ಪೋಸ್ಟ್‌ಗಳು

2022 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಭವಿಷ್ಯದ ಕರಿಛಾಯೆ ಮತ್ತು ಶಿಕ್ಷಕನೆಂಬ ಆಶಾಕಿರಣ

ಇಮೇಜ್
  “ ಅತ್ಯುತ್ತಮ ಶಿಕ್ಷಕ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುವವನಲ್ಲ ಬದಲಾಗಿ ಉತ್ತರ ಕಂಡುಕೊಳ್ಳಬೇಕೆಂಬ ಹಂಬಲದ ಕಿಡಿಯನ್ನು ನಿಮ್ಮೊಳಗೆ ಹೊತ್ತಿಸುವವನು ” …. ಈ ಮಾತು ಶಿಕ್ಷಕನೆಂದರೆ ಯಾರು ಅಥವಾ ಶಿಕ್ಷಕ ಹೇಗಿರಬೇಕು ಎಂಬುದನ್ನು ಅದೆಷ್ಟು ಸೂಚ್ಯವಾಗಿ ಹೇಳುತ್ತದೆ,  ಅಲ್ಲವೇ…   ಮಾಜಿ ರಾಷ್ಟ್ರಪತಿ, ‘ಭಾರತರತ್ನʼ ದಿವಂಗತ ಡಾ. ಎಪಿಜೆ ಅಬ್ದುಲ್‌ ಕಲಾಂ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಗುರುಗಳಾದ ಪ್ರೊ. ಶ್ರೀನಿವಾಸನ್‌ ಅವರನ್ನು ವಿಶೇಷವಾಗಿ ಹೆಸರಿಸುತ್ತಾರೆ. ಮದ್ರಾಸು ಎಂಐಟಿಯಲ್ಲಿ ಕಲಾಂ ಮತ್ತವರ ತಂಡಕ್ಕೆ ಆಕಾಶಕಾಯ (ಏರೋಡೈನಾಮಿಕ್ಸ್‌) ವಿನ್ಯಾಸ ರಚಿಸಲು ಹೇಳಿದ್ದ ಪ್ರೊಫೆಸರ್‌, ಕಷ್ಟಪಟ್ಟು ತಯಾರಿಸಿದ ವಿನ್ಯಾಸವನ್ನು ನೋಡಿದ ಕೂಡಲೆ ʼಕೆಟ್ಟದಾಗಿದೆ, ನಿನ್ನಿಂದ ಇದನ್ನು ನಿರೀಕ್ಷಿಸಿರಲಿಲ್ಲʼ ಎಂದುಬಿಟ್ಟರಂತೆ. ಅಲ್ಲದೆ ಮೂರು ದಿನದಲ್ಲಿ  ಮರುವಿನ್ಯಾಸ ರಚಿಸಿ ಒಪ್ಪಿಸಲು ಕಟ್ಟಾಜ್ಞೆ ಹೊರಡಿಸುತ್ತಾರೆ. ಪ್ರಾಧ್ಯಾಪಕರಿಂದ ಯಾವತ್ತು ಇಂತಹ ಮಾತು ಕೇಳದ ಕಲಾಂ ಕಂಗಾಲಾದರು. ಆದರೆ ಹಗಲಿರುಳು ಕೆಲಸ ಮಾಡಿ ತಯಾರಿಸಿದ ವಿನ್ಯಾಸವನ್ನು ನೋಡಿ ಬಾಯ್ತುಂಬ ಹೊಗಳಿದ ಗುರುಗಳು, ʼನಿನಗೆ ನನ್ನಿಂದ ಬೇಸರವಾಗುತ್ತದೆ ಎಂದು ತಿಳಿದಿತ್ತು. ಆದರೆ ನೀನು ಅದಕ್ಕಿಂತಲೂ ಉತ್ತಮ ವಿನ್ಯಾಸ ಸಿದ್ಧಪಡಿಸುತ್ತೀಯ ಎಂಬ ವಿಶ್ವಾಸ ನನಗಿತ್ತು, ʼ ಎಂದರಂತೆ! ಪ್ರತಿಯೊಂದು ಯಶೋಗಾಥೆಯ ಹಿಂದೆಯೂ ಶಿಕ್ಷಕನೊಬ್ಬನ ನೆರಳು ಕಾಣಸಿಗುತ್ತದೆ. ...

