ಪೋಸ್ಟ್‌ಗಳು

ಡಿಸೆಂಬರ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ʼಗರುಡಗಮನ ವೃಷಭವಾಹನʼ- ಮಾಸ್ ಚಿತ್ರಕ್ಕೆ ಹೊಸ ವ್ಯಾಖ್ಯಾನ!

ಇಮೇಜ್
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್‌ ವಿ ರಾಜೇಂದ್ರಸಿಂಗ್‌ ಬಾಬು ಅವರು  ʼ ಭಾನುಪ್ರಭ ʼ ದಲ್ಲಿ ತಮ್ಮʼಗರುಡಗಮನನಿಗೆ ಮರುಳಾಗಿʼ ಲೇಖನದಲ್ಲಿ ʼ ಗರುಡಗಮನ ವೃಷಭವಾಹನʼ ಚಿತ್ರ ಹೇಗೆ ತಮ್ಮ ಚಲನಚಿತ್ರ ಎಂಬ ಕಲ್ಪನೆಯನ್ನೇ ಬದಲಿಸಿತು ಎಂಬುದನ್ನು ಉತ್ಪ್ರೇಕ್ಷೆಯಿಲ್ಲದೆ ವಿವರಿಸಿದ್ದಾರೆ. ಮೊದಲೇ ಚಿತ್ರದ ಬಗ್ಗೆ ಇದ್ದ ಕುತೂಹಲವನ್ನು ಅವರ ಲೇಖನ ಇಮ್ಮಡಿಗೊಳಿಸಿತು. ನಿರಾಶೆಯಾಗಲಿಲ್ಲ. ಖಂಡಿತವಾಗಿಯೂ ಚಲನಚಿತ್ರದ ಸಾಂಪ್ರದಾಯಿಕ ವ್ಯಾಖ್ಯಾನವನ್ನೇ ಈ ಚಲನಚಿತ್ರ ಬದಲಿಸಿದೆ. ತುಳು ನಟ- ನಿರ್ದೇಶಕರ, ತುಳು ಶಬ್ದ- ಸಂಭಾಷಣೆಗಳನ್ನು ಒಳಗೊಂಡ ಚಿತ್ರ ಕರಾವಳಿಯ ಹೊರಗೆ ಅದ್ಭುತ ಯಶಸ್ಸು ಸಾಧಿಸಿರುವುದು ಚಿತ್ರ ನಿರ್ದೇಶಕರು- ನಿರ್ಮಾಪಕರ ಲೆಕ್ಕಾಚಾರಗಳನ್ನೇ ಬದಲಿಸಿದೆ. ಇಲ್ಲಿ ಯಾರೂ ಸ್ಟಾರ್‌ ನಟರಿಲ್ಲ, ʼಐಟಂ ಸಾಂಗ್‌-ಡ್ಯಾನ್ಸ್ʼ ನಂತಹ ಮಸಾಲೆಗಳಿಲ್ಲ. ಅದಿರಲಿ ನಾಯಕ ನಟ-ನಾಯಕ ನಟಿ, ಹೀರೋ-ವಿಲನ್‌ ಎಂಬ ಚೌಕಟ್ಟನ್ನೇ ಮೀರಿ ತನ್ನದೇ ಹೊಸ ಪರಿಭಾಷೆಯಲ್ಲಿ ಚಿತ್ರ ಮೂಡಿಬಂದಿದೆ. ಅದಕ್ಕೂ ಮುಖ್ಯವಾಗಿ ಭಾಷೆ, ಪ್ರದೇಶಗಳ ಬೇಧವಿಲ್ಲದೆ ಚಲನಚಿತ್ರ ವೀಕ್ಷಕರು ಚಿತ್ರಕ್ಕೆ ಭೇಷ್‌ ಎಂದಿದ್ದಾರೆ. ಹಾಗೆ ನೋಡಿದರೆ ಈ ಚಿತ್ರ ಒಂದು ಅದ್ಭುತ ಸಾಹಸ. ತುಳುನಾಡಿದ ಮಂಗಳಾದೇವಿ ಎಂಬ ಪ್ರದೇಶ, ತುಳುಬಾಷೆ, ವೇಷಭೂಷಣ, ಸಂಸ್ಕೃತಿಯನ್ನು ಬಳಸಿಕೊಂಡ ಸ್ಟಾರ್‌ ನಟರಿಲ್ಲದೆ ಯಶಸ್ಸು ಪಡೆಯುವ ಇಂತಹ ಸಾಹಸವನ್ನು ಯಾರೂ ಮಾಡಿರಲಿಕ್ಕಿಲ್ಲವೇನೋ! ರಾಜ್‌ ಬಿ. ಶೆಟ್ಟಿ೦...