವರ ಹೆಗಲೇರಿತ್ತು. ಸ್ವಾತಂತ್ರ್ಯಾ ನಂತರ ಬ್ರಿಟಿಷರು ಬಿಟ್ಟು ಹೋದ ಭಸೇನೆಯನ್ನು ಅವರು ಸಂಪೂರ್ಣವಾಗಿ ಭಾರತೀಯ ಸೇನೆಯಾಗಿ ಬದಲಾಯಿಸಬೇಕಿತ್ತು. ಈ ಸವಾಲನ್ನು ದಿಟ್ಟತನದಿಂದ ಸ್ವೀಕರಿಸಿದ ಕಾರ್ಯಪ್ಪ ಗಾರ್ಡ್ ಬ್ರಿಗೇಡ್ (1949. 1958 ರಿಂದ ಗಾರ್ಡ್ಸ್ ಬ್ರಿಗೇಡ್) ಮತ್ತು ಪ್ಯಾರಾಚೂಟ್ ರೆಜಿಮೆಂಟ್ (1952) ಎಂಬ ಎರಡು ಹೊಸ ಘಟಕಗಳನ್ನು ಸ್ಥಾಪಿಸಿದರು. ಸೇನೆಯಲ್ಲಿ ಎಲ್ಲಾ ಜಾತಿ, ಸಮುದಾಯಗಳಿಗೆ ಅವಕಾಶ ನೀಡಿದ ಕಾರ್ಯಪ್ಪ ಅಪಾರ ಮೆ...

ಮಕರ ಸಂಕ್ರಾಂತಿ: ಒಂದು ಹಬ್ಬ, ಹತ್ತಾರು ವೈವಿಧ್ಯ

ಇಮೇಜ್
ಭಾರತದಲ್ಲಿ, ವಿಶೇಷವಾಗಿ ಹಿಂದೂ ಧರ್ಮೀಯರಿಗೆ ವರ್ಷವಿಡೀ ಹಬ್ಬಗಳು. ಪ್ರತಿಯೊಂದು ಹಬ್ಬಕ್ಕೂ ಅರ್ಥಪೂರ್ಣ ಹಿನ್ನೆಲೆಯಿದೆ, ಆಚರಣೆಯ ವಿಧಾನ, ನಂಬಿಕೆಗಳೂ ಸ್ಥಳದಿಂದ ಸ್ಥಳಕ್ಕೆ ಬದಲಾಗುತ್ತವೆ. ಇಂತಹ ಹಬ್ಬಗಳಲ್ಲಿ ಮಕರ ಸಂಕ್ರಾಂತಿ ಅಥವಾ ಮಕರ ಸಂಕ್ರಮಣಕ್ಕೆ ವಿಶೇಷ ಸ್ಥಾನವಿದೆ. ವಿಶೇಷವೆಂದರೆ ಮಕರ ಸಂಕ್ರಾಂತಿಯನ್ನು ದೇಶದೆಲ್ಲೆಡೆ ಆಚರಿಸಲಾಗುತ್ತದೆ. ಇಲ್ಲೂ ಆಚರಣೆಯ ಹೆಸರುಗಳು, ವಿಧಾನಗಳು ಮಾತ್ರ ವಿಭಿನ್ನ!   ಸೂರ್ಯದೇವನು ಒಂದು ರಾಶಿಚಕ್ರದಿಂದ ಇನ್ನೊಂದಕ್ಕೆ ಪ್ರವೇಶಿಸಿದಾಗ ಅದನ್ನು 'ಸಂಕ್ರಾಂತಿ' ಎಂದು ಕರೆಯಲಾಗುತ್ತದೆ. ಅದರಲ್ಲೂ ನಮ್ಮಲ್ಲಿ ಮಕರ ಸಂಕ್ರಮಣ ಹಾಗೂ ಕರ್ಕಾಟಕ ಸಂಕ್ರಮಣಗಳಿಗೆ ಪ್ರಾಮುಖ್ಯತೆ ಹೆಚ್ಚು. ಇವೆರಡು ಆಯನ ಸಂಕ್ರಾಂತಿಗಳು. ಉತ್ತರಾಯಣ ಮತ್ತು ದಕ್ಷಿಣಾಯಣ ಈ ಎರಡು ಸಂಕ್ರಮಣದ ಸಂದರ್ಭದಲ್ಲಿ ಶುರುವಾಗುತ್ತದೆ. ಮಕರ ಸಂಕ್ರಮಣದ ಸಂದರ್ಭದಲ್ಲಿ ಉತ್ತರಾಯಣ ಪುಣ್ಯಕಾಲ ಆರಂಭವಾಗುತ್ತದೆ. ದೇವತಾ ಕಾರ್ಯಗಳಿಗೆ, ಶುಭ ಕಾರ್ಯಗಳಿಗೆ ಸೂಕ್ತವಾದ ಮಂಗಳಕರವಾದ ಸಮಯ ಎಂಬ ನಂಬಿಕೆಯಿದೆ ಮಕರ ಸಂಕ್ರಾಂತಿ ಸೂರ್ಯನ ಪಥ ಬದಲಾವಣೆಯನ್ನು ಆಧರಿಸಿ ಆಚರಿಸುವ ಹಬ್ಬ.  ಸೂರ್ಯದೇವ ಮಕರ ರಾಶಿಗೆ ಪ್ರವೇಶಿಸುವ ಹಬ್ಬವೇ ಮಕರ ಸಂಕ್ರಾಂತಿ. ಇಲ್ಲಿಂದ ಆರು ತಿಂಗಳು ಉತ್ತರಾಯಣ ಪುಣ್ಯಕಾಲ. ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ಅದರದ್ದೇ ಆದ ಮಹತ್ವವಿದೆ. ಮಕರ ಸಂಕ್ರಾಂತಿ ಧಾರ್ಮಿಕ ಮಹತ್ವವಲ್ಲದೆ, ವೈಜ್ಞಾನಿಕ, ಆಯುರ್ವೇದ ಮ...

