ಪೋಸ್ಟ್‌ಗಳು

2020 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮರೆಯಬೇಡ ಮಗಳೇ…

ಇಮೇಜ್
  ಮಗಳೇ ಮರೆಯಬೇಡ… ಎಂದಿಗೂ ಮರೆಯಬೇಡ. ನಿನ್ನ ಬರುವಿಕೆಯಲ್ಲಿ ಅದೆಷ್ಟು ಖುಷಿ ಕಂಡಿದ್ದೇನೆ ಎಂದು ಬರೆದು ತೋರಿಸಲಾರೆ, ನಿನ್ನ ʼ ಮಗಳೇ ʼ ಎಂದು ಕರೆದೇ ನಾ ಪಡುವ ಸಂತಸ ಸಾಗರದಷ್ಟು. ಸಂಭ್ರಮ ಪಟ್ಟಿದ್ದೇನೆ ಎಣೆಯಿಲ್ಲದಷ್ಟು. ಅಸೂಯೆ ಪಡುವಷ್ಟು… ಆ ನಿನ್ನ ಮೊದಲ ಅಳು ನನ್ನಲ್ಲಿ ನಗು ಮೂಡಿಸಿದ್ದು ಸತ್ಯ. ʼ ನಿಮಗೆ ಮಗಳು ಹುಟ್ಟಿದ್ದಾಳೆ ʼ ಎಂದ ವೈದ್ಯರು, ಆಗ ನನಗಾದ ರೋಮಾಂಚನ, ಆ   ಖುಷಿಯನ್ನು ಹಂಚಿಕೊಳ್ಳಲೂ ಬರದೇ ಪರದಾಡಿ ಕಣ್ಣೀರಾದ ಕ್ಷಣ. ಎಂದಿಗೂ ಮರೆಯಾರೆ. ನೀನು ನಿನ್ನಮ್ಮನ ಜೊತೆಗೆ ನನಗೂ ಹೊಸ ಜೀವ ನೀಡಿರುವೆ… ಮಗಳೇ, ಮರೆಯಬೇಡ. ಅದೆಷ್ಟು ಮಂದಿ ಕೇಳಿದರು, ʼ ಮಗಳು ಹೇಗಿದ್ದಾಳೆ ʼ ಎಂದು. ಖುಷಿಯಿಂದ ಬೀಗಿದ್ದೇನೇ ಹೊರತು ಬೇಸರವೇ ಆಗಲಿಲ್ಲವಲ್ಲಾ… ʼ ನಿನ್ನ ಮಹಾರಾಣಿ ಹೇಗಿದ್ದಾಳೆ ʼ ಎಂದಾಗಲಂತೂ ಕೆಲ ಕ್ಷಣ ನಾನೇ ಮಹಾರಾಜನಾಗಿರುತ್ತಿದ್ದೆ! ನಿನ್ನಣ್ಣನ ಮೇಲಿನ ಪ್ರೀತಿ ಬೆಟ್ಟದಷ್ಟಾದರೂ ನಿನಗೇನೂ ಕಡಿಮೆಯಿಲ್ಲ ಮಗಳೇ…ಅದಕ್ಕಿಂತಲೂ ತುಸು ಹೆಚ್ಚೇ ಪಾಲು ನಿನಗೆ! ಅದೇನೇ ಬೇಸರ, ನೋವು, ಒತ್ತಡ…ನಿನ್ನ ಕಂಡಾಕ್ಷಣ ಮರೆಯಾಗುತ್ತದೆ ಮಂಜಿನಂತೆ. ನಿನ್ನ ಪ್ರತಿ ನೋಟ, ಆಟ, ಕಾಟವೂ ಅದೆಷ್ಟು ಚೆಂದ. ಜೀವನದಲ್ಲಿ ಅದೆಂತದ್ದೋ ಹುರುಪು. ನೆನಪಿದೆ ನನಗೆ…ಅದೆಷ್ಟು ಜವಾಬ್ದಾರಿಗಳು ನನಗೆ. ನಾ ಮಾಡಬಲ್ಲೆ. ಪ್ರೀತಿಯಂತೂ ಕೊಡಬಲ್ಲೆ ಪ್ರಾಣದಷ್ಟು. ನೆನಪಿರಲಿ ಮಗಳೇ… ʼ ಮಹಾರಾಣಿಯಂತೆ ಬಾಳು ʼ… ಹೌದು ನನಗೂ ಹಾಗೇ ಅನಿಸುತ್ತಿದೆ. ಜೀವನ...

