ಪೋಸ್ಟ್‌ಗಳು

ಆಗಸ್ಟ್, 2021 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸೋಲು ಗೆಲುವುಗಳ ಸಮರಸವೇ ಜೀವನ…

ಇಮೇಜ್
ಆತನಿನ್ನೂ 11 ವರ್ಷ ವಯಸ್ಸಿನ ಕನಸು ಕಂಗಳ ಹುಡುಗ. ತನ್ನ ಶ್ರೀಮಂತ ಸ್ನೇಹಿತನ ಮನೆಗೆ ಆಡಲೆಂದು ಹೋದಾಗ ಆ ಮನೆಯವರು ಈತನನ್ನು ಹೊರದಬ್ಬಿದ್ದರು , ಅದೂ ಕೇವಲ ಬಡವನ ಮಗ ಎಂಬ ಕಾರಣಕ್ಕಾಗಿ. ಆತ್ಮಾಭಿಮಾನವನ್ನು ಕೆಣಕಿದ ಘಟನೆಯಿಂದ ವಿಚಲಿತನಾದ ಹುಡುಗ ಆಗಲೇ ದೃಢನಿಶ್ಚಯ ಮಾಡಿಯಾಗಿತ್ತು. ನಾಗರಿಕ ಸೇವೆಯಲ್ಲಿ ದೇಶದಲ್ಲೇ ಅತ್ಯುನ್ನತ ಅರ್ಹತೆಯಾದ ಐಎಎಸ್‌ ಮಾಡಿಯೇ ತೀರುತ್ತೇನೆ ಎಂದು! ಆದರೇನಂತೆ , ರೇಷನ್‌ ಅಂಗಡಿಯಲ್ಲಿ   ದುಡಿದು , ರಿಕ್ಷಾ ಚಲಾಯಿಸಿ ಒಂದಷ್ಟು ಸಂಪಾದಿಸುತ್ತಿದ್ದ ಅಪ್ಪನ ಆರೋಗ್ಯ ಹದಗೆಟ್ಟಿತು. ಕಿವಿ ಕೇಳದಾಯಿತು , ಕಾಲಿನ ಗಾಯ ಸತಾಯಿಸಲಾರಂಭಿಸಿತು. ಕುಟುಂಬ ಆದಾಯಕ್ಕಾಗಿ ಈ ಯುವಕನ ಮುಖನ ಕಡೆ ನೆಟ್ಟಿತ್ತು. ಐಎಎಸ್‌ ಮಾಡಿ ನಾಗರಿಕ ಸೇವೆಗೆ ಸೇರಬೇಕೆಂಬ ಆತನ ಕನಸನ್ನು ಸಮಾಜ ಛೇಡಿಸಿತು. ಆದರೆ ಕುಟುಂಬ ಕೈ ಬಿಡಲಿಲ್ಲ. ಇದ್ದ ಆಸ್ತಿಯನ್ನೂ ಮಾರಿ ಹೆಚ್ಚಿನ ತರಬೇತಿಗೆ ಆತನನ್ನ    ದೆಹಲಿಗೆ ಕಳಿಸಿಕೊಟ್ಟಿತು. ಖಾಲಿ ಕೈಯಲ್ಲಿ ದೆಹಲಿ ಸೇರಿದ್ದ ಯುವಕ ಗಣಿತ    ಟ್ಯೂಷನ್‌ ಕೊಟ್ಟು ಒಂದಷ್ಟು ಸಂಪಾದನೆ ಮಾಡಲಾರಂಭಿಸಿದ. ಖಾಲಿ ಹೊಟ್ಟೆಯಲ್ಲೇ ಇರುವುದನ್ನು ರೂಢಿಸಿಕೊಂಡ. ಅಪ್ಪನ ಆರೋಗ್ಯ ಮತ್ತಷ್ಟು ಹದಗೆಟ್ಟಿತು , ರಿಕ್ಷಾ ಎಳೆಯುವುದು ಅಸಾಧ್ಯವಾಯಿತು. ಯುವಕನ ಮುಂದೆಯಿದ್ದದ್ದು ಒಂದೇ ಆಯ್ಕೆ. ಮೊದಲ ಪ್ರಯತ್ನದಲ್ಲೇ ಐಎಎಸ್‌ ಪಾಸ್‌ ಮಾಡಬೇಕು. ಇಲ್ಲವೇ ತನ್ನ ಕನಸನ್ನು ಕೈಬಿಟ್ಟು ಹಳ್ಳಿಗೆ ಮರಳಿ ಕುಟುಂಬಕ್...