ಮರೆಯಬೇಡ ಮಗಳೇ…
ಮಗಳೇ ಮರೆಯಬೇಡ… ಎಂದಿಗೂ ಮರೆಯಬೇಡ. ನಿನ್ನ ಬರುವಿಕೆಯಲ್ಲಿ ಅದೆಷ್ಟು ಖುಷಿ ಕಂಡಿದ್ದೇನೆ ಎಂದು ಬರೆದು ತೋರಿಸಲಾರೆ, ನಿನ್ನ ʼ ಮಗಳೇ ʼ ಎಂದು ಕರೆದೇ ನಾ ಪಡುವ ಸಂತಸ ಸಾಗರದಷ್ಟು. ಸಂಭ್ರಮ ಪಟ್ಟಿದ್ದೇನೆ ಎಣೆಯಿಲ್ಲದಷ್ಟು. ಅಸೂಯೆ ಪಡುವಷ್ಟು… ಆ ನಿನ್ನ ಮೊದಲ ಅಳು ನನ್ನಲ್ಲಿ ನಗು ಮೂಡಿಸಿದ್ದು ಸತ್ಯ. ʼ ನಿಮಗೆ ಮಗಳು ಹುಟ್ಟಿದ್ದಾಳೆ ʼ ಎಂದ ವೈದ್ಯರು, ಆಗ ನನಗಾದ ರೋಮಾಂಚನ, ಆ ಖುಷಿಯನ್ನು ಹಂಚಿಕೊಳ್ಳಲೂ ಬರದೇ ಪರದಾಡಿ ಕಣ್ಣೀರಾದ ಕ್ಷಣ. ಎಂದಿಗೂ ಮರೆಯಾರೆ. ನೀನು ನಿನ್ನಮ್ಮನ ಜೊತೆಗೆ ನನಗೂ ಹೊಸ ಜೀವ ನೀಡಿರುವೆ… ಮಗಳೇ, ಮರೆಯಬೇಡ. ಅದೆಷ್ಟು ಮಂದಿ ಕೇಳಿದರು, ʼ ಮಗಳು ಹೇಗಿದ್ದಾಳೆ ʼ ಎಂದು. ಖುಷಿಯಿಂದ ಬೀಗಿದ್ದೇನೇ ಹೊರತು ಬೇಸರವೇ ಆಗಲಿಲ್ಲವಲ್ಲಾ… ʼ ನಿನ್ನ ಮಹಾರಾಣಿ ಹೇಗಿದ್ದಾಳೆ ʼ ಎಂದಾಗಲಂತೂ ಕೆಲ ಕ್ಷಣ ನಾನೇ ಮಹಾರಾಜನಾಗಿರುತ್ತಿದ್ದೆ! ನಿನ್ನಣ್ಣನ ಮೇಲಿನ ಪ್ರೀತಿ ಬೆಟ್ಟದಷ್ಟಾದರೂ ನಿನಗೇನೂ ಕಡಿಮೆಯಿಲ್ಲ ಮಗಳೇ…ಅದಕ್ಕಿಂತಲೂ ತುಸು ಹೆಚ್ಚೇ ಪಾಲು ನಿನಗೆ! ಅದೇನೇ ಬೇಸರ, ನೋವು, ಒತ್ತಡ…ನಿನ್ನ ಕಂಡಾಕ್ಷಣ ಮರೆಯಾಗುತ್ತದೆ ಮಂಜಿನಂತೆ. ನಿನ್ನ ಪ್ರತಿ ನೋಟ, ಆಟ, ಕಾಟವೂ ಅದೆಷ್ಟು ಚೆಂದ. ಜೀವನದಲ್ಲಿ ಅದೆಂತದ್ದೋ ಹುರುಪು. ನೆನಪಿದೆ ನನಗೆ…ಅದೆಷ್ಟು ಜವಾಬ್ದಾರಿಗಳು ನನಗೆ. ನಾ ಮಾಡಬಲ್ಲೆ. ಪ್ರೀತಿಯಂತೂ ಕೊಡಬಲ್ಲೆ ಪ್ರಾಣದಷ್ಟು. ನೆನಪಿರಲಿ ಮಗಳೇ… ʼ ಮಹಾರಾಣಿಯಂತೆ ಬಾಳು ʼ… ಹೌದು ನನಗೂ ಹಾಗೇ ಅನಿಸುತ್ತಿದೆ. ಜೀವನ...