ಅಮ್ಮ… ನೀನು ಅರ್ಥವಾಗಿರುವೆ!

ಇಮೇಜ್
  (Photo courtesy: udaypi.in)   ಅಮ್ಮ ನೀನು ಈಗಷ್ಟೇ ಅರ್ಥವಾಗುತ್ತಿರುವೆ. ಪ್ರೀತಿಯೇನೋ ಇತ್ತು, ನಿನ್ನೊಳಗೆ ನನ್ನ ಪ್ರಪಂಚವಿತ್ತು. ಆದರೆ ನಿನ್ನ ಪ್ರಪಂಚವೇ ನಾನೆಂದು ಅರ್ಥವಾಗುತ್ತಿದೆ. ನನ್ನಿಂದ ಆ ನೋವು, ಸಂಕಟ ನೀನೂ ಅನುಭವಿಸಿದ್ದೆಯಲ್ಲಾ…ನಾನು ಕ್ಷಮಿಸು ಎಂದರೆ ಸಾಕೇ…?! “ ನಿನಗೂ ಒಂದು ಮಗುವಾಗಲಿ, ತಿಳಿಯುತ್ತೆ ” ಎಂದು ಹೆತ್ತವರು ಹೇಳುವುದು ಬರೀ ಬಾಯ್ಮಾತು ಎಂದುಕೊಂಡಿದ್ದೆ.  ಈಗ ಅರ್ಥವಾಗುತ್ತಿದೆ. ಅಮ್ಮನಾಗುವುದು ಮರುಹುಟ್ಟು, ಹೊಸ ಜನ್ಮ …ಇಲ್ಲ ಶಬ್ದಗಳು ಸೋಲುತ್ತವೆ. ಏನೆಂದು ಕರೆಯಲಿ ಅದನ್ನು. ದೈಹಿಕ, ಮಾನಸಿಕ ತೊಳಲಾಟ, ಹೇಳಲಾಗದ ಸಂಕಟ, ಎಲ್ಲವನ್ನೂ ನೀನೂ ಸಹಿಸಿಕೊಂಡಿದ್ದೆಯಲ್ಲಾ…ಅದೆಲ್ಲವನ್ನೂ ಮೀರಿ ಎದ್ದುನಿಂತು ಹೊಸಜೀವ ಬೆಳೆಸಿದ ನಿನ್ನನ್ನು ಏನೆಂದು ಬಣ್ಣಿಸಲಿ? ಮತ್ತೆ ಶಬ್ದಗಳು ಸೋಲುತ್ತಿವೆ… ʼ ಕರುಳಕುಡಿ ʼ …ಹೀಗೆಂದಾಗ ಅದೊಂದು ವರ್ಣನೆಯೆಂದೇ ಭಾವಿಸಿದ್ದೆ. ಆದರೆ ಕರುಳಬಳ್ಳಿಯಲ್ಲಿ ಹೊಸ ಜೀವ ಬೆಳೆಸುವ ಪರಿಗೆ ಚಮತ್ಕಾರ ಎನ್ನಲೇ? ಅಲ್ಲ ಅದೆಷ್ಟು ದಿನ, ಅದೆಷ್ಟು ನೋವು, ಅದೆಂತಹಾ ತಾಳ್ಮೆ…ಅದರಲ್ಲೂ ಅದೆಂತಾ ಸಂತೋಷ…ಹೌದು ಅದೊಂದು ಚಮತ್ಕಾರವೇ! ನರಕದಷ್ಟು ನೋವು ತಿಂದು ಸ್ವರ್ಗ ಪಡೆಯುವುದು ಬರೀ ಪ್ರಕೃತಿಯ ನಿಯಮವೇ? ಅದೆಲ್ಲಿಂದ ಬಂತು ನಿನಗಂತಾ ಶಕ್ತಿ?! ʼ ಜೀವ ತೇಯುವುದು ʼ …ಹಾ ಈಗ ಅರ್ಥವಾಗುತ್ತಿದೆ. ಕಣ್ಣಾರೆ ಕಾಣುತ್ತಿದ್ದೇನೆ… ನಿನಗೆ ಮೊದಲಿನಂತೆ ನಡೆಯಲಾಗುತ್ತಿಲ್ಲ. ಕ...

