ಎಂಟರ ಹಿಂದಿನ ನಂಟು !
ಅಂ ದಹಾಗೆ ನಾನು - ಅಶ್ವಿನಿ ಪ್ರೀತಿಸಿ ಜಂಟಿಯಾಗಿ ಇವತ್ತಿಗೆ ( ಏಪ್ರಿಲ್ 12) ಭರ್ತಿ ಎಂಟು ವರ್ಷ . ಆದರೂ ‘ ಗುರು , ನಿಂದು ಲವ್ ಮ್ಯಾರೇಜಾ ʼ ಎಂದು ಕೇಳುವ ನನ್ನ ಹಳೆಯ ಸ್ನೇಹಿತರ , ಸಹಪಾಠಿಗಳ ಸಂಖ್ಯೆಗೇನೂ ಇವತ್ತಿಗೂ ಕಡಿಮೆಯಿಲ್ಲ . ಅವರಿಗೆ ಈ ʼ ಗುರು ʼ ಮತ್ತು ‘ ಲವ್ ಮ್ಯಾರೇಜ್ ’ ನಡುವೆ ಇರುವ ಲಿಂಕೇ ಅರ್ಥ ಆಗ್ತಿಲ್ಲ . ನನಗೇ ಅರ್ಥವಾಗಿಲ್ಲ ಎಂದಮೇಲೆ ಅವರಿಗೆಲ್ಲಿಂದ ಅರ್ಥವಾಗಬೇಕು ! ನಾನು ಡಿಗ್ರಿ ಕ್ಲಾಸಲ್ಲೇ ಸಿಕ್ಕಾಪಟ್ಟೆ ‘ ಡೀಸೆಂಟ್ ʼ, ‘ ರಿಸರ್ವ್ಡ್ ʼ, ಎಂಬ ಪಟ್ಟ ಗಟ್ಟಿಸಿಕೊಂಡಿದ್ದೆ . ಕಾಲೇಜಲ್ಲೇ ತಮ್ಮ ಹವಾ ಸೃಷ್ಟಿಸಿಕೊಂಡಿದ್ದ ಸ್ನೇಹಿತರಿಗೆ ನಾನು ಒಗ್ಗಿಬರದ ಆಸಾಮಿಯಾಗಿದ್ದೆ ! ಹಾಗಂತ ನಾನು ಸಿಕ್ಕಾಪಟ್ಟೆ ರಿಸರ್ವ್ಡ್ ಅಂತೇನೂ ಇರಲಿಲ್ಲ . ಎಲ್ಲರಲ್ಲೂ ಮಾತಾಡುವ ಆದರೆ ಯಾರಿಗೂ ಚಡ್ಡಿ ದೋಸ್ತ್ ಅನ್ನಿಸಿಕೊಳ್ಳದ ಕ್ಯಾಟಗರಿ . ನನಗೆ ಅವರೆಂದರೆ ಅಚ್ಚರಿ ಹೆಮ್ಮೆ , ಅವರಿಗೋ ನನ್ನ ಬಗ್ಗೆ ಕರುಣೆ ! ಡಿಗ್ರಿ ಕಳೆದು ಎರಡು ವರ್ಷ ಬೆಂಗಳೂರಿನಲ್ಲಿ ಕೆಲಸ ಮಾಡಿಯೂ ಹೆಚ್ಚೇನೂ ಬದಲಾವಣೆ ಆಗಲಿಲ್ಲ . ಕೆಲಸದ ಅನುಭವದಿಂದ ಒಂದಷ್ಟು ಕಲಿಯುವ - ಕಲಿಸುವ ಪರಿಪಾಠ ಒಲಿದಿತ್ತು ಅಷ್ಟೆ . ನಾನೂ ಲೆಕ್ಚರರ್ ಆಗಬೇಕು , ಅದಕ್ಕಾಗಿ ರೆಗ್ಯುಲರ್ ಎಂ . ಸಿ . ಜೆ ಮಾಡಬೇಕು ಎಂ...