ಆನ್‌ಲೈನ್ ಶಿಕ್ಷಣದಲ್ಲಿ ಆಫ್ ಆಗುವುದೇ ಹೆಚ್ಚು…!
(Picture courtesy- Zeenews) ಶಾಲೆಗೆ ಹೋಗುವ ಪುಟ್ಟ ಮಕ್ಕಳನ್ನೊಮ್ಮೆ ಗಮನಿಸಿ . ಅವುಗಳ ಪುಟಾಣಿ ಪ್ರಪಂಚದಲ್ಲಿ ಹೆತ್ತವರ ನಂತರದ ಸ್ಥಾನ ಇರುವುದು ಟೀಚರ್ ಗೆ . ನೀವೇನಾದರೂ ಟೀಚರ್ ಬಗ್ಗೆ ಹಗುರವಾಗಿ ಮಾತಾನಾಡಿದಿರೋ ಮಗುವಿನ ಪಾಲಿಗೆ ನೀವು ವಿಲನ್ ಆಗುವುದು ಗ್ಯಾರಂಟಿ ! ಇದಕ್ಕೆ ಕಾರಣ ತುಂಬಾ ಸರಳ , ಕಲಿಕೆ ಎಂಬುದು ಒಂದು ಯಾಂತ್ರಿಕ ಕ್ರಿಯೆಯಲ್ಲ . ಅದೊಂದು ಭಾವನಾತ್ಮಕ ಸಂಗತಿ . ಈ ಅನುಬಂಧ ನಿಲ್ಲುವುದಿಲ್ಲ . ಮಗು ಬೆಳೆದಂತೆ ತನ್ನ ಶಾಲೆಯನ್ನು , ಶಿಕ್ಷಕರನ್ನು ಹೆಚ್ಚಾಗಿ ಹಚ್ಚಿಕೊಂಡುಬಿಡುತ್ತದೆ . ಅವರನ್ನೇ ಮಾದರಿಯಾಗಿಸಿಕೊಂಡುಬಿಡುತ್ತದೆ . ನೋಡಿ ಕಲಿಯುವ ಮಕ್ಕಳ ಮೇಲೆ ಶಿಕ್ಷಕರು ಬೀರುವ ಪರಿಣಾಮ ದೊಡ್ಡ ಮಟ್ಟದಲ್ಲಿರುತ್ತದೆ . ಅದಕ್ಕಾಗಿಯೇ ಅಲ್ಲವೇ ಹೆತ್ತವರು ತಮ್ಮ ಮಗುವಿಗೆ ಒಳ್ಳೆಯ ಶಿಕ್ಷಕರು ಸಿಗಲಿ ಎಂದು ಬೇಡಿಕೊಳ್ಳುವುದು ! ಇದೇ ಕಾರಣಕ್ಕೆ ನಮ್ಮ ನೆನಪಿನ ಬುತ್ತಿ ತೆರೆದಾಗ ಅಲ್ಲಿ ಶಿಕ್ಷಕರಿಗೊಂದು ಮಹತ್ವದ ಸ್ಥಾನ ಇದ್ದೇ ಇರುತ್ತದೆ . ಶಿಕ್ಷಕರು ಹೇಳುವ - ಬರೆಯುವ ʼGood’ ಎಂಬ ನಾಲ್ಕಕ್ಷರದ ಪದ , ಅವರ ಒಂದು ನಗು , ಅವರು ಬೆನ್ನು ತಟ್ಟುವಾಗ - ಕೆನ್ನೆ ಹಿಂಡುವಾಗ ಆಗುವ ಸಂತೋಷ , ಬೈಗುಳದ ಪರಿಣಾಮ ಎರಡೂ ಅಪರಿಮಿತ . ಹಾಗಾಗಿಯೇ ನಮಗೆ ಅವರು ಕಲಿಸಿದ ಪಾಠಕ್ಕಿಂ...