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಇಮೇಜ್
ಭಾವನೆಗಳು ನಮ್ಮ ವೀಕ್ನೆಸ್ಸು ಅನ್ನೋದೆಲ್ಲಾ ಬರೀ ಬಾಯ್ಮಾತು. ಪ್ರೀತಿ, ದ್ವೇಷ, ಹೊಟ್ಟೆಕಿಚ್ಚು… ಭಾವನೆ ಯಾವುದೇ ಇರಲಿ ಅವೇ ನಮ್ಮನ್ನು ಮನುಷ್ಯರನ್ನಾಗಿಸುತ್ತವೆ. ಒಗ್ಗೂಡಿಸುತ್ತವೆ ಅಥವಾ ಕೆಲವೊಮ್ಮೆ ಬೇರ್ಪಡಿಸುತ್ತವೆ ಕೂಡ.  ಈ ಭಾವನೆಗಳ ವಿಷಯಕ್ಕೆ ಬಂದಾಗ ನಾವ್ಯಾರು ಒಬ್ಬರಂತೆ ಮತ್ತೊಬ್ಬರಲ್ಲ. ಕೆಲವರು ತೀರಾ ಭಾವಜೀವಿಗಳಾದರೆ, ಇನ್ನೂ ಕೆಲವರು ಯಾವ ಭಾವನೆಯನ್ನೂ ತೋರ್ಪಡಿಸದ ನಿರ್ಲಿಪ್ತರು! ಹಾಗೆಂದು ಅವರಿಗೆ ಭಾವನೆಗಳೇ ಇಲ್ಲ ಎಂದಲ್ಲ. ಇನ್ನು ಕೆಲವರು ಕರುಣಾಮಯಿಗಳಾದರೆ, ಕೆಲವರು ಕಲ್ಲು ಹೃದಯದವರು. ಶಾಂತಿಯೇ ಮೂರ್ತಿವೆತ್ತಂತಿರುವವರು ಕೆಲವರಾದರೆ, ಮತ್ತೊಂದಷ್ಟು ಜನ ರೌದ್ರಾವತಾರಿಗಳು! ಇನ್ನೂ ಹಲವರು ವೈರುಧ್ಯಗಳ ಸಂಗಮ! ಈ ಭಾವನೆಗಳೇ ಹಾಗೆ… ಮನುಷ್ಯ ಜೀವಿ ತುಂಬಾ ಇಷ್ಟಪಡುವ, ಆದರೆ ಅಷ್ಟೇ ಅರ್ಥವಾಗದ ಸುಂದರ ಭಾವನೆಯೆಂದರೆ ಅದು ʼಪ್ರೀತಿʼ. ಸಿಟ್ಟಿನಂತೆ ಪ್ರೀತಿ ಅರೆ ಕ್ಷಣ ಬಂದು ಹೋಗಬಹುದು. ಮಾಯಾಜಿಂಕೆಯಂತೆ ಕೈಗೆಟುಕದೇ ಇರಬಹುದು. ಈ ಪ್ರೀತಿ ಎಷ್ಟು ಸುಂದರ ಭಾವನೆಯೋ ಕೆಲವೊಮ್ಮೆ ಅಷ್ಟೇ ದುಃಖವನ್ನೂ ತರಬಹುದು. ಸಿಟ್ಟನ್ನು ಗೆಲ್ಲುವವರು ಹೇಗೆ ಅಪರೂಪವೋ ಹಾಗೇ ಪ್ರೀತಿಯಲ್ಲಿ ಗೆಲ್ಲುವವರೂ ಕಡಿಮೆಯೇ.  ಹೆತ್ತವರು, ಕುಟುಂಬ ಸದಸ್ಯರ ನಡುವಿನ ಪ್ರೀತಿ ಸಹಜ, ಆದರೆ ಯಾರೋ ಅಪರಿಚಿತರನ್ನು ಕಂಡಾಗ ಹುಟ್ಟುವ ಪ್ರೀತಿ ಒಂದು ವಿಸ್ಮಯ. ಅದು ಕ್ಷಣಿಕ ಆಕರ್ಷಣೆಯಲ್ಲದ, ಮನಸ್ಸಲ್ಲಿ ಬಿರುಗಾಳಿಯೆಬ್ಬಿಸಿ ಶಾಂತತೆಗೆ ಹಿಂದಿರುಗುವ ಅನುಭ...

