ಪೋಸ್ಟ್‌ಗಳು

ಏಪ್ರಿಲ್, 2023 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮಿಡಿವ ಹೃದಯ ಜೊತೆಗಿರಲು ಬದುಕು ಬಲು ಸುಂದರ…

ಇಮೇಜ್
        ನಿನ್ನನ್ನು ಪ್ರಿಯೆ ಎಂದರೆ ಸಾಕೇ… ನನ್ನವಳು ಎಂದರೆ ಸ್ವಾರ್ಥವಾದೀತೇ? ಹಾಗೊಂದು ಯೋಚನೆ ಮನಸ್ಸಿಗೆ ಬರಲು ಕಾರಣವಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ ನೀನು ನನ್ನನ್ನು ಆವರಿಸಿಕೊಂಡಿರುವ ರೀತಿ, ಪಾತ್ರ ಬದಲಾದರೂ ನಮ್ಮ ಪ್ರೀತಿಗೆ ಎಲ್ಲೂ ಮಂಕು ಕವಿಯದಂತೆ ನೋಡಿಕೊಂಡಿರುವ ರೀತಿ ಒಮ್ಮೊಮ್ಮೆ ನನ್ನಲ್ಲಿ ವಿಸ್ಮಯ ಹುಟ್ಟಿಸುತ್ತದೆ!  ಅಷ್ಟಕ್ಕೂ ನಮ್ಮ ಈ ಮಧುರ ಬಂಧದ ಆರಂಭವೂ ಒಂದು ವಿಸ್ಮಯವೇ ಅಲ್ಲವೇ? ಎಲ್ಲೋ ಇದ್ದ ನಾನು, ಇನ್ನೆಲ್ಲೋ ಇದ್ದ ನಿನ್ನನ್ನು ಸಂಧಿಸುವಂತಾಗಿದ್ದು, ಅದು ಗೆಳೆತನವಾದದ್ದು, ನನಗೇ ಗೊತ್ತಿಲ್ಲದೆ ನನ್ನೊಳಗೆ ಪ್ರೀತಿಯಾಗಿ ಬೆಳದದ್ದು… ಕಾಡಿಸಿದ ನಂತರವಷ್ಟೇ ಅದನ್ನು ನೀನು ಒಪ್ಪಿಕೊಂಡದ್ದು ಇದನ್ನೆಲ್ಲಾ ನಾನು ಮರೆಯಲು ಸಾಧ್ಯವೇ? ಋಣಾನುಬಂಧ ಎಂದರೆ ಇದೇ ಇರಬೇಕು… ಹೌದು, ನಮ್ಮಿಬ್ಬರಿಗೂ ಇದು ಹೂವಿನ ಹಾಸಾಗಿರಲಿಲ್ಲ. ಮನುಷ್ಯ ಸಹಜ ಕಷ್ಟ – ನಷ್ಟಗಳು, ಅನಿರೀಕ್ಷಿತ ಆಘಾತಗಳು ನಮ್ಮನ್ನೂ ಬಿಟ್ಟಿಲ್ಲ. ಆದರೆ ಕಷ್ಟಗಳು ನಮ್ಮ ಸಂಬಂಧವನ್ನು ಗಟ್ಟಿಯಾಗಿಸಿವೆ. ಜೊತೆಯಾಗಿ ಇನ್ನಷ್ಟು ದೂರ ಸಾಗುವ ಭರವಸೆ ಮೂಡಿಸಿವೆ. ʼಪ್ರೀತಿʼ ಎಂಬ ಅಡಿಪಾಯದ ಮೇಲೆ ನಾವು ಬದುಕಿನ ಸೌಧವನ್ನು ಯಶಸ್ವಿಯಾಗಿ ಕಟ್ಟಿದ್ದೇವೆ. ಈ ಸೌಧ ಹಳತಾದೀತೇ ವಿನಃ ಎಂದೂ ಬೀಳಲಾರದು. ಏಕೆಂದರೆ ನಾವೀಗ ಜೊತೆಯಾಗಿ ಸಾಕಷ್ಟು ದೂರ ಕ್ರಮಿಸಿದ್ದೇವೆ.  ನಿಜಕ್ಕೂ ಈ ಹನ್ನೊಂದು ವರ್ಷಗಳಲ್ಲಿ ಬದುಕು ಬಹಳಷ್ಟು ಬದಲಾಗಿದೆ. ನಾನು ಬದ...