ಶಿಕ್ಷಕರ ಆ ಏಟು ಮತ್ತು ಆ ಕಲ್ಮಶವಿಲ್ಲದ ಪ್ರೀತಿ!

ಇಮೇಜ್
(ಸಾಂಧರ್ಭಿಕ ಚಿತ್ರ) ನಮ್ಮ ಕಳಸೇಗೌಡರು ಊರಿಗೆಲ್ಲಾ ಮೇಷ್ಟ್ರು. ನಮ್ಮ ಹಳ್ಳಿಯ ಶಾಲೆಗೆ ಅವರೇ ಮುಖ್ಯೋಪಾಧ್ಯಾಯರು. ಅವರಿಗೆ ಆ ಗತ್ತು, ಜ್ಞಾನ, ಅನುಭವ ಎಲ್ಲವೂ ಇತ್ತು. ಅವರು ಬಾಸುಂಡೆ ಬರುವಂತೆ ಬಾರಿಸಿದ ನೆನಪು ಈಗಲೂ ಹಸಿರಾಗಿದ್ದರೂ ಈಗಲೂ ಊರಿಗೆ ಹೋದಾಗ ಅವರು ತೋರಿಸುವ ಪ್ರೀತಿ ಕಲ್ಮಶವಿಲ್ಲದ್ದು. ಜಾತಿ ಆಧಾರದಲ್ಲಿ ಜನರು ಬೇರೆಯಾಗಿದ್ದರೂ ಎಲ್ಲಾ ಮಕ್ಕಳು ಶಾಲೆಗೆ ಬರುವಂತೆ ಮಾಡಲು ಅವರು ಪಡುತ್ತಿದ್ದ ಪಾಡು ಈಗಲೂ ನೆನಪಿದೆ.   ಹೈಸ್ಕೂಲಿನ ನಮ್ಮ ಪಿಟಿ ಮೇಷ್ಟ್ರು ನರೇಂದ್ರ ಸರ್. ಅವರ ಅದೆಷ್ಟೋ ವಿದ್ಯಾರ್ಥಿಗಳಲ್ಲಿ ನಾನೊಬ್ಬ. ಆದರೆ ಆರೋಗ್ಯ ಸರಿಯಿಲ್ಲದೆ ಕಂಗಾಲಾದ ಅದೊಂದು ಸಂದರ್ಭದಲ್ಲಿ ಅವರು ನನ್ನೆಡೆಗೆ ತೋರಿದ ಕಾಳಜಿ, ಪರೀಕ್ಷೆ ಬರೆದು ಪಾಸಾಗಲು ಅವರು ಪ್ರೋತ್ಸಾಹಿಸಿದ ರೀತಿ ಯಾವತ್ತೂ ಮರೆಯಲಾಗದ್ದು. ಅವರು ಹೇಗಿದ್ದಾರೋ ತಿಳಿದಿಲ್ಲ, ಆದರೆ ನನ್ನ ನೆನಪಿನಲ್ಲಿ ಅವರ‍್ಯಾವತ್ತೂ ಅಮರ. ಹೈಸ್ಕೂಲಲ್ಲಿ ಗಣಿತ ಗಳಿಸಿದ ಧನ್ಯ ಕುಮಾರ್ ಸರ್ ಜೊತೆಗೆ ಅಂತಹ ವಿಶೇಷ ಘಟನೆಗಳೇನೂ ಇಲ್ಲ. ಆದರೆ ಶಿಕ್ಷಕನಾಗಿ ಅವರು ವಿದ್ಯಾರ್ಥಿಗಳೆಡೆಗೆ ತೋರಿಸುತ್ತಿದ್ದ ಪ್ರೀತಿ , ಅವರು ಕಲಿಸಿದ ರೀತಿ, ಅವರ ಶಿಸ್ತು ನನಗೂ ಆಗಲೇ ನಾನೂ ಮೇಷ್ಟ್ರಾಗಬೇಕು ಎಂಬ ಬಯಕೆ ಹುಟ್ಟಲು ಕಾರಣವಾಗಿತ್ತು. ಕಾಲೇಜು ದಿನಗಳಲ್ಲಿ ನನ್ನನ್ನು ಅತ್ಯಂತ ಪ್ರಭಾವಿಸಿದ ...

ಆಕೆ ನೆರಳಲ್ಲ, ಬೆಳಕು …!