ಪ್ರೇಮಿಗಳ ದಿನ ಫೆಬ್ರವರಿ 14 ಅಲ್ಲವೇ ಅಲ್ಲ!

ಇಮೇಜ್
ನಿಜವಾಗ್ಲೂ ಈ ವ್ಯಾಲೆಂಟೈನ್ಸ್ ಡೇ,  ಅರ್ಥಾತ್‌‌ ಪ್ರೇಮಿಗಳ ದಿನ ಅಂದರೆ ಏನು, ಯಾಕೆ ಬಂತು, ಯಾವಾಗ್ಲಿಂದ ಬಂತು ಅನ್ನೋದರ ಬಗ್ಗೆ ಸಿಕ್ಕಾಪಟ್ಟೆ ಕನ್ಫ್ಯೂಷನ್‌ಇದೆ! ಆದ್ರೆ ನಂಗೆ ಮಾತ್ರ ಯಾವ ಕನ್ಫ್ಯೂಷನ್ನೂ ಇಲ್ಲ. ಫೆಬ್ರವರಿ 14 ಅಲ್ಲಲ್ಲ, ಫೆಬ್ರವರಿ 11 ಕ್ಕೆ ಬರೋ ನನ್ನ ʼಪ್ರೇಮಿಗಳ ದಿನʼಕ್ಕೆ ಕಾರಣವೂ ಇದೆ, ಅದರ ಹಿಂದೆ ಸಾಕಷ್ಟು ನೆನಪುಗಳೂ ಇವೆ!  ಒಂದು 12 ವರ್ಷಗಳ ಹಿಂದೆ, ಅದು ಫೆಬ್ರವರಿ 11 ನೇ ತಾರೀಖು. ಮಂಗಳೂರಿನ ಕದ್ರಿಯ ಪಿಜಿಯಲ್ಲಿ ನನ್ನ ದಿನ ಯಾವತ್ತಿನಂತೇ ಆರಂಭವಾಗಿತ್ತು. ಅದೇ ತಿಂಡಿ, ಕೆಲಸ, ಊಟ, ಒಂದಷ್ಟು ಮಾತು ಮತ್ತು ಅದೇ ನಿರಾಸೆಯೊಂದಿಗೆ ದಿನ ಮುಗಿಯುತ್ತದೆ ಎಂದೇ ನಾನು ಭಾವಿಸಿದ್ದೆ. ಆದರೆ ಅದು ಇಳಿಸಂಜೆ 7.30- 8 ಗಂಟೆಯ ಹೊತ್ತಿರಬಹುದು. ಮೊಬೈಲ್‌ರಿಂಗಣಿಸಿತು. ಹೌದು ಅದು ಆಕೆಯ ಕರೆ. ನನಗದು ತುಂಬಾ ವಿಶೇಷ. ಆದರೆ ಮಾತು ಯಾಕೋ ಗಂಭೀರವಿತ್ತು. ದೃಢ ನಿರ್ಧಾರವೊಂದು ಮನಸ್ಸಿನಲ್ಲಿದೆ ಎಂಬುದನ್ನು ಮಾತೇ ಸೂಚಿಸುತ್ತಿತ್ತು.  ನನಗೋ ಸೆಖೆಯಿಲ್ಲದಿದ್ದರೂ ಮೈ ಬೆವರಿದ ಅನುಭವ. ಏನೋ ಆತಂಕ. ಕಾರಣ ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ನಾನಾಕೆಗೆ ಪ್ರೇಮ ನಿವೇದನೆ ಮಾಡಿದ್ದೆ. ನನ್ನ ಮನಸ್ಸಿನ ನಿರ್ಧಾರವೇನೋ ಬಲವಾಗಿತ್ತು. ಆದರೆ ಹೇಳೋದು ಹೇಗೆ ಎಂಬುದು ತಿಳಿದಿರಲಿಲ್ಲ. ದಿನಾ ಭೇಟಿಯಾದರೂ, ಪುಕ್ಕಲನಂತೆ, ಸೈಬರ್‌ಸೆಂಟರ್‌ನಿಂದ ಇಷ್ಟುದ್ದದ ಇ-ಮೇಲ್‌ಒಂದನ್ನು ಗೊತ್ತಿದ್ದ ಇಂಗ್ಲಿಷ್‌ನಲ್ಲಿ ಕಳಿಸಿದ್ದೆ. ಅದು ನಿ...