ಹೊಸಬೆಳಕು ಮೂಡುತಿದೆ…

ಇಮೇಜ್
  ಕಣ್ಣ ಮುಚ್ಚಲು ರೆಪ್ಪೆಯಡಿಯಲಿ ಮನವ ಸೋಂಕುವ ಕತ್ತಲು ಕನಸಿನಂಗಳ ಒರೆಸಿ ಬೆಳಗುತ ಸಜ್ಜು ನಾಳೆಯ ಕಟ್ಟಲು…   ಕತ್ತಲೆಂಬುದು ಶಾಶ್ವತವಲ್ಲ, ಅದು ಜಗದ ಅಂತ್ಯವೂ ಅಲ್ಲ, ಅದು ಬೆಳಕಿನ ಹಾದಿಗೆ ಮುನ್ನುಡಿಯಷ್ಟೆ…ಅದೆಷ್ಟು ನಿಜವಲ್ಲವೇ…ನಮ್ಮ ಜೀವನವೆಂಬ ಸುಂದರ ಯಾನದಲ್ಲಿ ಕಷ್ಟಗಳೆಂಬ ಕತ್ತಲು ಸುಳಿಯಿತೆಂದು ಸರಿದು ಮರೆಯಾಗಲು ಸಾಧ್ಯವೇ? ಖಂಡಿತಾ ಇಲ್ಲ. ಜೀವನದ ಅಚ್ಚರಿಗಳನ್ನು ಕಣ್ತುಂಬಿಕೊಳ್ಳುತ್ತಾ ಭವಿಷ್ಯದ ಮೆಟ್ಟಿಲುಗಳನ್ನು ಹತ್ತುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಗೆ ಈ ಬಾರಿ ಕೊರೋನಾ ಆಘಾತ ನೀಡಿದೆ. ಆದರೀಗ ಕತ್ತಲು ಸರಿದು ಬೆಳಕು ಮೂಡುವ ಸಮಯ ಬಂದೇಬಿಟ್ಟಿದೆ… ಹೌದು…ಮೊದಮೊದಲು ಕೊರೋನಾದ ಕತ್ತಲು ಕವಿದರೂ ಆನ್‌ಲೈನ್‌ ಪಾಠವೆಂಬ ಚಂದಿರನಿದ್ದಾನಲ್ಲ ಎಂಬ ಹುಂಬ ಧೈರ್ಯವಿತ್ತು. ಹೊಸತನ ಮೂಡಿಸುವ ಸಹಜ ಕುತೂಹಲವದು…ಆದರೆ ಬರುಬರುತ್ತಾ ಅಮಾವಾಸ್ಯೆಯ ಅನುಭವ. ಆನ್‌ಲೈನ್‌ ಪಾಠದ ಕುತೂಹಲ ಮರೆಯಾಗಿತ್ತು. ಅದೊಂದು ಹೊರೆಯಾಗತೊಡಗಿತು. ಕಾಲೇಜ್‌ ಕಾರಿಡಾರ್‌, ಸ್ನೇಹಿತರು ನೆನಪಾಗತೊಡಗಿದರು. ಈಗ ಕ್ಲಾಸ್‌ ಯಾವಾಗ ಆರಂಭವಾಗುತ್ತೆ ಎಂಬ ಮೂಲಪ್ರಶ್ನೆ! ಕೊರೋನಾ ಕತ್ತಲಲ್ಲಿ ಉಪನ್ಯಾಸಕರಿಗೂ ವಿದ್ಯಾರ್ಥಿಗಳೇ ಮಿಂಚುವ ನಕ್ಷತ್ರಗಳು, ಆ ನಕ್ಷತ್ರಗಳಲ್ಲೇ ಬೆಳಕು ಕಾಣುವ ಪ್ರಯತ್ನ. ತಂತ್ರಜ್ಞಾನದ ಬಲೆಯಲ್ಲಿ ಸಿಲುಕಿ ನಲುಗಿದ ಹಿರಿಯರು ಒಂದೆಡೆಯಾದರೆ, ತಮ್ಮೆಲ್ಲಾ ಪಟ್ಟುಗಳನ್ನು ಪ್ರಯೋಗಿಸಿಯೂ ತರಗತಿ ಪಾಠಗಳಿಗೆ ಆನ್‌ಲೈನ್‌ ಸಮವಲ್ಲ ಎಂದು ಕಂಡುಕೊಂ...