ಇಮೇಜ್
       ಮನುಷ್ಯ ಸಮಯ, ಸಂದರ್ಭಕ್ಕೆ ಅನುಗುಣವಾಗಿ ಬದಲಾಗುವಾಗ ನಮ್ಮ ಮೂಗಿನ ನೇರಕ್ಕೆ ಯಾರನ್ನೂ ಅಳೆಯಲಾಗದು, ಯಾರೊಂದಿಗೂ ಹೋಲಿಸಲಾಗದು. ಇಷ್ಟಕ್ಕೂ ಪ್ರತಿಯೊಬ್ಬ ವ್ಯಕ್ತಿಯೂ ಪರಮಾತ್ಮನ ವಿಶೇಷ ಸೃಷ್ಟಿಯೇ. ಆದರೆ ಪರಿಸ್ಥಿತಿಯನ್ನು ಮೀರಿ ಬೆಳೆದು ತಮ್ಮನ್ನು ತಾವು ರೂಪಿಸಿಕೊಂಡು, ಎಂತಹ ಸಂದರ್ಭ ಬಂದರೂ ಬದಲಾಗದೇ ಇರುವವರು ಅಪರೂಪ.  ಆಂಗ್ಲ ವಿಭಾಗದ ಡಾ. ರಾಜಲಕ್ಷ್ಮೀ ಮೇಡಂ ಅಥವಾ ಪ್ರೀತಿಪಾತ್ರರ ಪಾಲಿನ ʼ ರಾಜಿ ಮೇಡಂ ʼ ಬಗ್ಗೆ ಬರೆಯಲು ನನಗಿರುವ ಅರ್ಹತೆ ಪ್ರಶ್ನಾರ್ಹ, ಆದರೂ ಸಲಿಗೆ, ಪ್ರೀತಿಯಿಂದ ಒಂದಿಷ್ಟು ಬರೆದರೆ ಮೇಡಂ ಕ್ಷಮಿಸಿಯಾರು ಎಂಬ ಧೈರ್ಯ!  ಅವರ ಪರಿಚಯ ನನಗಾದುದು ಕೇವಲ ನಾಲಕ್ಕು ವರ್ಷಗಳ ಹಿಂದೆಯಷ್ಟೇ. ಆಗ ಅವರು ನನಗೆ ʼಪ್ರಾಂಶುಪಾಲರ ಪತ್ನಿʼ ಅಷ್ಟೆ! ಆದರೆ ಹೊಸಬನಾದ ನನ್ನನ್ನು ಸಹೋದರನಂತೆ ಕಂಡು ಸಲಹೆ-ಮಾರ್ಗದರ್ಶನ ನೀಡಿದ ಕೆಲವು ಹಿರಿಯರಲ್ಲಿ ರಾಜಲಕ್ಷ್ಮೀ ಮೇಡಂ ಕೂಡ ಒಬ್ಬರು. ಆ ವಿಷಯದಲ್ಲಿ ನಾನು ಅದೃಷ್ಟವಂತ. ನನ್ನ ಅರಿವಿನ ಮಿತಿಯೊಳಗೆ ಹೇಳುವುದಾದರೆ, ರಾಜಲಕ್ಷ್ಮೀ ಮೇಡಂ ಎಲ್ಲರಂತಲ್ಲ. ನೇರ, ದಿಟ್ಟ, ನಿರಂತರ ಎಂಬ ಮಾತು ಅವರಿಗೆ ಅನ್ವಯಿಸುತ್ತದೆ. ಅವರ ಮಾತು ನೇರ, ದಿಟ್ಟ ನಿರ್ಧಾರ, ಮತ್ತದನ್ನು ಸದಾ ಉಳಿಸಿಕೊಂಡವರು ಅವರು. ಆಗ ಪ್ರಾಂಶುಪಾಲರಾಗಿದ್ದ ಉದಯ್‌ ಸರ್‌ ಮತ್ತು ಮೇಡಂ ಕಾಲೇಜಿನಲ್ಲಿ ಹೇಗಿರುತ್ತಾರೆ, ವೈಯಕ್ತಿಕ ಜೀವನ ಮತ್ತು ಔದ್ಯೋಗಿಕ ಜೀವನವನ್ನು ಹೇಗೆ ಸಂಭಾಳ...

