ಪೋಸ್ಟ್‌ಗಳು

ಜುಲೈ, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಎಮೋಜಿ : ಸಂಸ್ಕೃತಿಗಳಾಚೆಗೆ ಹೃದಯಗಳನ್ನು ಬೆಸೆಯುವ ಸಾರ್ವತ್ರಿಕ ಭಾಷೆ

ಇಮೇಜ್
ಪ್ರೀತಿ, ಕೋಪ, ಸಂತೋಷ, ದುಃಖ, ದ್ವೇಷ, ಅಸೂಯೆ… ಹೀಗೆ ಮನುಷ್ಯ ಜೀವನದಲ್ಲಿ ಈ ಭಾವನೆಗಳು ನಿರ್ವಹಿಸುವ ಪಾತ್ರ ತುಂಬಾ ದೊಡ್ಡದು. ವಿವಿಧ ಹಂತಗಳಲ್ಲಿ ಮನಸ್ಸಲ್ಲಿ ಮೂಡುವ ಭಾವನೆಗಳು ಮತ್ತು ಅದಕ್ಕೆ ನಾವು ಪ್ರತಿಕ್ರಿಯಿಸುವ ರೀತಿ ನಿರ್ಣಾಯಕವಾಗಿರುತ್ತದೆ. ನಮ್ಮಲ್ಲಿ ಹಲವರು ಭಾವನೆಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ವ್ಯಕ್ತಪಡಿಸುವ ವಿಧಾನ ಕಂಡುಕೊಂಡಿರುತ್ತೇವೆ. ನಗು- ಅಳು, ಮಾತು-ಮೌನ….ಹೀಗೆ. ಕೆಲವೊಮ್ಮೆ ಭಾವನೆಗಳನ್ನು ಹುದುಗಿಟ್ಟುಕೊಂಡು ಸಂಕಟಪಡುವುದೂ ಇದೆ!     ಈ ವೇಗದ ಡಿಜಿಟಲ್ ಯುಗದಲ್ಲಿ ಯಾವುದಕ್ಕೂ ಸಮಯ ಕಡಿಮೆ. ಭಾವನೆಗಳನ್ನು ವ್ಯಕ್ತಪಡಿಸುವುದು, ಅದಕ್ಕೆ ಸ್ಪಂದಿಸುವುದು ಎಲ್ಲವೂ ಅರ್ಜೆಂಟಾಗಿ ಆಗಬೇಕು! ಇನ್ನೊಂದು ಪ್ರಮುಖ ವಿಷಯವೆಂದರೆ ಜಗತ್ತೇ ಒಂದು ಹಳ್ಳಿಯಾಗುತ್ತಿರುವಾಗ, ನಮ್ಮ ಭಾವನೆ ಭಾಷೆ, ಗಡಿಗಳ ಮಿತಿಗಳನ್ನು ದಾಟಿ ಎಲ್ಲರಿಗೂ ಅರ್ಥವಾಗಬೇಕು. ಹೀಗಿರುವಾಗ , ಎರಡು ಚುಕ್ಕೆಗಳು ಮತ್ತು ಕೆಳಕ್ಕೆ ಬಾಗಿರುವ ಒಂದು ರೇಖೆ ಯಿರುವ ಸರಳ ಹಳದಿ ವೃತ್ತ ವೂ ಭಾವನೆಗಳನ್ನು ವ್ಯಕ್ತಪಡಿಸಬಲ್ಲದು. ಮಾತಿನಲ್ಲಿ ಹೇಳಲಾಗದ ಭಾವನೆಯನ್ನೂ ಕೂಡ… ಅದಕ್ಕಾಗಿ ಈ ಎಮೋಜಿಗಳಿಗೂ ಒಂದು ದಿನವಿದೆ. ಪ್ರತಿ ಜುಲೈ 17 ರಂದು , ವಿ ಶ್ವ ಎಮೋಜಿ ದಿನವನ್ನು ಆಚರಿಸ ಲಾಗುತ್ತದೆ.  ಮಾನವ ಸಂವಹನ ದಲ್ಲಿ ಹೊಸ ಕ್ರಾಂತಿ ಗೆ ಕಾರಣವಾದ ಈ ಕಿರು ಕಲಾಕೃತಿಗಳು ಭಾವನೆಗಳ ಸಾರ್ವತ್ರಿಕ ಭಾಷೆಯಾಗಿವೆ . ಉದಾಹರಣೆಗೆ, ಯಾವುದಾದರೂ...