ಕತ್ತಲ ಹಾದಿಯಲಿ ಕಾಣದ ಗುರಿಯೆಡೆಗೆ…

ಇಮೇಜ್
  ನಾವೀಗ ಕತ್ತಲ ಮುಳ್ಳುದಾರಿಯಲ್ಲಿ ಕಾಣದ ಗುರಿಯೆಡೆಗೆ ನಡೆಯುತ್ತಿದ್ದೇವೆ. ಇದು ಬಲು ಕಠಿಣವೆನಿಸುತ್ತಿದೆ. ಆದರೆ ಇರುವುದು ಇದೊಂದೇ ದಾರಿ. ಇಲ್ಲಿ ನಾವಷ್ಟೇ ಅಲ್ಲ ಅದೆಷ್ಟೋ ಸಂಖ್ಯೆಯ ಸಹಪಯಣಿಗರೂ ಇದ್ದಾರೆ. ಎಲ್ಲರೂ ಕತ್ತಲ ದಾರಿಯಲ್ಲಿ ಏದುಸಿರು ಬಿಡುತ್ತಾ ಸಾಗುತ್ತಿದ್ದಾರೆ. ಕಾಲಚಕ್ರ ಮಗ್ಗುಲು ಬದಲಿಸಿದೆ. ಸಾಂಕ್ರಮಿಕ ರೋಗ, ಪ್ರವಾಹ, ಜೊತೆಗೇ ಬಂದ ಮತ್ತಷ್ಟು ಸಮಸ್ಯೆಗಳ ಬಲಾಢ್ಯ ಶಕ್ತಿಯನ್ನು ಎದುರಿಸಲಾಗದೆ ನಾವು ಪರಿತಪಿಸುತ್ತಿದ್ದೇವೆ. ಮಕ್ಕಳು- ಹಿರಿಯರು, ಬಡವ-ಬಲ್ಲಿದ ಎಂಬ ಯಾವ ಬೇಧವೂ ಇಲ್ಲದೆ ಎಲ್ಲರೂ ಇಲ್ಲಿ ಸಮಪಾತ್ರರು. ನಡೆದ, ನಡೆಯುತ್ತಿರುವ ಈ ಅಸಾಧ್ಯ ಆಕ್ರಮಣ ನಮ್ಮ ಜೀವನದ ಮೇಲೆ ಮಾತ್ರವಲ್ಲ, ಯೋಚನೆಯ ಮೇಲೆ ಗಾಢ ಪರಿಣಾಮ ಬೀರುತ್ತಿವೆ. ಭರವಸೆಯ ಬಗೆಗೊಂದು ಹೊಸ ಪ್ರಶ್ನೆ ಮೂಡುವಂತೆ ಮಾಡಿದೆ. ನೆನಪಿರಲಿ, ಬದಲಾವಣೆಯೆಂಬುದು ಲೋಕನಿಯಮ. ಇದು ಸಿಹಿ-ಕಹಿಯ ಸಂಗಮ. ನಮಗೀಗ ಕಹಿ ಗಳಿಗೆ   ಎದುರಾಗಿದೆ. ಆದರೆ ಇದೇನೂ ಹೊಸತಲ್ಲ. ಕಾಲಚಕ್ರಕ್ಕೆ ಹೆದರಿದರೆ ನಾವು ಬದುಕಲ್ಲಿ ಸೋತಂತೆ. ಈ ಕ್ಷಣ ಸೋತರೆ, ಭರವಸೆ ಕಳೆದುಕೊಂಡರೆ ಅದು ಸತ್ತಂತೆ. ಸುರಾಸುರರೆನ್ನದೆ ವಿಶಾಲ ಕ್ಷೀರಸಾಗರವೆಂಬ ಬದುಕಿನಲ್ಲಿ ಮಥನ ನಡೆಸೋಣ. ಮೊದಲು ವಿಷವೇ ಧಕ್ಕಿದರೂ ಕುಗ್ಗದೆ ಅಮೃತ ಬಂದೀತೆಂಬ ಅಚಲ ಭರವಸೆಯೊಂದಿಗೆ. ಇಲ್ಲಿ ತನ್ನನ್ನು ತಾನು ನಂಬಿದವನಷ್ಟೇ ಬಾಳಿಯಾನು. ಇಲ್ಲಿ ಯಾರ ಸಹಾಯದ ನಿರೀಕ್ಷೆಯೂ ಬೇಡ. ಯಾರನ್ನೂ ಕಾಯುವ ಪ್ರಮೇಯವಿಲ್ಲ. ಜಗನಿಯಮದ...