ನಗುವ ನಯನ ಮಧುರ ಮೌನ, ಮಿಡಿವ ಹೃದಯ ಇರೆ ಮಾತೇಕೆ…

ಇಮೇಜ್
ಯಾಕೋ ಮಾತು ಮೌನವಾಗಿದೆ. ಮೌನವೇ ಮಧುರವಾಗಿದೆ  ಜೊತೆಗಿರುವ ಮಿಡಿವ ಹೃದಯ ಸದಾ ಜೊತೆಗಿರಲಿ ಅಷ್ಟು ಸಾಕೆನಿಸಿದೆ… ಹತ್ತು ಸಂವತ್ಸರಗಳು ಕಳೆದಿವೆ. ಸಹಜವಾಗೇ ಕಲ್ಲು ಮುಳ್ಳುಗಳ ಹಾದಿಯಲ್ಲಿ ನಡೆದು ಬಂದಿದ್ದೇನೆ…ಆದರೆ ನಾನು ಯಾವತ್ತೂ ಒಂಟಿಯಾಗಿಲ್ಲ. ಆ ಭಾವನೆ ಒಂದು ಕ್ಷಣವೂ ಮನಸ್ಸಿನಲ್ಲಿ ಸುಳಿಯಲೂ ಆಕೆ ಬಿಟ್ಟಿಲ್ಲ. ನನ್ನನ್ನೇ ನಂಬಿ ಬಂದಾಕೆ, ತನ್ನ ಬೇಕು ಬೇಡಗಳನ್ನು ಕಡೆಗಣಿಸಿ ಅನುಕ್ಷಣವೂ ನನಗಾಗಿ ಬದುಕಿದ್ದಾಳೆ ಎಂದರೆ ಅದು ಸಾಮಾನ್ಯ ಸಂಗತಿಯಲ್ಲ. ನನಗೆ ಬದುಕು ಬಲು ಸುಂದರ ಅನಿಸುವಂತೆ ಮಾಡಿದ್ದು ಆಕೆಯೇ.   ಹಾಗೆಂದು ನಾನು ಮೊದಲಿಂದಲೂ ಅದೃಷ್ಟವಂತನೇ. ಮನೆಯಲ್ಲಿ ಕಿರಿಯವನು. ಅಪ್ಪ- ಅಮ್ಮನ ಪ್ರೀತಿಯ ಜೊತೆಗೆ ಅಣ್ಣನ ಆರೈಕೆ ಬೋನಸ್‌. ಆದರೆ ಬದುಕಲ್ಲಿ ತಿರುವುಗಳು ಸಹಜ. ಸುಖದ ಬಳಿಕ ಕಷ್ಟ ಕಾಯುತ್ತಿರುತ್ತದೆ ಎಂಬುದಕ್ಕೆ ನಿದರ್ಶನಗಳು ಎಷ್ಟಿಲ್ಲ! ಆದರೆ ಸೃಷ್ಟಿಕರ್ತ ನನ್ನ ಹಣೆಬರಹವನ್ನು ವಿಶೇಷ ಕಾಳಜಿಯಿಂದ ಬರೆದಿದ್ದ ಅನಿಸುತ್ತದೆ. ʼಋಣಾನುಬಂಧ ʼ ಎಂಬ ಮಾತಿಗೆ ನಮಗಿಂತ ಬೇರೆ ಉದಾಹರಣೆ ಬೇಡ…! ʼ ಪ್ರೀತಿಯೊಂದು ಮಾಯೆ…ʼ ಎಂಬುದು ಸತ್ಯ. ನಾವಿಬ್ಬರೂ ಭೇಟಿಯಾಗಿದ್ದೇ ಒಂದು ಅಚ್ಚರಿ. ಸ್ನೇಹಿತರಾಗಿದ್ದ ನಮ್ಮಲ್ಲಿ ಪ್ರೀತಿಯೆಲ್ಲಿಂದ ಮೊಳಕೆಯೊಡೆಯಿತು, ಅದ್ಯಾವ ರೀತಿಯ ಆಕರ್ಷಣೆ... ಯಾವ ಧೈರ್ಯದಲ್ಲಿ ನಾನದನ್ನು ವ್ಯಕ್ತಪಡಿಸಿದೆನೋ…ನಂತರ ಆ ಕಾಯುವಿಕೆ… ದೇವರಿಗೇ ಪ್ರೀತಿ! ಇ ದೆಲ್ಲಾ ಆತನೇ ಆಡಿಸಿದ ಆಟವೇ? ಹಾಗಿದ್ದರೆ ಅ...