ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕೊಟ್ಟಷ್ಟೂ ಹೆಚ್ಚುವ ಸಂತೋಷ!

ಇಮೇಜ್
ಘಟನೆ 1: ಅದು ಮಧ್ಯಾಹ್ನದ ಬಿಸಿಲು. ಊಟದ ಹೊತ್ತಾದ್ದರಿಂದ ಮಂಗಳೂರು ನಗರದ ಕಂಕನಾಡಿ ಟ್ರಾಫಿಕ್‌ ಸಿಗ್ನಲ್‌ ಬಳಿ ವಾಹನಗಳು ಸಾಲುಗಟ್ಟಿದ್ದವು. ವಾಹನ ಸವಾರರ ಮುಖದಲ್ಲಿ ಎಲ್ಲಿಗೋ ತಲುಪುವ ಧಾವಂತ, ಅನಿವಾರ್ಯವಾಗಿ ಕಾಯಬೇಕಾದಾಗ ಅಸಹನೆ ಕಾಣುತ್ತಿತ್ತು. ಬೆಳ್ಳಿ ಕೂದಲು ಹೊತ್ತ ಮುದಿಜೀವವೊಂದು ಪ್ರತಿ ವಾಹನದ ಬಳಿಯೂ ಬಂದು ಕೈಚಾಚುತ್ತಿತ್ತು. ಯಾರೂ ಕಾಸು ಬಿಚ್ಚುತ್ತಿರಲಿಲ್ಲ. ಅಷ್ಟರಲ್ಲಿ ನನ್ನ ಎದುರಿಗಿದ್ದ ದೊಡ್ಡ ಕಾರೊಂದರಲ್ಲಿದ್ದ ವ್ಯಕ್ತಿ ನಗುಮುಖದಲ್ಲೇ ಆ ಅಜ್ಜಿಗೆ ಒಂದು ನೋಟು ಕೈಗಿತ್ತರು. ಅಪರೂಪ ಎಂಬಂತೆ, ಕೆಲವು ನಿಮಿಷ ಪ್ರೀತಿಯಿಂದ ಮಾತನಾಡಿಸಿದರು. ಸಹಜವಾಗಿಯೇ ಅಜ್ಜಿಗೆ ಆಶ್ಚರ್ಯ, ಖುಷಿ. ಆಕೆಯದ್ದೋ ಹೊಟ್ಟೆ ಪಾಡು. ಆದರೆ ದುಡ್ಡು ಕೈಗಿತ್ತ ಆ ವ್ಯಕ್ತಿಯ ಮುಖದಲ್ಲಿ ಹೊಟ್ಟೆ ತುಂಬಿದಷ್ಟು ಸಂತೋಷ! ಘಟನೆ 2: ಅದೊಂದು ದೊಡ್ಡ ಮನೆ. ಯಾವುದಕ್ಕೂ ಕಡಿಮೆಯಿರಲಿಲ್ಲ. ಆದರೆ ಮನೆಯಲ್ಲಿದ್ದ ಇಳಿವಯಸ್ಸಿನ ವ್ಯಕ್ತಿಗೆ ಖಾಯಿಲೆಗಳು, ಮಾತ್ರೆಗಳೇ ಸ್ನೇಹಿತರಾಗಿದ್ದವು. ಅದಕ್ಕಾಗಿ ಅಡುಗೆ ಮನೆಗೆ ಹೋಗಿ ನೀರು ತೆಗೆದುಕೊಳ್ಳುವುದೇ ಅವರಿಗೊಂದು ಸಾಹಸ. ಅವತ್ತೂ ನಿಧಾನವಾಗಿ ಅಡುಗೆ ಮನೆಗೆ ಹೋಗುವ ಸಾಹಸ ಆರಂಭಿಸಿದರು. ಆಶ್ಚರ್ಯ! ಮುದ್ದಿನ ಮೊಮ್ಮಗಳು ನೀರು ತಂದು ಕೈಗಿತ್ತಳು. ನೀರು ಸಿಕ್ಕಿದೆ, ಅದೂ ಮೊಮ್ಮಗಳು ಕೊಟ್ಟಿದ್ದಾಳೆ. ಅಜ್ಜನಿಗೋ ಮಹದಾನಂದ. ಆ ಮುದ್ದು ಮಗುವಿನ ಮುಖದಲ್ಲಿ ಅದೆಂತದ್ದೋ ಸಂತೋಷ. ಅದು ಚಾಕಲೇಟು ಕೈಗಿತ್ತರೂ ಕಾಣದು. ...