ಬೋಧನೆಯಿಲ್ಲ, ಕಟ್ಟುಪಾಡಿಲ್ಲ, ಧರ್ಮ ಇಲ್ಲಿ ಜೀವನದ ಭಾಗ !

ಇಮೇಜ್
  ಧರ್ಮ ಎಂಬುದರ ವ್ಯಾಖ್ಯಾನ ಸ್ಥಳದಿಂದ ಸ್ಥಳಕ್ಕೆ , ಕಾಲದಿಂದ ಕಾಲಕ್ಕೆ ಬದಲಾಗುವುದನ್ನು ನಾವು ನೋಡುತ್ತೇವೆ . ಜಪಾನ್‌ನಲ್ಲೂ ಇದು ಭಿನ್ನವಾಗಿಲ್ಲ . ಜಪಾನ್‌ನಲ್ಲಿ ಧರ್ಮವೆಂಬುದು ಬುದ್ಧಿಸಂ ಮತ್ತು ಶಿಂಟೋಯಿಸಂಗಳ ಅದ್ಭುತ ಸಮ್ಮಿಶ್ರಣ . ಪಾಶ್ಚಿಮಾತ್ಯ ದೇಶಗಳಂತೆ ಜಪಾನ್‌ನಲ್ಲಿ ಧರ್ಮ ಎಂಬುದು ಒಂದು ಕಟ್ಟುಪಾಡಲ್ಲ , ಧರ್ಮಬೋಧನೆಯಂತೂ ತೀರಾ ವಿರಳ ! ಅದೊಂದು ಜೀವನದ ಭಾಗ . ಇಲ್ಲಿ ಧರ್ಮವನ್ನು ಸಾಮಾಜಿಕ ಮತ್ತು ಸಾಂಸ್ಕೃತಿಕ ಮೌಲ್ಯಗಳಿಂದ ಪ್ರತ್ಯೇಕಿಸುವುದು ಸಾಧ್ಯವಿಲ್ಲ . Read the complete article by clicking the following link:  Religion in Japan

ಮೌನದ ಶಕ್ತಿ ಮಾತಿಗಿಂತ ಹೆಚ್ಚು

ಇಮೇಜ್
ಮಾತಿಗಿಂತ ಮೌನ ದೊಡ್ಡದು ಎಂಬ ಉಕ್ತಿ ಮಾತಿಗಷ್ಟೇ ಅಲ್ಲ . ಸತ್ಯವೂ ಹೌದು . ಯತಿಶ್ರೇಷ್ಠ ಸ್ವಾಮಿ ವಿವೇಕಾನಂದರು ಪರಿಶುದ್ಧತೆ ಮತ್ತು ಮೌನಗಳು ಮಾತಿಗೆ ಶಬ್ದ ತುಂಬುತ್ತವೆ ಎಂದಿದ್ದಾರೆ . ಮೌನ ನಮ್ಮಲ್ಲಿ ಅದ್ಭುತ ಅಲೋಚನೆಗಳು ಹುಟ್ಟಲು ದಾರಿಮಾಡಿಕೊಡುತ್ತದೆ ..... Read the complete Article by clicking the following link: ಅರಿವು...

ನಿಮ್ಮೊಳಗೆ ಇಬ್ಬರು ನಿರೀಕ್ಷೆಗಳಿಗೆ ರಹದಾರಿ...

ಇಮೇಜ್
ಗೌರವ ಎನ್ನುವುದು ನಿಮ್ಮ ಸುತ್ತಲಿನ ಪ್ರಪಂಚವನ್ನು ಅವಲಂಭಿಸಿರುತ್ತದೆ . ನಿಮ್ಮ ಸಂಗಡಿಗರು ಅಂತವರಾದರೆ ಅವರು ಖಂಡಿತವಾಗಿಯೂ ನಿಮ್ಮನ್ನು ಗೌರವಿಸುತ್ತಾರೆ . ಇತ್ತೀಚಿನ ದಿನಗಳಲ್ಲಿ ಕೆಲವರು ಹೇಳುವುದನ್ನು ಗಮನಿಸಿರಬಹುದು . “ ನಾನು ನನ್ನನ್ನು ಗೌರವಿಸುತ್ತೇನೆ ” ಎಂದು . ಹಿಂದೆಲ್ಲಾ “ ನಾನು ದೇವರನ್ನು ನಂಬುತ್ತೇನೆ ” ಎನ್ನುತ್ತಿದ್ದವರು ಈಗ “ ನಾನು ನನ್ನನ್ನು ನಂಬುತ್ತೇನೆ ” ಎನ್ನುತ್ತಿದ್ದಾರೆ . “ ನಾನು ನನ್ನನ್ನು ಪ್ರೀತಿಸುತ್ತೇನೆ ” ಎನ್ನುವವರು ಹಲವರಿದ್ದಾರೆ ! Read the complete article by clicking the following link: Suprabatha

