ಪೋಸ್ಟ್‌ಗಳು

ಮೇ, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸರ್‌, ಇದ್ಯಾಕೋ ಸರಿಯಿಲ್ಲ !

ಇಮೇಜ್
  (Courtesy:  vectorstock.com) ಎಲ್ರೂನೂ ಬಿಟ್ಟು ಕೊರೋನಾ ನಮ್ಗೇ ಬರ್ಬೇಕಿತ್ತಾ ಸ್ಕೂಲಿಲ್ಲ, ಕಾಲೇಜಿಲ್ಲ, ಇದೆಲ್ಲಾ ಬೇಕಿತ್ತಾ ನಿಯತ್ತಾಗಿ ಕ್ಲಾಸಿಗ್‌ ಬರ್ತೀವೀ ಅಂದ್ರೂ ಕೇಳುತ್ತಾ ಸರ್‌, ಇದ್ಯಾಕೋ ಸರಿ ಇಲ್ಲ…😞 ಬಸ್ಸಿಲ್ಲ, ರೈಲಿಲ್ಲ, ನಮ್‌ ಗೋಳು ಕೇಳೋರಿಲ್ಲ ಹಂಗ್ಮಾಡು, ಹಿಂಗ್ಮಾಡು ಅಂತ ಹೇಳೋರೇ ಎಲ್ಲ ಮನೆಗ್‌ ಭಾರ, ಕಾಲೇಜಿಗೆ ದೂರ ಆಗೋದ್ವಲ್ಲ ಸರ್‌, ಇದ್ಯಾಕೋ ಸರಿ ಇಲ್ಲ… 😞   ಬಾಯ್ಮುಚ್ಚು ಅನ್ನೋರೆಲ್ಲಾ ಈಗ ಮೂಗೂ ಮುಚ್ಕೋ ಅಂತಾರೆ ತೀರ್ಥ, ಪ್ರಸಾದ ಬಿಟ್ಟು ಸ್ಯಾನಿಟೈಸರ್‌ ಕೊಡ್ತಾರೆ ಪೇಟೇಗ್‌ ಹೋಗಂಗಿಲ್ಲ, ಪೋಲೀಸ್ರು ಹೊಡೀತಾರೆ ಸರ್‌, ಇದ್ಯಾಕೋ ಸರಿ ಇಲ್ಲ… 😞   ಬೈಕ್‌ ಬಿಡಂಗಿಲ್ಲ, ಬಸ್ಸೂನೂ ಇಲ್ಲ ಪರ್ಸಲ್ಲಿ ದುಡ್ಡಿಲ್ಲ, ಪಾನೀಪುರೀನೂ ಸಿಗಲ್ಲ ಫ್ರೆಂಡ್ಸ್‌ ಮುಖ ನೋಡಿಲ್ಲ, ಓಡಾಡಂಗಿಲ್ಲ ಸರ್‌, ಇದ್ಯಾಕೋ ಸರಿ ಇಲ್ಲ… 😞   ಈ ಆನ್‌ಲೈನ್‌ ಕ್ಲಾಸ್‌ ನಮ್ಗಂತೂ ಆಗಲ್ಲ ಡೇಟಾಗೆ ದುಡ್ಡಿಲ್ಲ, ಮನೇಲಿ ಕೇಳಂಗಿಲ್ಲ ನೀವಾದ್ರೂ ಅರ್ಥ ಮಾಡ್ಕೋಳಿ ಇದನ್ನೆಲ್ಲಾ ಸರ್‌, ಇದ್ಯಾಕೋ ಸರಿ ಇಲ್ಲ… 😞   ಡಿಗ್ರಿ ಆಗ್ತಿಲ್ಲ, ಅಪ್ಪನ್‌ ಕಷ್ಟ ನೋಡಾಕಾಗಲ್ಲ ದುಡೀತೀನಿ ಅಂದ್ರೆ ಕೆಲ್ಸಾನೂ ಸಿಗ್ತಿಲ್ಲ ಓದೋ ತಂಗೀಗು ಮದ್ವೆ ಮಾಡ್ಬಿಟ್ರಲ್ಲಾ ಸರ್‌, ಇದ್ಯಾಕೋ ಸರಿ ಇಲ್ಲ… 😞 ಕೊರೋನಾ ನಮ್ಗೆ ಬೇಕಿರ್ಲಿಲ್ಲ… -ಜಿಪಿ  ವಿಶ...