ಸಿಂಹಾವಲೋಕನಕ್ಕೊಂದು ಸಮಯ

ಇಮೇಜ್
ಮನುಷ್ಯ ಪ್ರಕೃತಿಯ ಇತರ ಜೀವಚರಗಳಂತಲ್ಲ. ಸ್ವಭಾವತಃ ಮಾಹಾಸ್ವಾರ್ಥಿ. ಆತನ ಬೇಕುಗಳಿಗೆ ಅಂತ್ಯವೆಂಬುದೇ ಇಲ್ಲ. ಅದರಲ್ಲೂ ಎಲ್ಲದರಲ್ಲೂ ಹೊಸತರ ಅಪೇಕ್ಷೆ. ಅದು ವಸ್ತುವಾಗಿರಬಹುದು, ಜೀವಿಯಾಗಿರಬಹುದು, ಅಥವಾ ತನ್ನವರೇ ಆಗಿರಬಹುದು. ಹಳತ್ತು, ವಯಸ್ಸಾದವರು ಎಂದರೆ ಏನೋ ಒಂದು ತಾತ್ಸಾರ.  ಹೊಸತು ಬಯಸುವ ನಮಗೆ ಸಂತೋಷದ ವಿಚಾರ ಎಂದರೆ ಹೊಸ ವರ್ಷ ಬಂದಿದೆ! ಹೊಸ ಕ್ಯಾಲೆಂಡರ್‌, ಹೊಸ ಡೈರಿ ಸಿಕ್ಕಿದೆ! 2023 ಎಂದು ಬರೆದೂ ಬರೆದೂ ಬೋರ್‌ಆಗಿದ್ದವರಿಗೆ ಹೊಸ ಸಂಖ್ಯೆ 2024 ಬಂದಿದೆ. ಆಚರಣೆಯೂ ಭರ್ಜರಿಯಾಗಿ ನಡೆದಿದೆ. ಕೆಲವರು ಮಧ್ಯರಾತ್ರಿ ಆಚರಿಸಿದರೆ, ಇನ್ನೂ ಕೆಲವರು ಮದ್ಯದೊಂದಿಗೆ, ಬೀದಿಗಿಳಿದು, ಪಾರ್ಟಿ ಮಾಡಿ, ಪಟಾಕಿ ಒಡೆದು… ಇನ್ನೂ ಹೇಗೇಗೋ ಆಚರಿಸಿದ್ದೇವೆ. ಇವೆಲ್ಲದರ ಮಧ್ಯೆ ಒಂದಷ್ಟು ಸಮಯ ಮಾಡಿಕೊಂಡು ಕಳೆದುಹೋದ ವರ್ಷದಲ್ಲಿ ಕಳೆದುಕೊಂಡದ್ದೇನು, ಪಡೆದುಕೊಂಡದ್ದೇನು ಎಂಬುದರ ಸಿಂಹಾವಲೋಕನ ಮಾಡಿಕೊಳ್ಳೋಣವೇ?  ಕಾಲಾಯ ತಸ್ಮೈ ನಮಃ…ಕಾಲಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ. ಅದು ಒಳ್ಳೆಯ ಕಾಲವಿರಲಿ, ಕೆಟ್ಟದಿರಲಿ…ಯಾರಿಗೂ ಕಾಯುವುದಿಲ್ಲ. ಸಂತೋಷವಿರಲಿ, ದುಃಖವಿರಲಿ ಯಾವುದೂ ಇಲ್ಲಿ ಶಾಶ್ವತವಲ್ಲ. ಆದರೆ ಅನುಭವ ಮಾತ್ರ ನಮಗೆ ಸಿಗುವ ಲಾಭ. ಕಳೆದ ವರ್ಷ ನಾವೆಲ್ಲರೂ ಅದೆಷ್ಟೋ ಘಟನೆಗಳಿಗೆ ಸಾಕ್ಷಿಯಾಗಿದ್ದೇವೆ. ಎಷ್ಟೋ ಜನರನ್ನು ಭೇಟಿಯಾಗಿದ್ದೇವೆ. ಅತ್ಯಂತ ಸಂತೋಷ, ಹೃದಯವೇ ಬಿರಿಯುವಷ್ಟು ದುಃಖ ಎರಡನ್ನೂ ಅನುಭವಿಸಿದ್ದೇವೆ. ಅದೆಲ್ಲಾ ಕ...