ಸರ್‌, ಇದ್ಯಾಕೋ ಸರಿಯಿಲ್ಲ !


 

(Courtesy: vectorstock.com)


ಎಲ್ರೂನೂ ಬಿಟ್ಟು ಕೊರೋನಾ ನಮ್ಗೇ ಬರ್ಬೇಕಿತ್ತಾ

ಸ್ಕೂಲಿಲ್ಲ, ಕಾಲೇಜಿಲ್ಲ, ಇದೆಲ್ಲಾ ಬೇಕಿತ್ತಾ

ನಿಯತ್ತಾಗಿ ಕ್ಲಾಸಿಗ್‌ ಬರ್ತೀವೀ ಅಂದ್ರೂ ಕೇಳುತ್ತಾ

ಸರ್‌, ಇದ್ಯಾಕೋ ಸರಿ ಇಲ್ಲ…😞


ಬಸ್ಸಿಲ್ಲ, ರೈಲಿಲ್ಲ, ನಮ್‌ ಗೋಳು ಕೇಳೋರಿಲ್ಲ

ಹಂಗ್ಮಾಡು, ಹಿಂಗ್ಮಾಡು ಅಂತ ಹೇಳೋರೇ ಎಲ್ಲ

ಮನೆಗ್‌ ಭಾರ, ಕಾಲೇಜಿಗೆ ದೂರ ಆಗೋದ್ವಲ್ಲ

ಸರ್‌, ಇದ್ಯಾಕೋ ಸರಿ ಇಲ್ಲ…😞

 

ಬಾಯ್ಮುಚ್ಚು ಅನ್ನೋರೆಲ್ಲಾ ಈಗ ಮೂಗೂ ಮುಚ್ಕೋ ಅಂತಾರೆ

ತೀರ್ಥ, ಪ್ರಸಾದ ಬಿಟ್ಟು ಸ್ಯಾನಿಟೈಸರ್‌ ಕೊಡ್ತಾರೆ

ಪೇಟೇಗ್‌ ಹೋಗಂಗಿಲ್ಲ, ಪೋಲೀಸ್ರು ಹೊಡೀತಾರೆ

ಸರ್‌, ಇದ್ಯಾಕೋ ಸರಿ ಇಲ್ಲ…😞

 

ಬೈಕ್‌ ಬಿಡಂಗಿಲ್ಲ, ಬಸ್ಸೂನೂ ಇಲ್ಲ

ಪರ್ಸಲ್ಲಿ ದುಡ್ಡಿಲ್ಲ, ಪಾನೀಪುರೀನೂ ಸಿಗಲ್ಲ

ಫ್ರೆಂಡ್ಸ್‌ ಮುಖ ನೋಡಿಲ್ಲ, ಓಡಾಡಂಗಿಲ್ಲ

ಸರ್‌, ಇದ್ಯಾಕೋ ಸರಿ ಇಲ್ಲ…😞

 

ಈ ಆನ್‌ಲೈನ್‌ ಕ್ಲಾಸ್‌ ನಮ್ಗಂತೂ ಆಗಲ್ಲ

ಡೇಟಾಗೆ ದುಡ್ಡಿಲ್ಲ, ಮನೇಲಿ ಕೇಳಂಗಿಲ್ಲ

ನೀವಾದ್ರೂ ಅರ್ಥ ಮಾಡ್ಕೋಳಿ ಇದನ್ನೆಲ್ಲಾ

ಸರ್‌, ಇದ್ಯಾಕೋ ಸರಿ ಇಲ್ಲ…😞

 

ಡಿಗ್ರಿ ಆಗ್ತಿಲ್ಲ, ಅಪ್ಪನ್‌ ಕಷ್ಟ ನೋಡಾಕಾಗಲ್ಲ

ದುಡೀತೀನಿ ಅಂದ್ರೆ ಕೆಲ್ಸಾನೂ ಸಿಗ್ತಿಲ್ಲ

ಓದೋ ತಂಗೀಗು ಮದ್ವೆ ಮಾಡ್ಬಿಟ್ರಲ್ಲಾ

ಸರ್‌, ಇದ್ಯಾಕೋ ಸರಿ ಇಲ್ಲ…😞


ಕೊರೋನಾ ನಮ್ಗೆ ಬೇಕಿರ್ಲಿಲ್ಲ…


-ಜಿಪಿ 

ವಿಶ್ವವಾಣಿ ತಂಡಕ್ಕೆ ಧನ್ಯವಾದಗಳು...

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪ್ರೀತಿ ಎಂದರೇನು ಎಂದು ಈಗ ಅರಿತೆನು…

ಸಿಂಹಾವಲೋಕನಕ್ಕೊಂದು ಸಮಯ

ಬೇಸರದಲ್ಲಿ ಬರೆದದ್ದು…ಹೌದಾ?!