ಕನಸಿಗೊಂದು ರೆಕ್ಕೆ ಬಂದಿದೆ….
ಆ ಇಳಿವಯಸ್ಸಿನ ತಾಯಿಗೆ ಮಗಳು ಅದ್ಭುತವಾದ ಉಡುಗೊರೆ ನೀಡಿದ್ದಳು. ತಾನು ಆಸೆಪಟ್ಟರೂ ಸಾಧಿಲಾಗದ್ದನ್ನು ಮಗಳು ಸಾಧಿಸಿ ತೋರಿಸಿದ್ದಳು. 38 ನೆಯ ಘಟಿಕೋತ್ಸವಕ್ಕೆಂದು ಶ್ವೇತ ವರ್ಣ ದಲ್ಲಿ ಚಂದವಾಗಿ ಸಿಂಗರಿಸಿಕೊಂಡಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಾ ಸಭಾಂಗಣದ ಎದುರು ದೈಹಿಕ ಶಿಕ್ಷಣ ಸ್ನಾತಕೋತ್ತರ ಪದವಿಯಲ್ಲಿ ಮೊದಲ ರ‍್ಯಾಂಕ್ ಪಡೆದ ಆ ಸಾಧಕಿ ಮಗಳು ರಮ್ಯಾ ತಾಯಿ ಮತ್ತು ಅಕ್ಕನ ಜೊತೆ ಹೆಮ್ಮೆಯಿಂದ ಬೀಗುತ್ತಿದ್ದರು. ಪುತ್ತೂರಿನ ಗ್ರಾಮವೊಂದರಿಂದ ದೇರಣ್ಣ ನಾಯಕ್- ಪಾರ್ವ ತಿ ದಂಪತಿಯ ಮಗ ಳು ರಮ್ಯಾಗೆ ಈ ಸಂತೋಷವೇನೂ ಸುಲಭವಾಗಿ ದಕ್ಕಿಲ್ಲ. ಅವರ ತಾಯಿಗೆ ತಮ್ಮ ಮಕ್ಕಳಾದ ರಮ್ಯಾ , ಸೌಮ್ಯಾ (ಅಕ್ಕ) ಇಬ್ಬರನ್ನೂ ಚೆನ್ನಾಗಿ ಓದಿಸಬೇಕೆಂದುಕೊಂಡಿದ್ದರೂ ಕೂಲಿಯನ್ನೇ ಆಧರಿಸಿದ್ದ ಕುಟುಂಬದ ಆರ್ಥಿ ಕ ಪರಿಸ್ಥಿತಿ ಅದಕ್ಕೆ ಅವಕಾಶ ನೀಡಿರಲಿಲ್ಲ. ಹಿರಿಯವಳಾದ ಸೌಮ್ಯಾ ಉನ್ನತ ವಿದ್ಯಾಭ್ಯಾಸವನ್ನು ಕೈಬಿಡಬೇಕಾಯಿತು. ವಿವಾಹ ಜೀವನಕ್ಕೆ ಕಾಲಿಟ್ಟು , ಗ್ರಾಮೀಣ ವಾಚ ನಾ ಲಯವೊಂದರಲ್ಲಿ ಗ್ರಂಥಪಾಲಕಿಯಾಗಿ ಕೆಲಸ ಆರಂಭಿಸಿದ್ದರು. ಆದರೆ ಅವರ ಮುಂದಿದ್ದ ಗುರಿ , ತನಗಿಂತಲೂ ಚೂಟಿಯಾಗಿದ್ದ ತಂಗಿಯ ವಿದ್ಯಾಭ್ಯಾಸಕ್ಕೆ ನೆರವಾಗುವುದು. ಅದನ್ನವರು ಕೊನೆಗೂ ಸಾಧಿಸಿಬಿಟ್ಟರು. "ಅಕ್ಕ ನ ಲ್ಲದಿದ್ದರೆ ನಾನೀ ಸಾಧನೆ ಖಂಡಿತಾ ಮಾಡಲಾಗುತ್ತಿರಲಿಲ್ಲ ," ಎನ್ನುತ್ತಾರೆ ರಮ್ಯಾ. ರಮ್ಯಾ ಓದಿಗಿಂತಲೂ ಆಟ...