ಭರವಸೆಯಿರಲಿ…ಬದುಕು ಅದೆಷ್ಟು ಸುಂದರ

ಇಮೇಜ್
  (Courtesy:  yourhappyplaceblog.com)  ಆಚೆಯಿಂದ ಅಮ್ಮ ಮಾತನಾಡುತ್ತಿದ್ದಳು. ಈ ಬಾರಿ ಮಳೆಯೇ ನಿಲ್ಲುತ್ತಿಲ್ಲ. ಕಾಫಿ ತೋಟದಲ್ಲಿ ಒಂದು ಒಣ ಎಲೆಯೂ ಕಾಣುತ್ತಿಲ್ಲ. ಎಲ್ಲೆಲ್ಲೂ ಹಚ್ಚಹಸಿರು. ಯಾರಿಗೂ ನೀರಿಲ್ಲದಾಗಿಲ್ಲ......ಆದರೆ ತೋಟಕ್ಕೆ ಕಾಲಿಡಲಾಗುತ್ತಿಲ್ಲ. ಕಳೆ ಮೊಣಕಾಲಷ್ಟು ಬೆಳೆದಿದೆ…ಹೀಗೆ... ಹೌದಲ್ಲಾ, ಈ ಬಾರಿ ಇನ್ನೂ ಮಳೆ ಬರುತ್ತಿದೆ. ದಿನಾ ಗುಡುಗು ಸಿಡಿಲು ಜೊತೆಗೆ ಮಳೆಯ ಸಿಂಚನ. ಇದೆಂಥಾ ಬೇಸಗೆ ಎನ್ನುವಷ್ಟು. ಮಳೆ ಮೋಡ ಕವಿದಿದೆ. ಕತ್ತಲು ಆವರಿಸಿದೆ, ಕಾಮನಬಿಲ್ಲೂ ಕಾಣದಷ್ಟು. ಹೌದು, ಕಾಲವಂತೂ ಬದಲಾಗಿದೆ. ಕಳೆಯೂ ಸಾಕಷ್ಟು ಬೆಳೆದಿದೆ. ಹೇಗಪ್ಪಾ ನಿವಾರಿಸುವುದು ಎಂಬಷ್ಟು. ಆದರೆ ನಿವಾರಿಸಲೇಬೇಕಲ್ಲಾ, ಕಳೆಯೇ ಬೆಳೆಯ ಮೀರಬಾರದಲ್ಲಾ… ಕೊರೋನಾ…ಇದ್ಯಾಕೆ ಬಂತು?! ಮುಖಕ್ಕೆ ಮುಂಡಾಸು ತೊಟ್ಟುಕೊಂಡು ತಿರುಗುವುದು, ಹತ್ತಿರದವರಾದರೂ ದೂರ ಕಾಯ್ದುಕೊಳ್ಳುವುದು, ಆಗೀಗ ಕೈ ಉಜ್ಜುಜ್ಜಿ ತೊಳೆಯುವುದು, ಯಾರನ್ನು ನೋಡಿದರೂ ಅನುಮಾನ, ಬೇಟಿಯಿಲ್ಲ, ಮಾತಿಲ್ಲ-ಕಥೆಯಿಲ್ಲ… ಎರಡ್ಮೂರು ವರ್ಷ ಹಳೆಯ ಗ್ರೂಪ್‌ ಫೋಟೋಗಳನ್ನು ಆಸೆಗಣ್ಣಿನಿಂದ ನೋಡುವುದು. ಎಫ್‌ಬಿಗೆ, ವಾಟ್ಸಪ್‌ಗೆ ಅಪ್ಲೋಡು ಮಾಡುವುದು…ಇದೆಂಥಾ ತಮಾಷೆ! ಯಾವ ತಪ್ಪಿಗೆ ಈ ನೋವು. ಹೆತ್ತ ಮಕ್ಕಳನ್ನು ಕಳೆದುಕೊಂಡು ಗೋಳಾಡುವ ತಾಯಿ, ಅಪ್ಪ- ಅಮ್ಮನನ್ನು ಕಳೆದುಕೊಂಡರೂ ʼ ಅವರಿನ್ನೂ ಬರುತ್ತಾರೆ ʼ ಎಂದು ಗೊಡ್ಡು ಭರವಸೆಯಲ್ಲಿರುವ ಮಗು, ಪತಿಯ ಹೆಣಕ್...