ನಾನು….ಆಗಿದ್ದೆ!

ನಾನು ಕೈಯೊಳ ಹೂವಾಗಿದ್ದೆ ಎಲ್ಲರ ಕನಸಿನ ಕೂಸಾಗಿದ್ದೆ , ಅದೆಷ್ಟೊ ಮುದ್ದಾದ ಹೆಸರು ಪಡೆದಿದ್ದೆ ಹೌದು…ನಾನು ಹಾಗಿದ್ದೆ! ಎಷ್ಟೊಂದು ಚೆಂದವಾಗಿದ್ದೆ ಕೆಂಪು ಅಂಗಿಯೊಳು ಕನಸ ಕಂಡಿದ್ದೆ ಹಾಡಿದ್ದೆ , ಆಡಿದ್ದೆ , ಎಲ್ಲರನು ಕಾಡಿದ್ದೆ ಹೌದು ಮೊದಮೊದಲು ಹಾಗಿದ್ದೆ! ಬೆಳೆದಿದ್ದೆ , ಮೊಳಕೆಯೊಳು ಒಂಚೂರು ಬಳಲಿದ್ದೆ ಕಾದಿದ್ದೆ , ಕತ್ತಲೊಳು ಕಣ್ಣೀರ ಸುರಿಸಿದ್ದೆ ಕಾಲದಲ್ಲಿ ಲೀನವಾಗಬೇಕೆಂದಿದ್ದೆ ಹೌದು ನಾನು ಹಾಗೂ ಇದ್ದೆ! ಅತ್ತರೂ , ಹುಚ್ಚು ಕನಸ ಕಂಡಿದ್ದೆ ಆದರೂ ಗೊತ್ತಿಲ್ಲದೇ ಖಾಲಿಯಾಗಿದ್ದೆ! ಏನೋ ಆಗಬೇಕೆಂದಿದ್ದೆ , ದಾರಿ ಹುಡುಕಿದ್ದೆ ಹೌದು ನಾನು ಆಗ ಹಾಗಿದ್ದೆ! ಹಾ…ನಾನು ನಗುವಿನರಸನಾಗಿದ್ದೆ ಹೇಗೆ ಬಂತೋ ಆ ನಗು ತಿಳಿಯದಾಗಿದ್ದೆ ಮುಗ್ಧನೋ , ಮೂರ್ಖನೋ ಆಗಿದ್ದೆ! ಹೌದು ನಾನು ಹೇಗೇಗೋ ಇದ್ದೆ! ಹೌದೌದು , ನಾನು ಅದೃಷ್ಟವಂತನಾಗಿದ್ದೆ ನಿಜಪ್ರೀತಿಯಲಿ ಗೆದ್ದಿದ್ದೆ , ನಲ್ಲೆಯನು , ಎಲ್ಲವನೂ ಪಡೆದಿದ್ದೆ ಎಷ್ಟೊಂದು ಅದೆಷ್ಟೊಂದು ಖುಷಿಯಾಗಿದ್ದೆ! ಬದುಕ ಬಲ್ಲವನಾಗಿದ್ದೆ… ಆದರೆ ತೂತು ಬಲೂನಿನಂತಿದ್ದೆ , ಎಷ್ಟೆಂದು ಗಾಳಿ ತುಂಬಿಸಲಿ ಊದಿದ್ದೆ , ಒಳಗೊಳಗೆ ಖಾಲಿಯಾಗುತ್ತಲೇ ಇದ್ದೆ ಹೌದು ನಾನು ಹಾಗಾದೆ! ಎಲ್ಲಾ ಉಳ್ಳವನಲ್ಲಾ ನಾನು , ಆಗಸಕೇ ಏರುತಲಿದ್ದೆ ಮರೆತಿದ್ದೆ , ಹೌದು ಮರೆತೇ ಹೋಗುತಲಿದ್ದೆ ಬಹಳ ದೂರ ಬಂದಿದ್ದೆ , ಆದರೆ ಒಬ್ಬನೇ ಸಾಗಲಾರಂಬಿಸಿದೆ ಹಾ , ಹೌದು ...