ಆನ್‌ಲೈನ್‌ ಶಿಕ್ಷಣದಲ್ಲಿ ಆಫ್‌ ಆಗುವುದೇ ಹೆಚ್ಚು…!

ಇಮೇಜ್
(Picture courtesy- Zeenews) ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನೊಮ್ಮೆ ಗಮನಿಸಿ .  ಅವುಗಳ ಪುಟಾಣಿ ಪ್ರಪಂಚದಲ್ಲಿ ಹೆತ್ತವರ ನಂತರದ ಸ್ಥಾನ ಇರುವುದು ಟೀಚರ್ ‌ ಗೆ .  ನೀವೇನಾದರೂ ಟೀಚರ್ ‌  ಬಗ್ಗೆ ಹಗುರವಾಗಿ ಮಾತಾನಾಡಿದಿರೋ ಮಗುವಿನ ಪಾಲಿಗೆ ನೀವು ವಿಲನ್ ‌  ಆಗುವುದು ಗ್ಯಾರಂಟಿ !  ಇದಕ್ಕೆ ಕಾರಣ ತುಂಬಾ ಸರಳ ,  ಕಲಿಕೆ ಎಂಬುದು ಒಂದು ಯಾಂತ್ರಿಕ ಕ್ರಿಯೆಯಲ್ಲ .  ಅದೊಂದು ಭಾವನಾತ್ಮಕ ಸಂಗತಿ . ಈ ಅನುಬಂಧ ನಿಲ್ಲುವುದಿಲ್ಲ .  ಮಗು ಬೆಳೆದಂತೆ ತನ್ನ ಶಾಲೆಯನ್ನು ,  ಶಿಕ್ಷಕರನ್ನು ಹೆಚ್ಚಾಗಿ ಹಚ್ಚಿಕೊಂಡುಬಿಡುತ್ತದೆ .  ಅವರನ್ನೇ ಮಾದರಿಯಾಗಿಸಿಕೊಂಡುಬಿಡುತ್ತದೆ .  ನೋಡಿ ಕಲಿಯುವ ಮಕ್ಕಳ ಮೇಲೆ ಶಿಕ್ಷಕರು ಬೀರುವ ಪರಿಣಾಮ ದೊಡ್ಡ ಮಟ್ಟದಲ್ಲಿರುತ್ತದೆ .  ಅದಕ್ಕಾಗಿಯೇ ಅಲ್ಲವೇ ಹೆತ್ತವರು ತಮ್ಮ ಮಗುವಿಗೆ ಒಳ್ಳೆಯ ಶಿಕ್ಷಕರು ಸಿಗಲಿ ಎಂದು ಬೇಡಿಕೊಳ್ಳುವುದು ! ಇದೇ ಕಾರಣಕ್ಕೆ ನಮ್ಮ ನೆನಪಿನ ಬುತ್ತಿ ತೆರೆದಾಗ ಅಲ್ಲಿ ಶಿಕ್ಷಕರಿಗೊಂದು ಮಹತ್ವದ ಸ್ಥಾನ ಇದ್ದೇ ಇರುತ್ತದೆ .  ಶಿಕ್ಷಕರು ಹೇಳುವ - ಬರೆಯುವ   ʼGood’  ಎಂಬ ನಾಲ್ಕಕ್ಷರದ ಪದ ,  ಅವರ ಒಂದು ನಗು ,  ಅವರು ಬೆನ್ನು ತಟ್ಟುವಾಗ -  ಕೆನ್ನೆ ಹಿಂಡುವಾಗ ಆಗುವ ಸಂತೋಷ ,  ಬೈಗುಳದ ಪರಿಣಾಮ ಎರಡೂ ಅಪರಿಮಿತ .  ಹಾಗಾಗಿಯೇ ನಮಗೆ ಅವರು ಕಲಿಸಿದ ಪಾಠಕ್ಕಿಂ...