ಪ್ರೇಮಿಗಳ ದಿನ ಫೆಬ್ರವರಿ 14 ಅಲ್ಲವೇ ಅಲ್ಲ!
ನಿಜವಾಗ್ಲೂ ಈ ವ್ಯಾಲೆಂಟೈನ್ಸ್ ಡೇ, ಅರ್ಥಾತ್ ಪ್ರೇಮಿಗಳ ದಿನ ಅಂದರೆ ಏನು, ಯಾಕೆ ಬಂತು, ಯಾವಾಗ್ಲಿಂದ ಬಂತು ಅನ್ನೋದರ ಬಗ್ಗೆ ಸಿಕ್ಕಾಪಟ್ಟೆ ಕನ್ಫ್ಯೂಷನ್‌ಇದೆ! ಆದ್ರೆ ನಂಗೆ ಮಾತ್ರ ಯಾವ ಕನ್ಫ್ಯೂಷನ್ನೂ ಇಲ್ಲ. ಫೆಬ್ರವರಿ 14 ಅಲ್ಲಲ್ಲ, ಫೆಬ್ರವರಿ 11 ಕ್ಕೆ ಬರೋ ನನ್ನ ʼಪ್ರೇಮಿಗಳ ದಿನʼಕ್ಕೆ ಕಾರಣವೂ ಇದೆ, ಅದರ ಹಿಂದೆ ಸಾಕಷ್ಟು ನೆನಪುಗಳೂ ಇವೆ! ಒಂದು 12 ವರ್ಷಗಳ ಹಿಂದೆ, ಅದು ಫೆಬ್ರವರಿ 11 ನೇ ತಾರೀಖು. ಮಂಗಳೂರಿನ ಕದ್ರಿಯ ಪಿಜಿಯಲ್ಲಿ ನನ್ನ ದಿನ ಯಾವತ್ತಿನಂತೇ ಆರಂಭವಾಗಿತ್ತು. ಅದೇ ತಿಂಡಿ, ಕೆಲಸ, ಊಟ, ಒಂದಷ್ಟು ಮಾತು ಮತ್ತು ಅದೇ ನಿರಾಸೆಯೊಂದಿಗೆ ದಿನ ಮುಗಿಯುತ್ತದೆ ಎಂದೇ ನಾನು ಭಾವಿಸಿದ್ದೆ. ಆದರೆ ಅದು ಇಳಿಸಂಜೆ 7.30- 8 ಗಂಟೆಯ ಹೊತ್ತಿರಬಹುದು. ಮೊಬೈಲ್‌ರಿಂಗಣಿಸಿತು. ಹೌದು ಅದು ಆಕೆಯ ಕರೆ. ನನಗದು ತುಂಬಾ ವಿಶೇಷ. ಆದರೆ ಮಾತು ಯಾಕೋ ಗಂಭೀರವಿತ್ತು. ದೃಢ ನಿರ್ಧಾರವೊಂದು ಮನಸ್ಸಿನಲ್ಲಿದೆ ಎಂಬುದನ್ನು ಮಾತೇ ಸೂಚಿಸುತ್ತಿತ್ತು. ನನಗೋ ಸೆಖೆಯಿಲ್ಲದಿದ್ದರೂ ಮೈ ಬೆವರಿದ ಅನುಭವ. ಏನೋ ಆತಂಕ. ಕಾರಣ ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ನಾನಾಕೆಗೆ ಪ್ರೇಮ ನಿವೇದನೆ ಮಾಡಿದ್ದೆ. ನನ್ನ ಮನಸ್ಸಿನ ನಿರ್ಧಾರವೇನೋ ಬಲವಾಗಿತ್ತು. ಆದರೆ ಹೇಳೋದು ಹೇಗೆ ಎಂಬುದು ತಿಳಿದಿರಲಿಲ್ಲ. ದಿನಾ ಭೇಟಿಯಾದರೂ, ಪುಕ್ಕಲನಂತೆ, ಸೈಬರ್‌ಸೆಂಟರ್‌ನಿಂದ ಇಷ್ಟುದ್ದದ ಇ-ಮೇಲ್‌ಒಂದನ್ನು ಗೊತ್ತಿದ್ದ ಇಂಗ್ಲಿಷ್‌ನಲ್ಲಿ ಕಳಿಸಿದ್ದೆ. ಅದು ನಿ...